ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ವಿಶ್ವನಾಥ್‌ರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇಕೆ?

By ಬಿ.ಎಂ.ಲವಕುಮಾರ್
|
Google Oneindia Kannada News

Recommended Video

ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಎಚ್ ವಿಶ್ವನಾಥ್ ನೇಮಕವಾಗಿದ್ಯಾಕೆ? | Oneindia Kannada

ಮೈಸೂರು, ಆಗಸ್ಟ್ 6: ತಮ್ಮ ಕುಟುಂಬದ ಸದಸ್ಯರಿಗಷ್ಟೆ ಸೀಮಿತವಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಇದೀಗ ಹಿರಿಯ ನಾಯಕ ಸಚಿವರಾಗಿ, ಸಂಸದರಾಗಿ ಕಾರ್ಯನಿರ್ವಹಿಸಿ ಅನುಭವವುಳ್ಳ ಹುಣಸೂರು ಹಾಲಿ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರಿಗೆ ನೀಡಲಾಗಿದೆ.

ಆ ಮೂಲಕ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಡುವ ಪ್ರಯತ್ನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಡಿದ್ದಾರೆ. ಇದು ಮುಂಬರುವ ಚುನಾವಣೆಗೆ ತಯಾರಿ ಎಂಬುದರಲ್ಲಿ ಎರಡು ಮಾತಿಲ್ಲ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ನೇಮಕಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ನೇಮಕ

ಕಾರಣ ಮೈತ್ರಿ ಸರ್ಕಾರದ ಸಂಪುಟದಲ್ಲಿ ಒಕ್ಕಲಿಗ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಇತರೆ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಈಗ ಕೇಳಿ ಬರುತ್ತಿರುವ ಕೂಗಿಗೆ ಉತ್ತರವೂ ಹೌದು.

ಜತೆಗೆ ಪ್ರಭಾವಿ ಕುರುಬನಾಯಕ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯುವ ಪ್ರಯತ್ನವೂ ಇದಾಗಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಸದ್ಯದ ಮಟ್ಟಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆಯಲ್ಲಿ ಸರ್ಕಾರ ನಡೆದುಕೊಂಡು ಹೋಗುತ್ತಿದೆ.

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿ

ಜೆಡಿಎಸ್ ನಾಯಕರು ಏನೇ ಮಾಡಿದರೂ ಮರು ಮಾತನಾಡದೆ ಕಾಂಗ್ರೆಸ್ ನಾಯಕರು ತಲೆಯಾಡಿಸುತ್ತಿದ್ದಾರೆ. ಇದು ಅನಿವಾರ್ಯವಾಗಿದ್ದರೂ ಹೀಗೆಯೇ ಮುಂದುವರೆಸಿದರೆ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯದಾಗಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ.

ಹೀಗಾಗಿ ಅವರು ಒಂದಷ್ಟು ದಾಳಗಳನ್ನು ಉರುಳಿಸುತ್ತಿದ್ದಾರೆ. ಅದರ ಪರಿಣಾಮಗಳು ಮೈತ್ರಿ ಸರ್ಕಾರದ ಮೇಲೆ ಬಿದ್ದರೆ ಸರ್ಕಾರ ಉರುಳುವುದಂತು ನಿಶ್ಚಿತ.

ಮುಂಬರುವ ಚುನಾವಣೆ ಮೇಲೆ ಕಣ್ಣು: ಸಿದ್ದರಾಮಯ್ಯಗೂ ಸೆಡ್ಡು

ಮುಂಬರುವ ಚುನಾವಣೆ ಮೇಲೆ ಕಣ್ಣು: ಸಿದ್ದರಾಮಯ್ಯಗೂ ಸೆಡ್ಡು

ಹೀಗಾಗಿ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ಯತ್ನವನ್ನು ಹೈಕಮಾಂಡ್ ಮೂಲಕ ಮಾಡಲಾಗಿದ್ದು, ಇನ್ನು ಅವರಿಗೆ ಸರಿಸಮಾನಾಗಿ ಅವರದೇ ಸಮುದಾಯದ ಮತ್ತು ಸಿದ್ದರಾಮಯ್ಯ ಅವರ ಕಡು ವಿರೋಧಿಯೂ ಆಗಿರುವ ಎಚ್.ವಿಶ್ವನಾಥ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮುಂದಿನ ಚುನಾವಣೆಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿದ್ದಾರೆ ಎನ್ನುವುದು ಗುಟ್ಟಾಗಿಯೇನು ಉಳಿದ ಿಲ್ಲ. ಆಗ ಗೌಡರು ಸೋಲಿಸಿದ್ದರು

ನಾಯಕರ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮುದಾಯನಾಯಕರ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮುದಾಯ

ಆಗ ಸೋಲಿಸಿದ್ದ ಗೌಡರೇ ಈ ಆಯ್ಕೆ ಮಾಡಿದರು

ಆಗ ಸೋಲಿಸಿದ್ದ ಗೌಡರೇ ಈ ಆಯ್ಕೆ ಮಾಡಿದರು

ಹಾಗೆನೋಡಿದರೆ ಎಚ್.ವಿಶ್ವನಾಥ್ ಅವರದು ಕಂಡದ್ದು ಕಂಡ ಹಾಗೆ ಹೇಳುವ ಸ್ವಭಾವ ಕಾಂಗ್ರೆಸ್‌ನಲ್ಲಿದ್ದಾಗ ದೇವೇಗೌಡರನ್ನು ವಾಚಾಮಗೋಚರವಾಗಿ ಟೀಕೆ ಮಾಡಿದ್ದರು. ಅದರ ಪರಿಣಾಮ 2014ರ ಲೋಕ ಸಭಾ ಚುನಾವಣೆಯಲ್ಲಿ ದೇವೇಗೌಡರು ತಮ್ಮ ಪಕ್ಷದಿಂದ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಅನುಕೂಲವಾಗುವಂತೆ ಮಾಡಿದರು. ಇದರಿಂದಾಗಿ ವಿಶ್ವನಾಥ್ ಸೋಲನ್ನಪ್ಪುಬಿಜೆಪಿತ ಪ್ರತಾಪ್ ಸಿಂಹ ಗೆಲುವನ್ನು ಕಾಣುವಂತಾಯಿತು.

ವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆ

ಕಾಂಗ್ರೆಸ್‌ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಹಳ್ಳಿ ಹಕ್ಕಿ

ಕಾಂಗ್ರೆಸ್‌ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಹಳ್ಳಿ ಹಕ್ಕಿ

ವಿಶ್ವನಾಥ್ ಅವರು ಸೋತ ಬಳಿಕ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸೊಪ್ಪು ಹಾಕಲಿಲ್ಲ. ಮನಸ್ಸು ಮಾಡಿದ್ದರೆ ಅವರಿಗೊಂದು ಹುದ್ದೆ ಕೊಡುವುದು ಕಷ್ಟವಾಗಿರಲಿಲ್ಲ. ತಮ್ಮ ಸಮುದಾಯದ ಮತ್ತೊಬ್ಬ ನಾಯಕ ಬಂದರೆ ತನಗೆಲ್ಲಿ ತೊಂದರೆಯಾಗುತ್ತದೆಯೋ ಎಂಬ ಲೆಕ್ಕಚಾರದಿಂದ ಸಿದ್ದರಾಮಯ್ಯ ದೂರವಿಟ್ಟರು. ಇದರಿಂದ ಮಾನಸಿಕವಾಗಿ ನೊಂದ ವಿಶ್ವನಾಥ್ ಅವರು ಕಾಂಗ್ರೆಸ್ ನಾಯಕರ ವಿರುದ್ಧವೇ ಹರಿಹಾಯ ತೊಡಗಿದರು. ಜೆಡಿಸ್‌ಗೆ ಹತ್ತಿರವಾದರು. ಸದ್ಯ ದೇವೇಗೌಡರ ಕೃಪೆಯಿಂದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಅವರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಅಲ್ಲಿಯೂ ಕಾಣದ ಕೈಗಳು ಕೆಲಸ ಮಾಡಿದ್ದು, ಅವರಿಗೆ ಅಂತಹ ಅವಕಾಶ ತಪ್ಪುವಂತಾಯಿತು.

ವಿಶ್ವನಾಥ್‌ ಪಕ್ಷದ ಮೇಲೆ ಹಿಡಿದ ಸಾಧಿಸುತ್ತಾರಾ?

ವಿಶ್ವನಾಥ್‌ ಪಕ್ಷದ ಮೇಲೆ ಹಿಡಿದ ಸಾಧಿಸುತ್ತಾರಾ?

ಪಕ್ಷದ ಮೇಲೆ ಹಿಡಿದ ಸಾಧಿಸುವರೇ ಹೊಸ ದಳಪತಿ ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುವ ವಿಶ್ವನಾಥ್ ಈಗ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಮುಂದಿನ ದಿನಗಳು ಅವರಿಗೆ ಸವಾಲಿನ ದಿನಗಳಾಗಿವೆ. ಹೀಗಿರುವಾಗ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವೂ ಇಲ್ಲದಿಲ್ಲ. ಇಷ್ಟಕ್ಕೂ ದೇವೇಗೌಡರ ಕುಟುಂಬದ ಮುಷ್ಠಿಯಲ್ಲಿರುವ ಪಕ್ಷದಲ್ಲಿ ವಿಶ್ವನಾಥ್ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯಾ? ಅಥವಾ ರಬ್ಬರ್ ಸ್ಟಾಂಪ್ ಆಗಿ ಉಳಿದು ಬಿಡುತ್ತಾರಾ ಹೀಗೆ ಹತ್ತಾರು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕಾಡುತ್ತಿದೆ. ಕಾದುನೋಡುವುದಷ್ಟೆ ನಮಗೆ ಉಳಿದಿರುವುದು.

English summary
JDS supremo H.D. Devegowda has choose former minister H. Vishwanath as state JDS president. Political experts have analysing this development as Devegowda eyeing on backward communities to support the party in upcoming parliament elections in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X