ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಘ್ನ ನಿವಾರಕ ಗಣಪನನ್ನು ಮನೆಗೆ ಕರೆತರುವ ಮುನ್ನ...

|
Google Oneindia Kannada News

ಮೈಸೂರು, ಆಗಸ್ಟ್ 30: ಗಣಪತಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ. ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಗಣಪನ ಮೂರ್ತಿಗಳು ರಾರಾಜಿಸುತ್ತಿವೆ. ಸಿಂಹಾಸನ, ನವಿಲು, ಹಂಸ, ಹಸು, ಕಮಲದ ಮೇಲೆ ಕುಳಿತಿರುವ, ವಿವಿಧ ಭಂಗಿಗಳಲ್ಲಿ ನಿಂತಿರುವ ಲಂಬೋದರರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.

ವಿಘ್ನ ನಿವಾರಕ ಗಣೇಶನಿಗೇ ಇನ್ಸೂರೆನ್ಸ್: ಕಲಿಯುಗ ಕಣ್ರೀ..ಕಲಿಯುಗವಿಘ್ನ ನಿವಾರಕ ಗಣೇಶನಿಗೇ ಇನ್ಸೂರೆನ್ಸ್: ಕಲಿಯುಗ ಕಣ್ರೀ..ಕಲಿಯುಗ

ಆಕರ್ಷಕವಾದ ಬಣ್ಣಗಳಿಂದ ತರಹೇವಾರಿಯಾಗಿ ಅಲಂಕರಿಸಲಾದ ಗಣಪನ ವಿಗ್ರಹಗಳು ಆರಾಧಕರನ್ನು ಕೈ ಬೀಸಿ ಕರೆಯುತ್ತಿವೆ. ನಗರದ ಹಲವೆಡೆ ನೆರೆಯ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಬೃಹತ್ ಪ್ರಮಾಣದ ಪಿಓಪಿ ಗಣಪತಿ ಮೂರ್ತಿಗಳು ಲಗ್ಗೆ ಇಡುತ್ತಿವೆ.

Which type of ideal should worship on Ganapathi pooja

ಆದರೆ ಪಿಒಪಿಯಿಂದ ತಯಾರಾದ ಗಣಪನ ವಿಗ್ರಹ ಹೆಚ್ಚು ಅಪಾಯಕಾರಿ. ಗಣೇಶನ ಮೂರ್ತಿಗೆ ಬಣ್ಣ ತುಂಬಲು ಅಪಾಯಕಾರಿ ರಾಸಾಯನಿಕ ಬಳಸುವುದು ಮಣ್ಣಿಗೆ ಹಾನಿಯುಂಟು ಮಾಡುತ್ತದೆ. ಪಿಒಪಿಯಲ್ಲಿರುವ ಕ್ಯಾಲ್ಸಿಯಂ ಸಲ್ಫೇಟ್ ಹಾಗೂ ರಾಸಾಯನಿಕ ಬಣ್ಣಗಳಲ್ಲಿರುವ ಪಾದರಸ, ಕ್ರೋಮಿಯಂ, ಸೀಸ, ಮೆಗ್ನೀಷಿಯಂ ಮುಂತಾದ ಭಾರಲೋಹದ ಅಂಶಗಳು ಪರಿಸರಕ್ಕೆ ಅಪಾಯಕಾರಿ. ಇಂತಹ ಮೂರ್ತಿಗಳನ್ನು ವಿಸರ್ಜನೆ ಮಾಡುವ ನೀರಿನಲ್ಲಿ ಕಬ್ಬಿಣದ ಅಂಶವು 10 ಪಟ್ಟುಗಳಷ್ಟು ಹಾಗೂ ತಾಮ್ರದ ಅಂಶ 200 ಪಟ್ಟುಗಳಷ್ಟು ಹೆಚ್ಚಾಗುತ್ತದೆ. ಹೀಗಾಗಿ ಪಿಒಪಿ ಗಣಪನನ್ನು ಬಳಸದಿರುವುದೇ ಉತ್ತಮ.

Which type of ideal should worship on Ganapathi pooja

ಬಣ್ಣಗಳಲ್ಲಿರುವ ಭಾರದ ಲೋಹಗಳು ಮನುಷ್ಯನ ದೇಹ ಸೇರಿದರೆ ಹಲವು ಕಾಯಿಲೆಗಳು ಬರುತ್ತವೆ. ಸೀಸದಿಂದ ನರವ್ಯೂಹಕ್ಕೆ ಹಾನಿ ಉಂಟಾಗುತ್ತದೆ. ಕ್ರೋಮಿಯಂನಿಂದ ಪಿತ್ತಕೋಶ ಹಾಗೂ ಮೂತ್ರಪಿಂಡಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆಗ್ನಿಷಿಯಂನಿಂದ ದೇಹದ ಸಂವೇದನಾ ವ್ಯವಸ್ಥೆ ಏರುಪೇರಾಗುತ್ತದೆ. ನಿಕ್ಕೆಲ್ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಭಾರಲೋಹಗಳಿಂದ ಜಲಚರ ಗಳಿಗೂ ಅಪಾಯವಾಗುತ್ತದೆ. ಮೀನು, ಏಡಿ ಮುಂತಾದ ಪ್ರಾಣಿಗಳನ್ನು ಸೇವಿಸಿದವರ ದೇಹಕ್ಕೂ ಕುತ್ತು ಉಂಟಾಗುತ್ತದೆ.

Which type of ideal should worship on Ganapathi pooja

ಹಾಗಾದರೆ ಯಾವ ತರಹದ ಗಣೇಶನನ್ನು ಬಳಸಿದರೆ ಒಳಿತು? ಸಾಂಪ್ರದಾಯಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಕೊಳ್ಳಿ. ನೀರಿನಲ್ಲಿ ಕರಗುವ, ವಿಷಯುಕ್ತವಲ್ಲದ, ಔಷಧ ಆಹಾರ ಪದಾರ್ಥಗಳಲ್ಲಿ ಉಪಯೊಗಿಸುವ ನೈಸರ್ಗಿಕ ಬಣ್ಣ ಬಳಿದ ಮೂರ್ತಿಗಳೇ ಉತ್ತಮ.

ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ

ಮೂರ್ತಿ ಪ್ರತಿಷ್ಠಾಪಿಸುವಾಗ, ವಿಸರ್ಜನೆ ವೇಳೆ ಧ್ವನಿವರ್ಧಕ, ಪಟಾಕಿಗಳ ಸಪ್ಪಳದಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚುತ್ತದೆ. ಪೂಜೆಗೆ ಪ್ಲಾಸ್ಟಿಕ್ ಹೂ, ವಸ್ತ್ರ, ಆಲಂಕಾರಿಕ ಸಾಮಗ್ರಿಗಳನ್ನು ಉಪಯೋಗಿಸದಿರುವುದೇ ಒಳಿತು. ಹೂಗಳು, ಪತ್ರೆ, ಅಕ್ಕಿಕಾಳು, ಹಣ್ಣು, ಪ್ರಸಾದ ಮುಂತಾದ ವಸ್ತುಗಳನ್ನು ಮೂರ್ತಿಯ ವಿಸರ್ಜನೆ ಜೊತೆಯೇ ಎಸೆಯಬೇಡಿ.

ಮೂರ್ತಿಗಳನ್ನು ಕರೆ, ಕಟ್ಟೆ, ನದಿಗಳಲ್ಲಿ ವಿಸರ್ಜಿಸದೇ ಮನೆಯಲ್ಲೇ ಒಂದು ಬಕೇಟ್‌ನಲ್ಲಿ ಮುಳುಗಿಸಿದರೆ ಸಾಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಗಣಪನನ್ನು ಮನೆಗೆ ಕರೆದುಕೊಳ್ಳಿ.

English summary
Ganapathi pooja is commence at August 2nd Monday. Here is the detail report that ideal should worship on Ganapathi pooja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X