Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ
Government Employees: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು (ಭಾನುವಾರ, ಮಾರ್ಚ್ 15) ರಾಜ್ಯದ ಸಾವಿರಾರು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಳೆಯ ಬಾಕಿ ಇರುವ ತುಟ್ಟಿಭತ್ಯೆ (DA) ಪಾವತಿಸುವುದಾಗಿ ಘೋಷಣೆ ಮಾಡಿದ್ದಾರೆ.
2009ರ ಆರ್‌ಒಪಿಎ ಅಡಿಯಲ್ಲಿ ಬಾಕಿ ಇರುವ ಡಿಎ ಹಣವನ್ನು ಮಾರ್ಚ್ ತಿಂಗಳಿನಿಂದಲೇ ನೌಕರರ ಖಾತೆಗೆ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಇನ್ನೂ ಕೆಲವೇ ಕ್ಷಣಗಳಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಈ ಘೋಷಣೆಗೂ ಕೆಲವೇ ಗಂಟೆಗಳ ಮೊದಲು ಮಮತಾ ಮಮತಾ ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಡಿಎ ಜೊತೆಗೆ, ಹಿಂದೂ ಅರ್ಚಕರು ಮತ್ತು ಮುಸ್ಲಿಂ ಮೌಲ್ವಿಗಳ ಮಾಸಿಕ ಗೌರವಧನವನ್ನು 500 ರೂಪಾಯಿಗಳಷ್ಟು ಹೆಚ್ಚಿಸಿ, ಒಟ್ಟು 2,000 ರೂಪಾಯಿಗೆ ಏರಿಸಲಾಗಿದೆ. ಶಿಕ್ಷಕರು, ಪಂಚಾಯತ್ ಮತ್ತು ಮುನ್ಸಿಪಲ್ ಸಿಬ್ಬಂದಿ ಸೇರಿದಂತೆ ಸುಮಾರು 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ.
ನೀತಿ ಸಂಹಿತೆ ಜಾರಿಗೂ ಮುನ್ನ ಮಮತಾ ಮಹತ್ವದ ಘೋಷಣೆ
ಇಂದು ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದ ಕ್ಷಣದಿಂದಲೇ ಈ ಎಲ್ಲಾ ರಾಜ್ಯಗಳಲ್ಲಿ 'ಮಾದರಿ ನೀತಿ ಸಂಹಿತೆ' ಜಾರಿಯಾಗುತ್ತದೆ. ಅಂದರೆ, ಇಂದಿನಿಂದ ಸರ್ಕಾರಗಳು ಯಾವುದೇ ಹೊಸ ಯೋಜನೆ ಅಥವಾ ಜನಪ್ರಿಯ ಘೋಷಣೆಗಳನ್ನು ಮಾಡುವಂತಿಲ್ಲ.
ನೀತಿ ಸಂಹಿತೆ ಜಾರಿಗೆ ಬರಲು ಕೆಲವೇ ಗಂಟೆಗಳಿರುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಪಾವತಿಸುವುದಾಗಿ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರ ಪುರೋಹಿತರು ಮತ್ತು ಮೌಲವಿಗಳು ಸಲ್ಲಿಸಿದ್ದ ಎಲ್ಲಾ ಹೊಸ ಅರ್ಜಿಗಳನ್ನು ಸರಿಯಾಗಿ ಅನುಮೋದಿಸಿದೆ. ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಂದು ಸಂಪ್ರದಾಯವನ್ನು ಮೌಲ್ಯೀಕರಿಸುವ ಮತ್ತು ಬಲಪಡಿಸುವ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ. ನಮ್ಮ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯ ರಕ್ಷಕರಿಗೆ ಅರ್ಹವಾದ ಮನ್ನಣೆ ಮತ್ತು ಬೆಂಬಲ ನೀಡುವುದು ನಮ್ಮ ಪ್ರಯತ್ನ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications