ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡಿಯೋ ರಿಲೀಸ್‌ನಿಂದ ನಮಗೆ ಯಾವ ಮುಜುಗರವೂ, ಹೆದರಿಕೆಯೂ ಆಗಿಲ್ಲ: ರಾಮ್ ದಾಸ್

|
Google Oneindia Kannada News

ಮೈಸೂರು, ಫೆಬ್ರವರಿ 9 : ನಮಗೆ ಅವರ ಆಡಿಯೋ ರಿಲೀಸ್ ಮಾಡಿದ್ದರಿಂದ ಯಾವ ಮುಜುಗರವೂ ಆಗಿಲ್ಲ ಎಂದು ಬಿಜೆಪಿ ಶಾಸಕ ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ‌ ರಾಮದಾಸ್, ಸಿಎಂ ಕುಮಾರಸ್ವಾಮಿ ಆಡಿಯೋ ರಿಲೀಸ್ ವಿಚಾರ, ಆ ಬಗ್ಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಾತ್ರ ಗೊತ್ತಿರೋದು. ಈ ಬಗ್ಗೆ ಸ್ಪೀಕರ್ ಅವರು ಸೋಮವಾರ ತನಿಖೆಗೆ ಆದೇಶ ಮಾಡುತ್ತೇನೆ ಎಂದು ಅಂತ ಹೇಳಿದ್ದಾರೆ. ಇದರಿಂದ ನಮಗೇನೂ‌ ಮುಜುಗರ ಆಗಿಲ್ಲ. ಈ ಕುರಿತು ಸದನದಲ್ಲಿ ಯಾವ ರೀತಿ ತೀರ್ಮಾನ ಆಗುತ್ತೋ ನೋಡುತ್ತೇನೆ ಎಂದರು.

ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ? ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ?

ಬಜೆಟ್ ಮಂಡನೆ ವೇಳೆ ಅಯವ್ಯಯದ ಪುಸ್ತಕ ನೀಡದಿರುವುದ್ದಕ್ಕೆ ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಬೇಕಾದ ಘೋಷಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. 10 ಇಂಜಿನಿರಿಂಗ್ ಕಾಲೇಜುಗಳನ್ನು ಮುಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇರುವ ಕಾಲೇಜುಗಳನ್ನು ಮುಚ್ಚಿ ಮತ್ತೊಂದು ವಿಶ್ವವಿದ್ಯಾನಿಲಯ ತೆರೆಯುವುದು ಯಾವ ನ್ಯಾಯ ? ಎಂದು ಪ್ರಶ್ನಿಸಿದರು.

We have no embarrassment or fear of the audio release

ಮೈಸೂರಿಗೆ ಬಜೆಟ್ ನಲ್ಲಿ ಏನು ಕೊಡುಗೆ ನೀಡಿಲ್ಲ. ಕಸ ವಿಲೇವಾರಿ ಮಾಡಲು ಹಣ ನೀಡಬೇಕೆಂದು ಮನವಿ ಮಾಡಿದ್ದೆವು. ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣಕ್ಕೆ ಪತ್ರ ಬರೆದಿದ್ದೆವು. ಇದರ ಬಗ್ಗೆ ನು ಯಾವುದೇ ಚಕಾರ ಎತ್ತಿಲ್ಲ. ಈ ಮೂಲಕ ಮೈಸೂರಿಗೆ ಈ ಬಜೆಟ್ ಶೂನ್ಯ ಕೊಡುಗೆ ನೀಡಿದೆ ಎಂದು ಟೀಕಿಸಿದರು.

ಮೈಸೂರಿನಿಂದ ದೇವೆಗೌಡರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಮೈಸೂರಿಗೆ ಏನು ಕೊಡುಗೆ ನೀಡಲಿಲ್ಲವೆಂದರೆ ಅವರು ಬರುವುದಿಲ್ಲ ಎಂದು ಅರ್ಥ. ವಾಜಪೇಯಿ ಆರೋಗ್ಯ ಶ್ರೀ , ಯಶಸ್ವಿನಿ, ರಾಜೀವ್ ಆರೋಗ್ಯ ಭಾಗ್ಯ, ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆ, ರಾಷ್ಟೀಯ ಬಾಲ್ಯ ಸ್ವಾಸ್ಥ್ಯ ಯೋಜನೆ ಎಲ್ಲವನ್ನೂ ರದ್ದು ಮಾಡಿದ್ದಿರಿ ಎಂದು ಕಿಡಿಕಾರಿದರು.

ಕನ್ನಡ ದಿನಪತ್ರಿಕೆಗಳು ಕಂಡಂತೆ ಕುಮಾರಸ್ವಾಮಿ ಬಜೆಟ್ ಕನ್ನಡ ದಿನಪತ್ರಿಕೆಗಳು ಕಂಡಂತೆ ಕುಮಾರಸ್ವಾಮಿ ಬಜೆಟ್

ಅಯುಷ್ಮಾನ್ ಭಾರತ್ ಯೋಜನೆಯನ್ನು ಅರೋಗ್ಯ ಕರ್ನಾಟಕ ಜೊತೆ ವಿಲೀನಗೊಳಿಸಿದ್ದೀರಿ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಯಾವುದೆ ಆಸ್ಪತ್ರೆಗೆ ಹೋಗಿ 5 ಲಕ್ಷದ ವರೆಗೆ ಚಿಕಿತ್ಸೆ ಪಡೆಯಬಹುದು. ಆದರೆ ಆಯುಷ್ಮಾನ್, ಅರೋಗ್ಯ ಕರ್ನಾಟಕ ಹಲವಾರು ನಿಬಂಧನೆಗೆ ಒಳಪಡಿಸಿದ್ದೀರಿ.

ಕುಮಾರಸ್ವಾಮಿ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ ಕುಮಾರಸ್ವಾಮಿ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ

ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡುತ್ತೀರಿ. ಆಸ್ಪತ್ರೆ ವೈದ್ಯರು ರೆಫರ್ ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಲು ಖಾಸಗಿಯರಿಗೆ ನೀಡಿದ್ದೀರಿ ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಆಯುಷ್ಮಾನ್ ಭಾರತ್ ಗೆ ನಿಬಂಧನೆಗಳನ್ನು ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಮುಂದಿನ‌ ದಿನಗಳಲ್ಲಿ ದಾವೆ ಹೂಡುತ್ತೇವೆ ಎಂದು ರಾಮದಾಸ್ ವಾಗ್ದಾಳಿ ನಡೆಸಿದರು.

English summary
BJP legislator Ramdas expressed outrage that their party did not have any embarrassment as he released his audio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X