2ನೇ ಬಾರಿ ಯುಪಿಎಸ್‌ಸಿ ಪಾಸ್ ಮಾಡಿದ ದೃಷ್ಟಿ ವಿಶೇಷಚೇತನೆ ಮೇಘನಾ
ಮೈಸೂರು, ಮೇ 30: ಸೋಮವಾರ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಆಯೋಗದ ನಾಗರೀಕ ಸೇವಾ ಪರೀಕ್ಷೆಯ 2021ರ ಸಾಲಿನ ಫಲಿತಾಂಶ ಪ್ರಟಕವಾಗಿದ್ದು , ಮೈಸೂರು ಮೂಲದ ದೃಷ್ಟಿ ವಿಶೇಷ ಚೇತನೆ ಕೆ. ಟಿ. ಮೇಘನಾ ಅವರು 425ನೇ ರ್‍ಯಾಂಕ್ ಪಡೆದಿದ್ದಾರೆ.
ಮೇಘನಾ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೂ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು 2ನೇ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಎರಡನೇ ಬಾರಿ ಯುಪಿಎಸ್‌ಯಲ್ಲಿ ಉತ್ತೀರ್ಣ; ಮೇಘನಾ 2020ನೇ ಸಾಲಿನಲ್ಲೂ 465ನೇ ರ್‍ಯಾಂಕ್ ಪಡೆದಿದ್ದರು. ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್‌ನಲ್ಲಿ ಕೆಎಎಸ್ ಪರೀಕ್ಷೆಯಲ್ಲೂ 11ನೇ ರ್‍ಯಾಂಕ್ ಪಡೆದು ಪಾಸಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ದೃಷ್ಟಿ ದೋಷವಿದ್ದರೂ ದೃಢಸಂಕಲ್ಪದಿಂದ ಸತತ ಎರಡನೇ ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿರುವ ಮೇಘನಾ ಜಾಬ್ ಆಕ್ಸೆಸ್ ವಿಥ್ ಸ್ಪೀಚ್ ಎಂಬ ಸಾಫ್ಟ್‌ವೇರ್ ಸಹಾಯದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದರು.

ಕರ್ನಾಟಕದಿಂದ 27 ಅಭ್ಯರ್ಥಿಗಳು ಉತ್ತೀರ್ಣ; ಯುಪಿಎಸ್‌ಸಿ ನಾಗರಿಕ ಸೇವೆಗಳ 2021ನೇ ಸಾಲಿನ ಫಲಿತಾಂಶದಲ್ಲಿ ಸೋಮವಾರ ಪ್ರಕಟಿಸಲಾಗಿದೆ. ಶೃತಿ ಶರ್ಮಾ ದೇಶಕ್ಕೆ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಅಂಕಿತಾ ಅಗರ್ ವಾಲ್ ದ್ವಿತೀಯ ಹಾಗೂ ಗಾಮಿನಿ ಸಿಂಗ್ಲಾ ತೃತೀಯ ರ್‍ಯಾಂಕ್ ಗಳಿಸಿದ್ದಾರೆ. ಕರ್ನಾಟಕದ ದಾವಣಗೆರೆಯ ಅವಿನಾಶ್ 31 ನೇ ರ್‍ಯಾಂಕ್ ಗಳಿಸುವ ಮೂಲಕ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದ ಕರ್ನಾಟಕ ವಿದ್ಯಾರ್ಥಿಗಳು
1.ಅವಿನಾಶ್ - 31
2. ಬೆನಕ ಪ್ರಸಾದ್ ಎನ್. ಜೆ.- 92
3. ನಿಖಿಲ್ ಬಸವರಾಜ ಪಟೀಲ್ -139
4. ವಿನಯ್ ಕುಮಾರ್ ಗಡ್ಗೆ - 151
5. ಚಿತ್‌ರಂಜನ್ ಎಸ್. -155
6. ಅಪೂರ್ವ ಬಾಸೂರು - 191
7. ಮನೋಜ್ ಆರ್. ಹೆಗ್ಡೆ - 213
8. ಮಂಜುನಾಥ್ ಆರ್. - 219
9. ರಾಜೇಶ್ ಪೊನ್ನಪ್ಪ ಎಂ.ಪಿ. - 222
10. ಕಲ್ಪಶ್ರೀ ಕೆ.ಆರ್. 291
11. ಹರ್ಷವರ್ಧನ್ ಬಿ.ಜೆ. - 318
12. ವಿನಯ್ ಕುಮಾರ್ ಡಿ.ಎಚ್. 352
13. ಎಂ.ಡಿ. ಕುಮರುದ್ದೀನ್ ಖಾನ್ - 414
14. ಮೇಘನಾ ಕೆ.ಟಿ.- 425,
15. ರವೀಂದ್ರನ್ ಬಿ.ಎನ್.- 455
16. ಸವಿತಾ ಗೋಟ್ಯಾಲ್ -479
17. ಮಹಮದ್ ಸಿದ್ದಕಿ ಷರೀಪ್ - 516,
18. ನಾಗರೋಜೆ, ಶುಭಂ ಭೂಸಹೇಬ್ 568
19. ಪ್ರಶಾಂತ್ ಕುಮಾರ್ ಬಿಓ - 641












Click it and Unblock the Notifications