ಮೈಸೂರಿನಲ್ಲಿದ್ದಾರೆ ತನ್ಮಯ್ ಮತ್ತು ಕೃಷ್ಣ ಮೋದಿ

ಮೈಸೂರು, ಮೇ 28 : ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಮೋದಿ ಪ್ರಮಾಣ ವಚನದ ದಿನ ಮೈಸೂರಿನಲ್ಲಿ ಜನಿಸಿದ ಎರಡು ಮಕ್ಕಳಿಗೆ ತಾಯಂದಿರು ನರೇಂದ್ರ ಮೋದಿ ಎಂದು ನಾಮಕರಣ ಮಾಡಿ, ಮೋದಿ ಪ್ರಧಾನಿಯಾದ ಸಂಭ್ರಮವನ್ನು ಆಚರಿಸಿದ್ದಾರೆ.

ಮಂಡ್ಯ ಜಿಲ್ಲೆ ಬೆಳಗೊಳ ಗ್ರಾಮದ ನಿವಾಸಿ ಮಧು ಕುಮಾರ್ ಪತ್ನಿ ಉಮಾ ಸೋಮವಾರ ಸಂಜೆ ಆರು ಗಂಟೆಗೆ ಸರಿಯಾಗಿ ಗಂಡು ಮಗುವಿಗೆ ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅದೇ ಹೊತ್ತಿನಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಮಗುವಿಗೆ ತನ್ಮಯ್ ಮೋದಿ ಎಂದು ಹೆಸರಿಟ್ಟಿದ್ದಾರೆ.

Narendra Modi

ಮಳವಳ್ಳಿ ನಿವಾಸಿಯಾಗಿರುವ ಕೇರಳ ಮೂಲದ ಕೃಷ್ಣ ಅವರ ಪತ್ನಿ ಶಾಲಿನಿ ಸಹ ತಮ್ಮ ಮಗುವಿಗೆ ನರೇಂದ್ರ ಕೃಷ್ಣ ಮೋದಿ ಎಂದು ಹೆಸರಿಟ್ಟಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಶಾಲಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಂದು ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಮಗುವಿಗೆ ಮೋದಿ ಎಂದು ಹೆಸರಿಡಲಾಗಿದೆ. [ಪ್ರಧಾನಿಯಾದ ಮೋದಿ ಬಿಜೆಪಿ, ಕಾರ್ಯಕರ್ತರ ಸಂಭ್ರಮ]

ಶಾಲಿನಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ನರ್ಸ್ "ನಾವು ಆಸ್ಪತ್ರೆಯಲ್ಲಿ ಮೋದಿ ಅವರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ" ಎಂದು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ಯಾರು ಎಂದು ತಿಳಿದಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೌದು ಎಂದು ಮಾತ್ರ ಶಾಲಿನಿ ಅವರು ಉತ್ತರ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರಿದಾದ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮೈಸೂರಿನ ಈ ತಾಯಂದಿರು ಮಾತ್ರ ಮಕ್ಕಳಿಗೆ ಮೋದಿ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ, ಸುನಾಮಿ ಬಂದಾಗ ಮಗುವಿಗೆ ಸುನಾಮಿ ಎಂದು ಹೆಸರಿಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ರಾಮದಾಸ್ ಸಾರಥ್ಯ : ಮಾಜಿ ಸಚಿವ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಇಬ್ಬರು ಮಕ್ಕಳಿಗೆ ಮೋದಿ ಪದ ಬಳಕೆಯ ಹೆಸರನ್ನು ನಾಮಕರಣ ಮಾಡಲಾಗಿದೆ. ಅಲ್ಲದೇ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ತಾವು ನೋಡಿಕೊಳ್ಳುತ್ತೇವೆ ಎಂದು ರಾಮದಾಸ್ ಮಗುವಿನ ಪೋಷಕರಿಗೆ ಪತ್ರದಲ್ಲಿ ಬರೆದುಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+