ಅಕ್ರಮವಾಗಿ ಎರಡು ತಲೆ ಹಾವು ಸಾಗಾಟ: ಇಬ್ಬರ ಬಂಧನ
ಮೈಸೂರು, ಫೆಬ್ರವರಿ 20: ಮೈಸೂರು ಸಮೀಪದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ಹೂಗ್ಯಂ ವಲಯದ ಶಾಂತನೂರು ಬಯಲು ಅರಣ್ಯದಲ್ಲಿ ಇಬ್ಬರು ಕಳ್ಳರು ಎರಡು ತಲೆ ಹಾವನ್ನು ಮಾರಾಟ ಮಾಡಲು ಹಿಡಿದಿದ್ದಾಗಲೇ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದಿದ್ದಾರೆ.
ಇಂದು ಬೆಳಿಗ್ಗೆ ಅರಣ್ಯ ಅಧಿಕಾರಿಗಳು ಬೀಟ್ ತಿರುಗುತ್ತಿರುವಾಗ ಅರಣ್ಯದೊಳಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರು. ಸಿಬ್ಬಂದಿಗಳು ಹತ್ತಿರ ಹೋಗಿ ವಿಚಾರಿಸಿದಾಗ ಚೀಲವೊಂದರಲ್ಲಿ ಎರಡು ತಲೆ ಹಾವು ಕಂಡು ಬಂದಿದೆ.
ಕೂಡಲೇ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವನ್ಯ ಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.













Click it and Unblock the Notifications