ರೈಲುಗಳಲ್ಲಿ ಟಿ.ವಿ ಇದೆ, ಆದರೆ ಪ್ರಯೋಜನ ಇಲ್ಲ...

ಮೈಸೂರು, ಮೇ 27: ಮೈಸೂರು- ಬೆಂಗಳೂರು ನಡುವೆ ರೈಲಿನಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಈ ಪ್ರಯಾಣದ ಅವಧಿಯಲ್ಲಿ ಜನರಿಗೆ ಮನೋರಂಜನೆ, ಹಾಗೆಯೇ ಕೆಲವು ಮಾಹಿತಿ ನೀಡುವ ಉದ್ದೇಶದಿಂದ ಪ್ರತಿನಿತ್ಯ ಸಂಚರಿಸುತ್ತಿರುವ ರೈಲು ಬೋಗಿಗಳಲ್ಲಿ ಟಿ.ವಿ ಪರದೆಗಳನ್ನು ಅಳವಡಿಸಲಾಗಿದೆ. ಆದರೆ ಈಗ ಅವು ಇದ್ದೂ ಇಲ್ಲದಂತಾಗಿವೆ. ಸುಮಾರು 2 ತಿಂಗಳಿನಿಂದ ಈ ಟಿ.ವಿಗಳು ನಿಷ್ಕ್ರಿಯವಾಗಿದ್ದು, ಪ್ರಯಾಣಿಕರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಮನರಂಜನೆ ಹಾಗೂ ಮಾಹಿತಿ ನೀಡುವ ಸಲುವಾಗಿ ಐದು ವರ್ಷಗಳಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೇಶದಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಆಯ್ದ ರೈಲುಗಳಲ್ಲಿ ಎಲ್‌ಸಿಡಿ ಟಿವಿ ಪರದೆಗಳನ್ನು ಹಾಕಲಾಗಿದೆ. ಆದರೆ, ಮೈಸೂರು- ಬೆಂಗಳೂರು ನಡುವೆ ಸಂಚರಿಸುತ್ತಿರುವ ರೈಲುಗಳಲ್ಲಿ ಮಾತ್ರ ಈ ಟಿ.ವಿಗಳು ಸದಾ ಕಾಲ ಬಂದ್ ಆಗಿರುತ್ತವೆ.

ಸಾಮಾನ್ಯವಾಗಿ ಇವುಗಳಲ್ಲಿ ಮನರಂಜನೆಗಾಗಿ ಸಿನಿಮಾ ಗೀತೆಗಳು, ಸಿನಿಮಾಗಳನ್ನು ಪ್ರದರ್ಶಿಸುವುದುಂಟು. ರೈಲು ಸಂಚರಿಸುವ ಅವಧಿಯಲ್ಲಿ ಇವುಗಳು ಕಾರ್ಯ ನಿರ್ವಹಿಸುತ್ತವೆ. ಕೇವಲ ಮನರಂಜನೆ ಅಲ್ಲದೇ, ಮಾಹಿತಿಗೂ ಈ ಪರದೆ ಬಳಕೆಯಾಗುತ್ತಿದೆ. ಅಂದರೆ, ರೈಲ್ವೆ ಇಲಾಖೆಯ ಸೌಲಭ್ಯಗಳು, ರೈಲುಗಳಲ್ಲಿ ಪ್ರಯಾಣಿಕರು ಕೈಗೊಳ್ಳಬೇಕಾಗಿರುವ ಎಚ್ಚರಿಕೆ, ಪ್ರಯಾಣಿಕರ ಜವಾಬ್ದಾರಿ ಹಾಗೂ ಹಕ್ಕುಗಳನ್ನು ಈ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಮೈಸೂರು- ಬೆಂಗಳೂರು ನಡುವಿನ ಚಾಮುಂಡಿ ಎಕ್ಸ್‌ ಪ್ರೆಸ್ ಹಾಗೂ ಟಿಪ್ಪು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಈ ಎಲ್‌ಇಡಿ ಟಿ.ವಿ.ಗಳನ್ನು ಅಳವಡಿಸಲಾಗಿದೆ.

TVs not working in Mysuru Bangalore rails since 2 months

ಒಂದು ಬೋಗಿಗೆ 2 ಟಿ.ವಿ.ಗಳಂತೆ ರೈಲೊಂದಕ್ಕೆ ಕನಿಷ್ಠ 36 ಟಿ.ವಿ.ಗಳಿವೆ. ಆದರೆ, ಇವುಗಳು ಕಾರ್ಯನಿರ್ವಹಿಸದೆ ಮೂಲ ಆಶಯಕ್ಕೆ ತೊಡಕಾಗಿದೆ. ಟಿ.ವಿ ಪರದೆಗಳಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದದ್ದು ನಮಗೆ ಅನುಕೂಲಕಾರಿಯಾಗಿತ್ತು. ಅಲ್ಲದೇ, ಇವುಗಳಿಂದ ಹೆಚ್ಚು ಅನುಕೂಲ ಪಡೆಯುತ್ತಿದ್ದದ್ದು ಅಂಧ ಪ್ರಯಾಣಿಕರು. ಅದರ ಮೂಲಕ ಅವರಿಗೆ ಮಾರ್ಗದರ್ಶನ ಸಿಕ್ಕಂತಾಗುತ್ತಿತ್ತು. ಆದರೆ, ಈಗ ಮಾಹಿತಿಯಿಂದಲೂ ವಿಮುಖವಾಗುವಂತಾಗಿದೆ ಎನ್ನುತ್ತಾರೆ ಪ್ರಯಾಣಿಕ ಸುನೀಲ್. ಆದಷ್ಟು ಬೇಗ ಈ ಟಿ.ವಿ.ಗಳು ಕಾರ್ಯ ನಿರ್ವಹಿಸುವಂತಾಗಲಿ ಎಂದುಕೊಳ್ಳುತ್ತಿದ್ದಾರೆ ನಿತ್ಯ ಪ್ರಯಾಣಿಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+