ಮೈಸೂರು ಅರಮನೆ ಆವರಣದಲ್ಲಿ ಗುಡಿ ಮೇಲುರುಳಿದ ಮರ

ಮೈಸೂರು, ಸೆ.16 : ಮೈಸೂರಿನ ಇತಿಹಾಸ ಪ್ರಸಿದ್ಧ ಕೋಟೆ ಮಾರಮ್ಮ ದೇವಾಲಯದ ಮೇಲೆ ಅರಳಿ ಮರವೊಂದು ಉರುಳಿಬಿದ್ದಿದ್ದು, ಕೆಲವು ಭಕ್ತಾದಿಗಳು ದೇವಾಲಯದ ವೊಳಗೆ ಸಿಲುಕಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಭಕ್ತರನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೈಸೂರು ಅರಮನೆ ಆವರಣದಲ್ಲಿರುವ ಅರಳಿ ಮರ ಅರಮನೆಗೆ ಹೊಂದಿಕೊಂಡಂತಿರುವ ಕೋಟೆ ಮಾರಮ್ಮ ದೇವಾಲಯದ ಮೇಲೆ ಮಂಗಳವಾರ ಮಧ್ಯಾಹ್ನ 2.50ರ ಸುಮಾರಿಗೆ ಉರುಳಿಬಿದ್ದಿದೆ. ಈ ಸಮಯದಲ್ಲಿ ಹಲವಾರು ಭಕ್ತರು ದೇವಾಲಯದಲ್ಲಿದ್ದರು. ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

maramma temple Mysore

ಘಟನೆಯಲ್ಲಿ ಐವರು ಭಕ್ತರು ಗಾಯಗೊಂಡಿದ್ದಾರೆ. ಎಲ್ಲರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ರಾಣಿ ಪ್ರಮೋದಾ ದೇವಿ ಅವರು ವಿಷಾದ ವ್ಯಕ್ತಪಡಿಸಿದ್ದು, ಅರಮನೆಯ ಸಿಬ್ಬಂದಿ ಮತ್ತು ವಾಹನವನ್ನು ರಕ್ಷಣಾ ಕಾರ್ಯಚರಣೆಗಾಗಿ ಕಳುಹಿಸಿಕೊಟ್ಟರು. ನಂತರ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. [ತುಮಕೂರು : ದೇವಾಲಯ ಸ್ಫೋಟಿಸಿದ ದುಷ್ಕರ್ಮಿಗಳು]

ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದರಿಂದ ದೇವಾಲಯದ ಆವರಣದಲ್ಲಿ ಶೆಡ್ ಸಹ ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿತ್ತು. ಮರದ ಬಿದ್ದಾಗ ಗಾಯಗೊಂಡಿದ್ದ ಸುಶೀಲಮ್ಮ (60) ಮತ್ತು ಶೈಲಜಾ (35) ಎಂಬ ಇಬ್ಬರು ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು 1 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+