ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ

ಮೈಸೂರು, ಜು. 2 : ಮೈಸೂರು ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಬುಧವಾರದಿಂದ ಅಮೃತ ಮತ್ತು ಶಿವ ಎಂಬ ಹುಲಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ಅಮೃತ ಎಂಬ ಹೆಣ್ಣು ಹುಲಿ ಮತ್ತು ಶಿವ ಎಂಬ ಗಂಡು ಹುಲಿಯನ್ನು ಬುಧವಾರ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಹೇಳಿದ್ದಾರೆ. ಹಲವು ದಿನಗಳಿಂದ ಬೋನಿನಲ್ಲಿದ್ದ ಇವುಗಳನ್ನು ಮಂಗಳವಾರ ಸಂಜೆ ಬೋನಿನಿಂದ ಹೊರಗೆ ಬಿಡಲಾಗಿದೆ.

Tiger

ಎರಡು ಹುಲಿಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಗೆ ಅಮೃತ ಎಂದು ಹೆಸರಿಡಲಾಗಿತ್ತು. ಸುಮಾರು ಒಂದು ವರ್ಷ ಈ ಹುಲಿ ಬೋನಿನಲ್ಲಿತ್ತು. ಈ ಹುಲಿಯ ಮುಂಗಾಲಿಗೆ ಗಾಯವಾಗಿದ್ದರಿಂದ ಇದನ್ನು ಇಷ್ಟು ದಿನ ಹೊರಗೆ ಬಿಟ್ಟಿರಲಿಲ್ಲ. [ರಜೆ ದಿನಗಳಲ್ಲಿ ಮೈಸೂರು ಮೃಗಾಲಯ ಸ್ವಲ್ಪ ದುಬಾರಿ]

ಇನ್ನು ಶಿವ ಎಂಬ ಹುಲಿ ಕರ್ನಾಟಕದ ಜನರಿಗೆ ಚಿರಪರಿಚಿತವಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯದಂಚಿನಲ್ಲಿ ಸೆರೆ ಸಿಕ್ಕ ಈ ಹುಲಿ ನರಭಕ್ಷಕ ಎಂಬ ಹಣೆ ಪಟ್ಟಿ ಹೊತ್ತುಕೊಂಡಿತ್ತು. ಶಿವನಿಗೂ ವಯಸ್ಸಾಗಿರುವುದರಿಂದ ಹೆಚ್ಚು ಕಾಲ ಅದನ್ನು ಆವರಣದಲ್ಲಿ ಬಿಡುವಂತಿಲ್ಲ ಎಂದು ಸಿಬ್ಬಂದಿಗಳು ಹೇಳಿದ್ದಾರೆ. [ಮೈಸೂರು ಮೃಗಾಲಯದ ವೆಬ್ ಸೈಟ್ ನೋಡಿ]

ನೀರಿನಲ್ಲಿ ಮಿಂದೆದ್ದ ಹುಲಿಗಳು : ಮಂಗಳವಾರ ಸಂಜೆ ಬೋನಿನ ಗೇಟ್ ತೆರೆಯುತ್ತಿದ್ದಂತೆ ಹೊರಗಡೆ ಬರಲು ಹೆದರಿದ ಹುಲಿಗಳು ಬೋನಿನಲ್ಲೇ ಸುತ್ತಾಡುತ್ತಿದ್ದವು. ನಂತರ ಹೊರಗೆ ಬಂದ ಅವುಗಳು ಆವರಣದಲ್ಲಿದ್ದ ನೀರಿನ ಕೊಳದಲ್ಲಿ ಮಿಂದೆದ್ದವು.

ಜೂ.19ರಂದು ಇಸ್ರೇಲ್ ನ ರಾಮತ್ ಗಾನ್ ಮೃಗಾಲಯದಿಂದ ತರಲಾದ ಎಳೆಯ ವಯಸ್ಸಿನ ನಾಲ್ಕು ಜೀಬ್ರಾಗಳನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು. [ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+