ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ

ಮೈಸೂರು, ಮೇ 22 : ಭಾರತೀಯ ರೈಲ್ವೆ ಜೂನ್ 1ರಿಂದ ದೇಶದಲ್ಲಿ ಕೆಲವು ಮಾರ್ಗದಲ್ಲಿ ರೈಲು ಸೇವೆ ಆರಂಭಿಸುವುದಾಗಿ ಹೇಳಿದೆ. ಈ ರೈಲುಗಳಿಗೆ ಟಿಕೆಟ್ ಬುಕ್ ಮಾಡಲು ಹಂತ-ಹಂತವಾಗಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

Recommended Video

      ರಂಜಾನ್,ಹೊಸ ಬಟ್ಟೆ ಯಾವ್ದೂ ಬೇಡ,ದೇಶಕ್ಕಾಗಿ ತ್ಯಾಗ ಮಾಡಿ ಎಂದ ಮುಸ್ಲಿಂ ಮುಖಂಡ | Oneindia Kannada

      ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೊದಲ ಹಂತದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ಕೌಂಟರ್‌ಗಳನ್ನು ಶುಕ್ರವಾರದಿಂದ ತೆರೆಯಲಾಗಿದೆ. ಜನರು ಈ ಕೌಂಟರ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ.

      ಜೂನ್ 1ರಿಂದ ಆರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿನ ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್, ಹಾಸನ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕೌಂಟರ್ ತೆರೆಯಲಾಗಿದೆ.

      Rail Service From June 1 Four Ticket Counter Opened

      ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸೇವೆ ರದ್ದಾದ ಕಾರಣ ಪ್ರಯಾಣಿಕರ ಮುಂಗಡ ಟಿಕೆಟ್ ಸಹ ರದ್ದು ಮಾಡಲಾಗಿದೆ. ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್ ಗಳಲ್ಲಿ ಮೇ 25ರಿಂದ ಪಡೆಯಬಹುದು.

      ಮುಂಗಡ ಟಿಕೆಟ್ ಬುಕ್ ಮಾಡಲು ಬರುವ ಪ್ರಯಾಣಿಕರು ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬುಕ್ಕಿಂಗ್ ಕೌಂಟರ್ ಸೇರಿದಂತೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಇಲಾಖೆ ಜೊತೆ ಸಹಕಾರ ನೀಡಬೇಕು ಎಂದು ರೈಲ್ವೆ ಮನವಿ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+