ಬಾಡಿಗೆಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ

ಮೈಸೂರು, ಆಗಸ್ಟ್ 19: ಮೈಸೂರು ನಗರದಲ್ಲಿ ತಮ್ಮ ಮನೆಗಳಲ್ಲೇ ವೇಶ್ಯಾವಾಟಿಕೆ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲಿದೆ. ಒಂದು ಕಡೆಯಿಂದ ಪೊಲೀಸರು ದಾಳಿ ಮಾಡಿ ಮುಚ್ಚಿಸುತ್ತಿದ್ದರೆ, ಮತ್ತೊಂದು ಕಡೆಯಿಂದ ಬಾಗಿಲು ತೆರೆದುಕೊಳ್ಳುತ್ತಿರುವುದು ಹೊಸ ಬೆಳವಣಿಗೆ.

ಲಾಡ್ಜ್, ರೆಸಾರ್ಟ್, ಹೋಟೆಲ್, ಯೋಗ ಕೇಂದ್ರ, ಬ್ಯೂಟಿಪಾರ್ಲರ್, ಮಸಾಜ್ ಸೆಂಟರ್ ಹೀಗೆ ಎಲ್ಲ ಕಡೆಗಳಲ್ಲಿಯೂ ವೇಶ್ಯಾವಾಟಿಕೆ ನಡೆಯುತ್ತಿದ್ದು, ಇವುಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವುದರಿಂದ ಕೆಲವು ಮಹಿಳೆಯರು ಹಾಗೂ ಪುರುಷರು ತಮ್ಮ ಮನೆಗಳಿಗೆ ದೂರದ ಊರುಗಳಿಂದ ಮಹಿಳೆಯರನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು ಇದೀಗ ಬಯಲಾಗುತ್ತಿದೆ.

ಇದೀಗ ನಗರದ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಶ್ವೇತಾ, ಹಾಸನದ ಪ್ರದೀಪ್, ಚಿಕ್ಕಮಗಳೂರು ಜಿಲ್ಲೆಯ ರಘುನಂದನ್ ಬಂಧಿತರಾಗಿದ್ದಾರೆ.

Three Arrested For Involving In Prostitution At Mysuru

ಇವರು ನಗರದ ಬೇರೆ ಬೇರೆ ಕಡೆ ಮನೆಗಳನ್ನು ಬಾಡಿಗೆಗೆ ಪಡೆದು ಬಳಿಕ ಹೊರ ಜಿಲ್ಲೆ ಅಥವಾ ರಾಜ್ಯದ ಮಹಿಳೆಯರನ್ನು ಮನೆಗೆ ಕರೆಸಿಕೊಂಡು ಅಲ್ಲಿಗೆ ಗಿರಾಕಿಗಳನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈಗಾಗಲೇ ಇವರು ಹಲವು ಬಾರಿ ಸಿಕ್ಕಿಬಿದ್ದರೂ ತಮ್ಮ ದಂಧೆಯನ್ನು ನಿಲ್ಲಿಸಿರಲಿಲ್ಲ.

ಗೋಕುಲಂನಲ್ಲಿ ಮನೆ ಪಡೆದು ಇವರು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದ್ದರಿಂದ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 14,070 ರೂ. ನಗದು 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ನಗರದ ಡಿ.ಸಿ.ಪಿ. ಮುತ್ತುರಾಜುರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+