ದಸರೆ ರಂಗೇರಿಸಲು ಸಜ್ಜು: ಈ ಬಾರಿ 'ಮನೆ ಮನೆಗೆ ಯೋಗ'

ಮೈಸೂರು, ಸೆಪ್ಟೆಂಬರ್. 28: ಪ್ರತಿ ವರುಷದಂತೆ ಈ ವರ್ಷವೂ ದಸರೆಯನ್ನು ರಂಗುಗೊಳಿಸಲು ಹೊಸತನ ರೂಪಿಸಲಾಗುತ್ತಿದೆ. ಈ ಬಾರಿ ಯೋಗ ದಸರಾ ಕಾರ್ಯಕ್ರಮದಲ್ಲಿ ಕೆಲವೊಂದು ಹೊಸತನ್ನು ತರಲು ಸಂಘಟಕರು ನಿರ್ಧರಿಸಿದ್ದು, ಈ ಬಾರಿ 'ಮನೆ ಮನೆಗೆ ಯೋಗ' ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಸಿದ್ದಾರೆ.

ನಗರದ ಪ್ರಮುಖ 10 ಉದ್ಯಾನಗಳನ್ನು ಗುರುತಿಸಿ ಅಲ್ಲಿ ಯೋಗ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಜನರನ್ನು ಯೋಗದ ಕಡೆಗೆ ಆಕರ್ಷಿಸಲು ಮತ್ತು ಅವರಿಗೆ ಯೋಗ ಕಲಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಡಳಿತವು ದಸರಾ ಅವಧಿಯಲ್ಲಿ ನಗರದ ವಿವಿಧ ಯೋಗ ಕೇಂದ್ರಗಳು ಮತ್ತು ಯೋಗ ಸಂಸ್ಥೆಗಳ ನೆರವಿನಿಂದ ಐದು ದಿನ ಈ ಕಾರ್ಯಕ್ರಮ ನಡೆಸಲಿದೆ. ಕುವೆಂಪುನಗರ, ಜೆ.ಪಿ.ನಗರ ಒಳಗೊಂಡಂತೆ ವಿವಿಧ ಭಾಗಗಳಲ್ಲಿರುವ ದೊಡ್ಡ ಪಾರ್ಕ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.

ಉತ್ಸವ ನಡೆಯಲಿರುವ ಆ 10 ಪಾರ್ಕ್‌ಗಳು ಯಾವುವು ಎಂಬುದು ಇನ್ನೂ ಅಂತಿಮವಾಗಿಲ್ಲ. ದಸರಾ ಯೋಗ ಸಮಿತಿ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ಕುರಿತು ಸಂಕ್ಷಿಪ್ತ ಲೇಖನ ಇಲ್ಲಿದೆ.

 ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮ

ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮ

ಕಳೆದ ಬಾರಿ ಅರಮನೆ ಆವರಣದಲ್ಲಿ ಮಾತ್ರ ಯೋಗ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಭಾಗಗಳ ಸಾವಿರಾರು ಯೋಗಾಸಕ್ತರು ಅರಮನೆ ಆವರಣದಲ್ಲಿ ಸೇರಿ ಯೋಗ ಪ್ರದರ್ಶನ ನೀಡಿದ್ದರು.

ಈ ಬಾರಿ ನಗರದ ವಿವಿಧ ಕಡೆಗಳಲ್ಲಿ ಯೋಗ ಉತ್ಸವ ನಡೆಯಲಿರುವುದರಿಂದ ಹೆಚ್ಚಿನ ಮಂದಿಗೆ ಪಾಲ್ಗೊಳ್ಳಲು ಅವಕಾಶ ಲಭಿಸುತ್ತದೆ. ಯೋಗ ಉತ್ಸವ ನಡೆಯುವ ಪಾರ್ಕ್‌ಗಳಲ್ಲಿ ಯೋಗ ಮಾರ್ಗದರ್ಶಕರು, ಯೋಗ ತರಬೇತುದಾರರು ನೆರವು ನೀಡಲಿದ್ದಾರೆ. ಐದು ದಿನವೂ ಬೆಳಗ್ಗಿನ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

 ಹೆಚ್ಚುತ್ತಿದೆ ಯೋಗಾಸಕ್ತರ ಸಂಖ್ಯೆ

ಹೆಚ್ಚುತ್ತಿದೆ ಯೋಗಾಸಕ್ತರ ಸಂಖ್ಯೆ

ಈ ಬಾರಿ ಯೋಗ ದಸರಾ ಅಕ್ಟೋಬರ್‌ 13 ಮತ್ತು 14ರಂದು ನಡೆಯುವ ಸಾಧ್ಯತೆಯಿದೆ. ಕಳೆದ ಬಾರಿಯಂತೆ ಈ ಸಲವೂ ರಾಜ್ಯಮಟ್ಟದ ಯೋಗ ಸ್ಪರ್ಧೆ ಇರಲಿದೆ. ಅರಮನೆ ಆವರಣದಲ್ಲೂ ಯೋಗ ಉತ್ಸವ ಇರಲಿದ್ದು, ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ಪ್ರದರ್ಶನ ನಡೆಯಲಿದೆ.

ಕಳೆದ 2-3 ವರ್ಷಗಳಿಂದ ಮೈಸೂರಿನಲ್ಲಿ ಯೋಗಾಸಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. 'ಯೋಗ ದಸರಾ' ಮೂಲಕ ಯೋಗವನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ಜಿಲ್ಲಾಡಳಿತದ ಉದ್ದೇಶ.

ಕಳೆದ ಬಾರಿ ಹಮ್ಮಿಕೊಂಡಿದ್ದ ಯೋಗ ನಡಿಗೆ ಕಾರ್ಯಕ್ರಮವನ್ನು ಈ ಬಾರಿ ಕೈಬಿಡುವ ಸಾಧ್ಯತೆಗಳಿವೆ. ಯೋಗ ನಡಿಗೆಯಲ್ಲಿ ನಗರದ ನಾಲ್ಕು ಭಾಗಗಳಿಂದ ಯೋಗಪಟುಗಳು ಬಂದು ಓವೆಲ್ ಮೈದಾನದಲ್ಲಿ ಸೇರಿದ್ದರು.

 ವಿಶೇಷ ಮಕ್ಕಳಿಗೆ ಅವಕಾಶ

ವಿಶೇಷ ಮಕ್ಕಳಿಗೆ ಅವಕಾಶ

ಈ ಬಾರಿ ಯೋಗ ಸ್ಪರ್ಧೆಯಲ್ಲಿ ಅಂಗವಿಕಲ ಮಕ್ಕಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ವಿಶೇಷ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆದಿದೆ.

ವಸ್ತುಪ್ರದರ್ಶನ ಮೈದಾನದಲ್ಲಿರುವ ಸಭಾಂಗಣದಲ್ಲಿ ವಿಶೇಷ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಯೋಗಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಲು ತೀರ್ಮಾನಿಸಲಾಗಿದೆ.

 ಯೋಗ ಚಾರಣ

ಯೋಗ ಚಾರಣ

ಈ ಬಾರಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮಗಳು ಇರಲಿವೆ. ಕಳೆದ ಬಾರಿ ಯೋಗಪಟುಗಳು ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವುದು ಮತ್ತು ಬೆಟ್ಟದ ಮೇಲಿನ ವೇದಿಕೆಯಲ್ಲಿ ದುರ್ಗಾ ನಮಸ್ಕಾರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯೋಗ ಚಾರಣದೊಂದಿಗೆ 'ಯೋಗ ದಸರಾ' ಕಾರ್ಯಕ್ರಮಕ್ಕೆ ತೆರೆಬಿದ್ದಿತ್ತು.

ಯೋಗ ಚಾರಣಕ್ಕೆ ಕಳೆದ ಬಾರಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಬಾರಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+