ಮೂರನೇ ಬಾರಿಗೂ ತುಂಬ ಕ್ಲೀನ್ ಎಂದು ಭೇಷ್ ಎನಿಸಿಕೊಂಡ ಮೈಸೂರು!

ಮೈಸೂರು, ಏಪ್ರಿಲ್ 28 : ಮೈಸೂರು ಮಹಾನಗರ ಪಾಲಿಕೆಯು ಮೈಸೂರು ಸ್ವಚ್ಛನಗರವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈಗಾಗಲೇ ಎರಡು ಬಾರಿ ಸ್ವಚ್ಛ ನಗರವೆಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಮೈಸೂರು ಪಾಲಿಕೆ ಇದೀಗ ಮೂರನೇ ಬಾರಿಗೂ ಕ್ಲೀನ್ ಸಿಟಿ ಎನಿಸಿಕೊಂಡಿದೆ.

ಮೈಸೂರು ಮಹಾನಗರಪಾಲಿಕೆಗೆ ಈ ಬಾರಿಯೂ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯನ್ನು ಸ್ವೀಕರಿಸಲು ಮೇ 4ರಂದು ಮಹಾನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಹಾಗೂ ಮೇಯರ್ ಎಂ.ಜೆ.ರವಿಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ.

ಅದಕ್ಕಾಗಿ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಲಿದ್ದಾರೆ. ಈ ಕುರಿತು ಆಯುಕ್ತರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.[ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

Third time mysuru entitled has clean city in India

ಆದರೆ, ಯಾವ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದು ರಹಸ್ಯವಾಗಿದ್ದರೂ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದು ನಂಬಲರ್ಹ ಮೂಲಗಳಿಂದ ಲಭಿಸಿದೆ.

ಒಟ್ಟಿನಲ್ಲಿ ಮೈಸೂರು ಮತ್ತೊಮ್ಮೆ ಜಗತ್ತಿನಾದ್ಯಂತ ಸ್ವಚ್ಛನಗರವೆಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+