ಮೈಸೂರಿನಲ್ಲಿ ಇಂದು ಒಂದೇ ದಿನ ಹತ್ತು ಕೊರೊನಾ ಪ್ರಕರಣ
ಮೈಸೂರು, ಏಪ್ರಿಲ್ 15: ಇಂದು ಒಂದೇ ದಿನ ಬರೊಬ್ಬರಿ ಹತ್ತು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ. ಮೈಸೂರಿಗೆ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಕಂಟಕವಾಗುವ ಲಕ್ಷಣ ಕಾಣಿಸುತ್ತಿವೆ.
ಕಳೆದ ಮೂರು ದಿನಗಳ ಹಿಂದೆ ಕೆಲವು ಕೊರೊನಾ ಸೋಂಕಿತರಿಗೆ ನೆಗಟಿವ್ ವರದಿ ಬಂದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಪ್ರಕರಣಗಳ ಸಂಖ್ಯೆ 45 ರಿಂದ 38 ಕ್ಕೆ ಇಳಿದಿತ್ತು.
ಆದರೆ ಇದೀಗ ಮತ್ತೆ ಕೊರೊನಾ ವೈರಸ್ ಸೋಂಕಿತರ ಏರುಗತಿ ದಾಖಲಿಸಿರುವುದು ಆರೋಗ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಇಂದು ಮೈಸೂರಿನಲ್ಲಿ ಒಟ್ಟು ಪತ್ತೆಯಾದ 10 ಪ್ರಕರಣಗಳಲ್ಲಿ 9 ಪ್ರಕರಣಗಳು ಜ್ಯುಬಿಲಿಯಂಟ್ ಕಾರ್ಖಾನೆಯ ಮೂಲದ್ದಾಗಿವೆ ಎಂಬುದು ಗಮನಾರ್ಹವಾಗಿದೆ.

ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿಕೆ ಆಗಿದ್ದು, ಕೊರೊನಾ ವೈರಸ್ ವಿಶೇಷಾಧಿಕಾರಿಯಾಗಿ ಹರ್ಷಗುಪ್ತ ಅವರು ಮೈಸೂರಿನಲ್ಲೇ ಮೊಕ್ಕಾಂ ಹೂಡಿ ಪರಿಶೀಲಿಸುತ್ತಿದ್ದಾರೆ.












Click it and Unblock the Notifications