ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವುಗಳ ಭಯದಿಂದ ಮುಕ್ತರಾಗಲು ಜೂನ್‌ 30ಕ್ಕೆ ಮೈಸೂರಿಗೆ ಬನ್ನಿ

By Manjunatha
|
Google Oneindia Kannada News

ಮೈಸೂರು, ಜೂನ್ 21: 'ಯಾವ ವಿಷಯದ ಬಗ್ಗೆ ಜ್ಞಾನವಿರುವುದಿಲ್ಲವೋ ಆ ವಿಷಯದ ಬಗ್ಗೆ ಹೆದರಿಕೆ ಸಾಮಾನ್ಯ' ಇದು ಯೋಗಿಯೊಬ್ಬನ ಮಾತು. ಇದು ಸತ್ಯವೂ ಹೌದು, ಈ ಮಾತಿಗೆ ಹಾವುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಹಾವಿನ ಬಗೆಗೆ ಮನುಷ್ಯನಿಗಿರುವ ಅಜ್ಞಾನದಿಂದಲೇ ಅವುಗಳ ಬಗ್ಗೆ ಹೆದರಿಕೆ ಹುಟ್ಟಿದೆ, ಮನುಷ್ಯನ ಹೆದರಿಕೆಯಿಂದಲೇ ಹಾವುಗಳಿಗೆ ಆಪತ್ತು ಹೆಚ್ಚಿದೆ. ಹಾಗಾಗಿ ಹಾವುಗಳ ಬಗ್ಗೆ ಜ್ಞಾನ ನೀಡಿ ಅವುಗಳ ಬಗ್ಗೆ ಭಯ ಹೋಗಲಾಡಿಸಲೆಂದು ಸಂಸ್ಥೆಯೊಂದು ಕಾರ್ಯ ಮಾಡುತ್ತಿದೆ ಅದುವೇ ಸ್ಟಾರ್ಮ್‌ (ಸೈಂಟಿಫಿಕ್ ಟ್ರೈನಿಂಗ್ ಆನ್ ರೆಪ್ಟೈಲ್ ಮ್ಯಾನೆಜ್‌ಮೆಂಟ್‌).

ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ

ಸ್ಟಾರ್ಮ್‌ ಸಂಸ್ಥೆ ಹಾವುಗಳ ಬಗ್ಗೆ ತಿಳುವಳಿಕೆ ನೀಡಲೆಂದೇ ಬಹಳ ಕಾಲದಿಂದ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಈಗ ಇದೇ ಸಂಸ್ಥೆಯು ಇದೇ ಉದ್ದೇಶಕ್ಕಾಗಿ ಮೈಸೂರಿನಲ್ಲಿ ತರಬೇತಿ ಶಿಬಿರ ಆಯೋಜಿಸಿದೆ. ಶಿಬಿರವು ಜೂನ್ 30 ಮತ್ತು ಜುಲೈ 1 ರಂದು ನಡೆಯಲಿದೆ.

STROM organizing a workshop in Mysuru about snakes

ತರಬೇತಿ ಶಿಬಿರದಲ್ಲಿ ವಿವಿಧ ಬಗೆಯ ಹಾವುಗಳ ವರ್ತನೆ, ಆಕಾರ, ಬಣ್ಣ, ಗುಣ, ವಾಸಸ್ಥಳ ಇನ್ನೂ ಹಲವು ಮಾಹಿತಿಗಳ ಜೊತೆಗೆ ಹಾವುಗಳ ರಕ್ಷಣೆ ಮಾಡುವ ಬಗ್ಗೆಯೂ ಕಲಿಸಿ ಕೊಡಲಾಗುತ್ತದೆ.

STROM organizing a workshop in Mysuru about snakes

ಉರಗ ರಕ್ಷಣೆಯಲ್ಲಿ ದಾಖಲೆ ನಿರ್ಮಿಸಿರುವ ಸ್ನೇಕ್ ಶಾಮ್ ಈ ತಂಡದ ಪ್ರಮಖ ಸಂಪನ್ಮೂಲ ವ್ಯ್ಕತಿಯಾಗಿದ್ದು ಸಾಕಷ್ಟು ಅನುಭವಿಗಳು, ವಿಷಯ ಪಂಡಿತರೂ ಇರುವ ಈ ತಂಡ ಈ ವರೆಗೆ 33000 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವುದು ಹೆಗ್ಗಳಿಕೆ.

English summary
STROM organizing a workshop on June 30 and july 1 in mysuru to give information about snakes. STROM already rescued nearly 33000 snakes and it has been giving training about rescuing the snakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X