ಮೈಸೂರು: ಕೆ.ಆರ್‌ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಗಳ ಪ್ರತಿಭಟನೆ

ಮೈಸೂರು, ಜುಲೈ 6: ಮೈಸೂರು ನಗರದ ಕೆ.ಆರ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್‌ಗಳಿಗೆ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯ, ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ನರ್ಸ್‌ ಗಳು ಇಂದು ಪ್ರತಿಭಟನೆ ನಡೆಸಿದರು.

ಕೆ.ಆರ್‌ ಆಸ್ಪತ್ರೆಯಲ್ಲಿ 150 ಸ್ಟಾಫ್ ನರ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಶಂಕಿತ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೂ ಕ್ವಾರಂಟೈನ್ ಗೆ ಅವಕಾಶ ಇಲ್ಲವಾಗಿದೆ. ಕ್ವಾರಂಟೈನ್ ಗೂ ಅವಕಾಶ ನೀಡಿದೆ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೇ ಆಡಳಿತ ಮಂಡಳಿ ಕೇವಲ 10 ಸಾವಿರ ರೂ. ವೇತನ ನೀಡಿ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

Mysuru: Staff Nurses Protest At KR Hospital

ಯಾವುದೇ ಜೀವ ವಿಮೆ ಇಲ್ಲದಂತಾಗಿದೆ. ಕೂಡಲೇ ಶಿಷ್ಯ ವೇತನ ನೀಡಬೇಕು, ಸ್ಟಾಫ್ ನರ್ಸ್‌ಗಳನ್ನು ಖಾಯಂ ಗೊಳಿಸಬೇಕು. ಖಾಯಂ ನರ್ಸ್‌ಗಳಿಗಿರುವ ಸೌಲಭ್ಯಗಳನ್ನು ನೀಡಬೇಕು. ಕೋವಿಡ್ ಸಂದರ್ಭಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಶಿಷ್ಯವೇತನ ಮತ್ತು ಸ್ಟಾಫ್ ನರ್ಸ್‌ಗಳಿಗೆ ಜೀವ ವಿಮೆ ಸೌಲಭ್ಯ ನೀಡುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+