ಮೈಸೂರಿನಲ್ಲಿ ಅರ್ಬನ್ ಹಾತ್ ಮೇಳದಲ್ಲಿ ದಸರಾ ಕಲಾವೈಭವ

ಮೈಸೂರು, ಸೆಪ್ಟೆಂಬರ್ 25: ಸಾಮಾನ್ಯವಾಗಿ ಮೈಸೂರಿನ ಜೆಎಸ್ ‌ಎಸ್ ಅರ್ಬನ್ ಹಾತ್ ನಲ್ಲಿ ಒಂದಲ್ಲ ಒಂದು ರೀತಿಯ ಕಲಾವೈಭವ ಮೇಳೈಸುತ್ತಲೇ ಇರುತ್ತದೆ. ಈ ಬಾರಿ ಇಲ್ಲಿ ವಿಶಿಷ್ಟ ಮತ್ತು ವಿಭಿನ್ನವಾದ ಕಲಾ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದ್ದು ಇದು ದಸರಾ ಕಲಾ ವೈಭವವನ್ನು ಸಾರಿ ಹೇಳಲಿವೆ.

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಬೆಂಗಳೂರು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಇವರ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ದಸರಾ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಮೈಸೂರು ದಸರಾ ಕಲಾವೈಭವ ವಸ್ತು ಪ್ರದರ್ಶನವನ್ನು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 11 ದಿವಸಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದು.

ಈ ದಸರಾ ಕಲಾ ಪ್ರದರ್ಶನಕ್ಕೆ ಆಗಮಿಸುವವರಿಗೆ ಮನರಂಜನೆ ನೀಡುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆ.30 ರಿಂದ ಅ.7ರವರೆಗೆ ಪ್ರತಿ ದಿವಸ ಸಂಜೆ ಏರ್ಪಡಿಸಲಾಗಿದೆ.

Speciality Of JSS Urban Hath Fair in Mysore

ವಸ್ತುಪ್ರದರ್ಶನದಲ್ಲಿ ರಾಜ್ಯದ ಮತ್ತು ಸ್ಥಳೀಯ ಕೈಗಾರಿಕೆಗಳು ಮತ್ತು ಗುಡಿ ಕೈಗಾರಿಕೆಗಳು, ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ಉತ್ಪನ್ನಗಳು, ಸಣ್ಣ ಕೈಗಾರಿಕೆಗಳು, ಸ್ವಸಹಾಯ ಗುಂಪುಗಳು, ಖಾದಿ ಗ್ರಾಮೋದ್ಯೋಗಗಳು, ಸ್ವಯಂ ಉದ್ಯೋಗಿಗಳು, ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳು ಮತ್ತು ಇತರೆ ಸಂಘ ಸಂಸ್ಥೆಗಳು ತಯಾರಿಸುವ ಗುಣಮಟ್ಟದ ವಸ್ತುಗಳು 60ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಇರಲಿವೆ.

Speciality Of JSS Urban Hath Fair in Mysore

ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ಧ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆ ಮತ್ತು ಬೊಂಬೆಯ ಸಾಮಾನುಗಳು, ಗೃಹಬಳಕೆಯ ವಸ್ತುಗಳಲ್ಲದೆ, ಉತ್ತರ ಕರ್ನಾಟಕದ ರುಚಿಕರವಾದ ತಿಂಡಿ ಪದಾರ್ಥಗಳು ಸವಿಯಲು ಸಿದ್ಧವಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+