ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಮೈಸೂರಿಗೆ ಕೊಂಚ ರಿಲ್ಯಾಕ್ಸ್

ಮೈಸೂರು, ಜೂನ್ 25: ಮೈಸೂರು ಜಿಲ್ಲೆಯನ್ನು ಸರ್ಕಾರ ಕೆಟಗಿರಿ 3ರಿಂದ ಮೇಲ್ದರ್ಜೆಗೆ ಸೇರಿಸಿ ಕೆಟಗೆರಿ 2ಕ್ಕೆ ಸೇರ್ಪಡೆ ಮಾಡಿದೆ. ಪರಿಣಾಮ ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದೆ.

"ರಾಜ್ಯ ಸರ್ಕಾರದ ಆದೇಶದ ಮೇರೆಗೆ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಅನ್‌ಲಾಕ್ 1ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿವೆ,'' ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಮೈಸೂರಿನಲ್ಲಿ ಶೇ.10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ.5- 10ರೊಳಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜೂ.28ರಿಂದ ಕೈಗಾರಿಕೆ, ಉದ್ದಿಮೆಗಳು ಶೇ.50ರಷ್ಟು ಕಾರ್ಮಿಕರು‌ ಕೆಲಸ ಮಾಡುವ ಅವಕಾಶ, ಗಾರ್ಮೆಂಟ್ಸ್‌ಗಳಿಗೆ ಶೇ.30ರಷ್ಟು ಅವಕಾಶ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ, ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್‌ಫುಡ್‌ಗೂ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳು ಸಹ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳಲ್ಲಿ ಕೇವಲ ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ,'' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Some Covid Lockdown Relaxations In Mysuru

ಕಟ್ಟಡದ ನಿರ್ಮಾಣ ಕಾಮಗಾರಿ ವಸ್ತುಗಳಾದ ಕಬ್ಬಿಣ, ಸಿಮೆಂಟ್ ಅಂಗಡಿಗಳಿಗೆ ಅವಕಾಶ ನೀಡಲಾಗಿದ್ದು, ಉದ್ಯಾನವನಗಳಿಗೆ ಬೆಳಿಗ್ಗೆ 5ರಿಂದ 10ರವರೆಗೂ ಅವಕಾಶ ಕಲ್ಪಿಸಿದೆ. ಟ್ಯಾಕ್ಸಿ, ಆಟೋಗಳಿಗೆ ಇಬ್ಬರು ಪ್ಯಾಸೆಂಜರ್ ಜೊತೆ ಸಂಚರಿಸಬಹುದಾಗಿದೆ. ಸರ್ಕಾರಿ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು.

ವಾರಾಂತ್ಯ ಕರ್ಪ್ಯೂ
"ಮೈಸೂರಿನಲ್ಲೂ ವಾರಾಂತ್ಯ ಕರ್ಪ್ಯೂ ಅನ್ವಯ ಆಗಲಿದೆ. ಅಗತ್ಯ ವಸ್ತುಗಳು, ಮೆಡಿಕಲ್ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಬದಲಾಗಿ ಮಧ್ಯಾಹ್ನ 2 ವರೆಗೆ ವ್ಯಾಪಾರಕ್ಕೆ ಅವಕಾಶ ಇದ್ದು, ನೈಟ್ ಕರ್ಫ್ಯೂ ಮುಂದುವರೆಯುತ್ತದೆ. ಮದುವೆ ಕಾರ್ಯಕ್ರಮಗಳಿಗೆ 40 ಜನರಿಗೆ ಮಾತ್ರ ಅವಕಾಶ‌ ಕೊಡಲಾಗುವುದು. ಅಂತ್ಯಕ್ರಿಯೆಗೆ 5 ಜನರಿಗೆ ಮಾತ್ರ ಅವಕಾಶ ಇದೆ. ಮೈಸೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಜನರು ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ. ಎಲ್ಲಾ ವಸ್ತುಗಳ ಹೋಂ ಡಿಲಿವೆರಿಗೆ 24/7 ಅವಕಾಶ ಇದೆ,'' ಎಂದು ವಿವರಿಸಿದರು. ‌

Some Covid Lockdown Relaxations In Mysuru

ಯಾವುದಕ್ಕೆಲ್ಲಾ ಅವಕಾಶ
* ಎಲ್ಲಾ ಕೈಗಾರಿಕೆಗಳು ಶೇ.50ರಷ್ಟು ಸಿಬ್ಬಂದಿಗೆ ಅವಕಾಶ

* ಗಾರ್ಮೆಂಟ್ಸ್‌ಗೆ ಶೇ.30ರಷ್ಟು ಕಾರ್ಮಿಕರಿಗೆ ಅವಕಾಶ

* ಹಣ್ಣುಗಳು, ದಿನಸಿ, ಮಾಂಸ, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

* ಪಾನೀಪುರಿ, ಬಜ್ಜಿ ತಳ್ಳು ಗಾಡಿಯಲ್ಲಿ ಮಾರುವವರಿಗೂ ಅವಕಾಶ

* ಪಾನಿಪಾರಿ ಬಜ್ಜಿ ತಳ್ಳು ಗಾಡಿಯಲ್ಲಿ ಮಾರುವವರಿಗೂ ಅವಕಾಶ

* ಕಿರಾಣಿ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ

* ಮದ್ಯದ ಅಂಗಡಿಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ

* ಎಲ್ಲಾ ವಸ್ತುಗಳು ಹೋಂ ಡೆಲಿವರಿಗೆ 24/7 ಅವಕಾಶ

* ಹೋಟೆಲ್‌ಗಳಲ್ಲಿ 24/7 ಪಾರ್ಸೆಲ್‌ಗೆ ಅವಕಾಶ

* ಕಟ್ಟಡದ ನಿರ್ಮಾಣ ಕಾಮಗಾರಿಯ ಮಾರಾಟ ಮಳಿಗೆಗೂ ಅವಕಾಶ

* ಕಬ್ಬಿಣದ ಅಂಗಡಿ, ಸಿಮೆಂಟ್, ಹಾರ್ಡ್‌ವೇರ್ ಸೇರಿ ಎಲ್ಲಾ ಕಟ್ಟಡ ಸಾಮಾಗ್ರಿಗಳ ಅಂಗಡಿಗಳಿಗೆ ಅವಕಾಶ

* ಉದ್ಯಾನವನಗಳಿಗೆ ಬೆಳಿಗ್ಗೆ 5ರಿಂದ 10 ರವರೆಗೂ ಅವಕಾಶ

* ಟ್ಯಾಕ್ಸಿ ಆಟೋಗಳಿಗೆ ಇಬ್ಬರು ಪ್ಯಾಸೆಂಜರ್ ಜೊತೆ ಅವಕಾಶ

* ಸರ್ಕಾರಿ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಅವಕಾಶ

* ವಾಹನ ತರಬೇತಿಗೆ ಅವಕಾಶ

* ಕನ್ನಡಕದ ಅಂಗಡಿಗಳಿಗೂ ಅವಕಾಶ

* ಮದುವೆಗೆ 40 ಜನಕ್ಕೆ ಅವಕಾಶ, ಅನುಮತಿ ಕಡ್ಡಾಯ

* ಅಂತ್ಯಸಂಸ್ಕಾರಕ್ಕೆ 5 ಜನರಿಗೆ ಭಾಗವಹಿಸಲು ಅವಕಾಶ

* ಮೈಸೂರಿನಲ್ಲೂ ವೀಕೆಂಡ್ ಕರ್ಫ್ಯೂ ಅನ್ವಯ, ಅಗತ್ಯ ವಸ್ತುಗಳು, ಮೆಡಿಕಲ್ ಮಾರಾಟಕ್ಕೆ ಮಾತ್ರ ಅವಕಾಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+