ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್

ಮೈಸೂರು, ಜನವರಿ 27 : ಈ ಹಿಂದೆ ಯಶೋ ಮಾರ್ಗದ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಡಿಯಿಟ್ಟಿದ್ದ ಯಶ್ ಸದ್ಯ ಮೈಸೂರನ್ನು ಸ್ವಚ್ಛ ನಗರಿ ಪಟ್ಟಕ್ಕೇರಿಸಲು ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಸಿನಿಮಾದಷ್ಟೇ ಅಲ್ಲ, ಸಮಾಜಮುಖಿ ಕಾರ್ಯದಲ್ಲೂ ಯಶ್ ಮುಂದು. ಮೈಸೂರನ್ನು ಸ್ವಚ್ಛನಗರಿಯನ್ನಾಗಿಸಲು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.

"ಮೈಸೂರು ಎಂದರೆ ಹೆಮ್ಮೆಯ ಸಾಂಸ್ಕೃತಿಕ ನಗರಿ. ಇಲ್ಲಿನ ದಸರಾ ವಿಶ್ವವಿಖ್ಯಾತಿಗಳಿಸಿದೆ. ಇದಿಷ್ಟಕ್ಕೆ ಸೀಮಿತವಾಗದೇ ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ ಕೂಡ ಈ ಊರಿನ ಹೆಸರಿನ ಕೀರ್ತಿಪತಾಕೆಯಾಗಿದೆ. ಈ ನೆಲಕ್ಕೆ ಇತಿಹಾಸ ಹಾಗೂ ಸೊಗಡಿದೆ. ವಿದೇಶಿಗರು ಅಚ್ಚರಿಪಡುವಂತಹ ಆತಿಥ್ಯ ನೀಡುವ ಊರು ಮೈಸೂರು" ಎಂದು ಹಾಡಿಹೊಗಳಿದ್ದಾರೆ.

Sandalwood actor yash join hands to clean mysuru campaign

ಈ ಹಿಂದೆ ಸ್ವಚ್ಛ ಮೈಸೂರು ಎಂದು ನಂಬರ್ 1 ಪಟ್ಟಗಳಿಸಿತ್ತು. ಈ ಬಾರಿಯು ಸ್ವಚ್ಛ ಸರ್ವೇಕ್ಷಣ್ ಪೋಲ್ ನಡೆಸಲಾಗುತ್ತಿದೆ. ಮೈಸೂರನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವ ಜೊತೆ - ಜೊತೆಗೆ ಮೊಬೈಲ್ ನಲ್ಲಿ ಆಪ್ ಡೌನ್ ಲೋಡ್ ಮಾಡುವ ಮೂಲಕ ಹಾಗೂ ವೆಬ್ ಸೈಟ್ ನಲ್ಲಿ ವೋಟ್ ಮಾಡುವ ಮೂಲಕ ಸ್ವಚ್ಛ ಸರ್ವೇಕ್ಷಣ್ ತಂಡಕ್ಕೆ ಸಹಕರಿಸಬೇಕು. ಕೇವಲ ವೋಟ್ ಮಾಡುವುದಷ್ಟೇ ಅಲ್ಲ ಊರನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಯಶ್ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಡಿಯೋವನ್ನು ಖುದ್ದು ತಾವೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಎಲ್ಲರೂ ವೀಕ್ಷಿಸಿ ಓಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+