• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾರುಕಟ್ಟೆಗೆ ಬರಲಿದೆ ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ತಯಾರಾದ ಐವರಿ ಟೂತ್‌ಪೇಸ್ಟ್‌: ಬೆಲೆ ಎಷ್ಟು?

|

ಮೈಸೂರು, ಮಾರ್ಚ್ 24: ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ತಯಾರಾದ ಅಚ್ಚ ಕನ್ನಡದಲ್ಲಿ ಹೆಸರಿರುವ ಐವರಿ ಟೂತ್‌ಪೇಸ್ಟ್‌ ಮಾರುಕಟ್ಟೆಗೆ ಬರಲಿದೆ.

ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಂಸ್ಥೆಯು ಐವರಿ ಎನ್ನುವ ಟೂತ್‌ಪೇಸ್ಟ್‌ ಅನ್ನು ಕಳೆದ ನಾಲ್ಕೈದು ವರ್ಷಗಳಿಂದ ತಯಾರಿಸುತ್ತಿದ್ದು, ಸದ್ಯದಲ್ಲೇ ಈ ಟೂತ್ ಪೇಸ್ಟ್‌ ಮಾರುಕಟ್ಟೆಗೆ ಕಾಲಿಡಲಿದೆ.

ಮೈಸೂರು ಸ್ಯಾಂಡಲ್ ಸಂಸ್ಥೆಯ ಸುವರ್ಣ ಕುಮಾರ್‌ ಅವರು ಮಾತನಾಡಿ, ಈ ಟೂತ್‌ಪೇಸ್ಟ್‌ ನಾಲ್ಕೈದು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲೇ ತಯಾರಾಗುತ್ತಿದೆ ಎಂದು ತಿಳಿಸಿದ್ದಾರೆ.

ಟೂತ್‌ಪೇಸ್ಟ್‌ ಅನ್ನು ಶಾಲೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದರ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆಗಳು ಅಗತ್ಯ ಇರುವ ಕಾರಣ ಇನ್ನೂ ಸಾಮಾನ್ಯ ಮಾರುಕಟ್ಟೆಗೆ ಬಿಟ್ಟಿರಲಿಲ್ಲವೆಂದು ಹೇಳಿದರು.

ಮೈಸೂರು ಸ್ಯಾಂಡಲ್ ಔಟ್‌ಲೆಟ್‌ಗಳಲ್ಲಿ ಈ ಟೂತ್‌ಪೇಸ್ಟ್‌ ಲಭ್ಯವಿವೆ. 50 ಗ್ರಾಂನ ಪೇಸ್ಟ್‌ ಬೆಲೆ ಕೇವಲ 15 ರೂ. ಆಗಿದ್ದು, ನೂರು ಗ್ರಾಂ ಟೂತ್ ಪೇಸ್ಟ್‌ ಬೆಲೆ 30 ರೂ. ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ. ಈ ಟೂತ್‌ಪೇಸ್ಟ್‌ನ ಮೇಲೆ ಐವರಿ ಎಂದು ಅಚ್ಚ ಕನ್ನಡದಲ್ಲಿ ಮುದ್ರಿಸಿರುವುದು ವಿಶೇಷವಾಗಿದೆ.

English summary
Ivory Toothpaste, manufactured by Mysore Sandals company, will be coming to market soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X