ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿಗೆ ಜೆಡಿಎಸ್ ಮೇಲೆ ಸಂಶಯವಿದೆ: ನರೇಂದ್ರ ಮೋದಿ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಜೆಡಿಎಸ್ ಮೇಲೆ ನಂಬಿಕೆಯಿಲ್ಲ ಎಂದು ಹೇಳಿಕೆ ಕೊಟ್ಟ ಮೋದಿ

ಮೈಸೂರು, ಏಪ್ರಿಲ್ 9: ಮಾಜಿ ಸಿಎಂ ಸಿದ್ದರಾಮಯ್ಯರ ಭದ್ರ ಕೋಟೆ ಎಂದೇ ಹೆಸರು ಮಾಡಿರುವ ಮೈಸೂರಿನಲ್ಲಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಕಾಂಗ್ರೆಸ್ - ಜೆಡಿಎಸ್ ಸರ್ಕಾರದ ವಿರುದ್ಧ ಒಂದರ ಹಿಂದೆ ಮತ್ತೊಂದರಂತೆ ವಾಗ್ಬಾಣ ಬಿಟ್ಟರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಲ್ಲರಿಗೂ ಚೌಕಿದಾರನ ನಮಸ್ಕಾರಗಳು, ಮೈಸೂರು, ಚಾಮರಾಜನಗರ, ಮಂಡ್ಯ ಹಾಸನ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ನರೇಂದ್ರ ಮೋದಿ ಈ ಹಿಂದಿನ ಮೈಸೂರಿನ ಭೇಟಿಯನ್ನು ನೆನೆದು ಸಂತಸಪಟ್ಟರು.

ಮೈಸೂರಿಗೆ ಇದಕ್ಕೂ ಮುಂಚೆ ಆಗಮಿಸಿದ್ದೇನೆ. ಇಷ್ಟು ಜನಸ್ತೋಮ ಮೊದಲು ನೋಡುತ್ತಿದ್ದೇನೆ. ವಿಶ್ವೇಶ್ವರಯ್ಯರಂತಹ ಮಹನೀಯರಿಗೆ ಜನ್ಮ ನೀಡಿದ ಭೂಮಿ ಇದು. ನಮಗೆಲ್ಲಾ ಶಕ್ತಿ ಕೊಡುವ ಚಾಮುಂಡೇಶ್ವರಿ ದೇವಿಗೆ ವಂದಿಸುತ್ತೇನೆ. ಈಗಿನ್ನೂ ಚಿತ್ರದುರ್ಗಕ್ಕೆ ಹೋಗಿ ಬಂದೆ. ಬಿಸಿಲಿನಲ್ಲೂ ನಿಮ್ಮ ಉತ್ಸಾಹ ನೋಡಿ ಖುಷಿ ತಂದಿದೆ. ಇದರಿಂದ ಬಿಜೆಪಿ ಅಲೆ ಸುನಾಮಿಯ ಹಾಗಿದೆ ಎಂದೆನಿಸುತ್ತದೆ ಎಂದರು.

ರಾಹುಲ್‌ಗೆ ಜೆಡಿಎಸ್, ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ : ಮೋದಿರಾಹುಲ್‌ಗೆ ಜೆಡಿಎಸ್, ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ : ಮೋದಿ

ಕರ್ನಾಟಕದ ವಾತಾವರಣವೇ ಇಡೀ ದೇಶದಲ್ಲಿದೆ. ಈ ದೃಶ್ಯ ಇಡೀ ದೇಶದಲ್ಲಿ ಕಾಣಿಸುತ್ತಿದೆ. ಮೈಸೂರು - ಬೆಂಗಳೂರು ಹೈವೇ ಯೋಜನೆ ಬಳಿಕ ನಿಮಗೆ ಇನ್ನಷ್ಟು ಲಾಭವಾಗಿದೆ. ಮೈಸೂರಿನಲ್ಲೇ ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆಯಾಗಿದೆ ಎಂದು ಮೋದಿ ತಿಳಿಸಿದರು. ಮೋದಿ ಅವರು ಭಾಷಣದಲ್ಲೇನು ಹೇಳಿದ್ದಾರೆ ಎಂಬುದರ ಪೂರ್ತಿ ವಿವರ ಇಲ್ಲಿದೆ.

ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಮೋದಿ

ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಮೋದಿ

ಸ್ವಚ್ಛ ಭಾರತ ಅಭಿಯಾನದಿಂದ ಸಾರಿಗೆ ಸಂಪರ್ಕದ ಅಭಿವೃದ್ಧಿ ಸಿಕ್ಕಿದೆ. ವಿಶ್ವದಲ್ಲೇ ಭಾರತವನ್ನು 3 ನೇ ಅತಿ ದೊಡ್ಡ ಆರ್ಥಿಕತೆ ಮಾಡುವ ಸಂಕಲ್ಪವಿದೆ. 50 ನಗರಗಳಲ್ಲಿ ಮೆಟ್ರೋ ಮಾಡಬೇಕು ಅನ್ನುವುದು ಸಂಕಲ್ಪ. 70 ವರ್ಷಗಳಲ್ಲಿ ಆಗದಿದ್ದನ್ನು 5 ವರ್ಷದಲ್ಲಿ ಮಾಡಬೇಕು ಅನ್ನುವುದು ನಮ್ಮ ಸಂಕಲ್ಪ. ಕಾಂಗ್ರೆಸ್ ಪಕ್ಷದ ಏಕೈಕ ಅಜೆಂಡಾ ಮೋದಿಯನ್ನು ಕೆಳಗಿಳಿಸುವುದಾಗಿದೆ. ಮಹಾಮೈತ್ರಿ ನಾಯಕರ ಎಲ್ಲಾ ಭಾಷಣದಲ್ಲೂ ಒಂದೇ ಮಾತು, ಮೋದಿ ಹಠಾವೋ, ಮೋದಿ ಹಠಾವೋ ಎಂಬುದು. ಆದರೆ ನಿಮ್ಮ ಪ್ರೀತಿ ಅವರ ನಿದ್ದೆಗೆಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಹರಿಹಾಯ್ದರು.

ಕರ್ನಾಟಕದಂಥ ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೆ?: ಮೋದಿ ಕರ್ನಾಟಕದಂಥ ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೆ?: ಮೋದಿ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ನಾಯಕತ್ವ ಹೋದರೆ ಬಡತನವೂ ನಿರ್ಮೂಲನೆಯಾಗುತ್ತದೆ. ಕಾಂಗ್ರೆಸ್ ನಾಯಕರು ದೇಶದ ಮಧ್ಯಮ ವರ್ಗದ ಜನರನ್ನು ಸ್ವಾರ್ಥಿಗಳು ಎನ್ನುತ್ತಿದ್ದಾರೆ. ನಿಮ್ಮ ಚೌಕಿದಾರ ಇರುವವರೆಗೂ ಪ್ರತಿ ತೆರಿಗೆದಾರರಿಗೂ ಗೌರವ ಸಿಗಲಿದೆ. ನಮ್ಮ ಸರ್ಕಾರ ಕಡಿಮೆ ದರದ ಸ್ಮಾರ್ಟ್ ಫೋನ್ , ಡೇಟಾ ನೀಡಿದರೆ 2 ಜಿ ಹಗರಣವನ್ನು ದೇಶಕ್ಕೆ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಏನು ಮಾಡುತ್ತಿದೆ? ರಾಜ್ಯದಲ್ಲಿ ರೈತರಿಗೆ ಮೋಸವಾಗುತ್ತಿದ್ದು, ಅದು ಮುಂದುವರೆಯಬೇಕೆ ? ಸಾಲಮನ್ನಾ ಎಂದ ಮೇಲೆಯೂ ಸಾಲ ಕಟ್ಟಿ ಎಂದು ನೋಟಿಸ್ ನೀಡುತ್ತಿರುವುದು ಏಕೆ? ಎಂದು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಮೈಸೂರಿನಿಂದ ಮತ್ತೆ ಕಣಕ್ಕಿಳಿದಿರುವ ಫೈರ್ ಬ್ರಾಂಡ್ ಸಂಸದ ಪ್ರತಾಪ್ ಸಿಂಹ

ಬ್ಲಾಕ್ ಮೇಲ್ ರಾಜಕಾರಣ ನಡೆಯುತ್ತಿದೆ

ಬ್ಲಾಕ್ ಮೇಲ್ ರಾಜಕಾರಣ ನಡೆಯುತ್ತಿದೆ

ದೋಸ್ತಿ ಸರ್ಕಾರ ನಂಗಾನಾಚ್ ಸರ್ಕಾರ, ಇಲ್ಲಿ ಖುಲ್ಲಂಖುಲ್ಲಾ ಎಲ್ಲಾ ನಡೀತಿದೆ. ಬ್ಲಾಕ್ ಮೇಲ್ ರಾಜಕಾರಣ ನಡೆಯುತ್ತಿದೆ. ಇದನ್ನೆಲ್ಲಾ ದೇಶ ನೋಡುತ್ತಿದೆ. ಕುಟುಂಬ ಮೊದಲು ಅನ್ನುವುದು ಇವರ ನಂಬಿಕೆ. ಭ್ರಷ್ಟಾಚಾರದ ರಾಜನೀತಿ ಇವರದ್ದು. ಕೇಂದ್ರದಿಂದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ಯೋಜನೆಯಿಂದ ಹಣ ಬಂದಿದೆ. ಆದರೆ ಕರ್ನಾಟಕ ಸರ್ಕಾರ ಇಲ್ಲಿನ ರೈತರ ಪಟ್ಟಿಯನ್ನೇ ಕೊಟ್ಟಿಲ್ಲ. ಇವತ್ತು ಕೊಡ್ತಿನಿ, ನಾಳೆ ಕೊಡ್ತಿನಿ ಎಂದು ಮುಂದೂಡುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಸುಮಲತಾ ಪರ ಬ್ಯಾಟ್ ಬೀಸಿದ ಮೋದಿ

ಸುಮಲತಾ ಪರ ಬ್ಯಾಟ್ ಬೀಸಿದ ಮೋದಿ

ಕರ್ನಾಟಕದಲ್ಲಿ ಈ ಹಿಂದೆ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ಅಂದುಕೊಂಡರು. ಆದರೆ ಕರ್ನಾಟಕದಲ್ಲಿ ಸುರಕ್ಷಿತವಿಲ್ಲವೆಂದು ತಿಳಿದು ಹುಡುಕಿ ವಯನಾಡಿಗೆ ಹೋದರು. ಇಲ್ಲಿ ಅವರದೇ ಸರ್ಕಾರ ಇದ್ದರೂ, ಜೆಡಿಎಸ್ ಮೇಲೆ ಸಂಶಯವಿದೆ ಎಂದರು.ಇದೇ ವೇಳೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬ್ಯಾಟ್ ಬೀಸಿದ ಪ್ರಧಾನಿ ಮೋದಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಸುಮಲತಾರಿಗೆ ಅವಮಾನ ಮಾಡಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಗೆ ಸೇವೆ ಮಾಡಿದವರಿಗೆ ಅವಮಾನ ಮಾಡಿರುವುದು ಬೇಸರ ತರಿಸಿದೆ. ಅಂಬರೀಶ್ ಇಲ್ಲಿನ ಜನರ ಮನಸ್ಸಿನಲ್ಲಿದ್ದಾರೆ. ಅವರ ಕಾಯಕವನ್ನು ನೆನೆಪಿಸಿಕೊಳ್ಳದಿರುವುದು ಅವರು ಮಾಡುತ್ತಿರುವ ದ್ರೋಹ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

English summary
Lok Sabha Elections 2019:Prime Minister Narendra Modi has spoken against the Karnataka government in Mysuru BJP rally. Modi said that Rahul Gandhi has doubts about the JDS. So he competing in Wayanad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X