ಮೈಸೂರಿನ ಮನೆಯಲ್ಲೇ ವೇಶ್ಯಾವಾಟಿಕೆ: ನಾಲ್ವರ ಬಂಧನ

ಮೈಸೂರು, ಜುಲೈ 30: ಕೊಲ್ಕತ್ತಾ ಮೂಲದ ಯುವತಿಯನ್ನಿಟ್ಟುಕೊಂಡು ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಕುವೆಂಪುನಗರದ ನಿವಾಸಿ ಚಂದ್ರ ಎಂಬಾತನ ಪತ್ನಿ ಗುಣವತಿ ಅಲಿಯಾಸ್ ಸುಗುಣ, ಹೂಟಗಳ್ಳಿ ಕೆ.ಎಚ್.ಬಿ. ಕಾಲೋನಿಯ ಗುರು ಮತ್ತು ಆತನ ಪತ್ನಿ ಕಾಂತ ಅಲಿಯಾಸ್ ಸುಮಾ ಬಂಧಿತರು.

ಸುಮಾ ಹಾಗೂ ಗುರು ತಮ್ಮ ಮನೆಯಲ್ಲಿ ಮಹಿಳೆಯನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇವರಿಗೆ ಗುಣವತಿ ಎಂಬಾಕೆ ಸಹಾಯ ಮಾಡುತ್ತಿದ್ದಳು ಎನ್ನಲಾಗಿದೆ. ಮನೆಗೆ ಗಿರಾಕಿಗಳನ್ನು ಕರೆಯಿಸಿಕೊಂಡು ವ್ಯವಹಾರ ನಡೆಸುತ್ತಿದ್ದರು.

Prostitution At Home In Mysuru

ಈ ನಡುವೆ ಸುಮಾ ಮತ್ತು ಗುರು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ವಿಷಯ ಸ್ಥಳೀಯರಿಗೆ ಗೊತ್ತಾಗಿತ್ತು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಮೈಸೂರು ನಗರದ ಡಿಸಿಪಿ ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ತಂಡವು ದಾಳಿ ಮಾಡಿದ್ದು, ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹುಲ್ಲಹಳ್ಳಿಯ ಪ್ರಕಾಶ್ ಹಾಗೂ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುಮಾ, ಗುರು, ಗುಣವತಿ ಸಿಕ್ಕಿಬಿದ್ದಿದ್ದಾರೆ.

ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಕೊಲ್ಕತ್ತಾ ಮೂಲದ ಯುವತಿಯನ್ನು ರಕ್ಷಿಸಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+