56 ವರ್ಷಗಳ ನಂತರ ಮೈಸೂರು ಅರಮನೆಯಲ್ಲಿ ಜೋಜೋಲಾಲಿ
ಮೈಸೂರು, ಸೆಪ್ಟೆಬರ್ 30 : ಈ ಬಾರಿಯ ದಸರೆ ವಿಶೇಷತೆಯೇ ಸರಿ. ಹೌದು, ಪ್ರತಿ ಬಾರಿಯ ದಸರಾ ಹಲವು ವಿಶೇಷೆಗಳ ಮೂಲಕ ಗಮನ ಸೆಳೆಯುತ್ತದೆ. ಆದರೆ ಈ ಬಾರಿಯ ದಸರಾ ಆಚರಣೆಯಲ್ಲಿ ಅರಮನೆಯಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.
ಮೈಸೂರು ಮಹಾರಾಣಿ ತ್ರಿಷಿಕಾ ತುಂಬುಗರ್ಭಿಣಿಯಾಗಿದ್ದು, ಅರಮನೆಯ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. 56 ವರ್ಷಗಳ ಬಳಿಕ ಇಂಥದೊಂದು ಶುಭ ಘಳಿಗೆ ಕೂಡಿ ಬರುತ್ತಿರುವುದು ಅಪರೂಪದ ಸನ್ನಿವೇಶವಾಗಿದೆ.

ಹಿಂದೆ 1961ರಲ್ಲಿ ಮಹಾರಾಣಿ ತ್ರಿಪುರಸುಂದರ ಅಮ್ಮಣಿಯಾವರು(ಜಯ ಚಾಮರಾಜ ಒಡೆಯರ್ ಮಡದಿ) ದಸರಾ ಸಂದರ್ಭದಲ್ಲಿ ಗರ್ಭಿಣಿಯಾಗಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅಂದರೆ 1890ರಲ್ಲಿ ಮಹಾರಾಣಿ ವಾಣಿ ವಿಲಾಸ ಅಮ್ಮಣ್ಣಿಯವರು ದಸರಾ ಸಂದರ್ಭದಲ್ಲಿ ಗಭಿರ್ಣಿಯಾಗಿದ್ದರು.












Click it and Unblock the Notifications