ಮೈಸೂರಿನ ಕೆ.ಆರ್. ಆಸ್ಪತ್ರೆ ಬಳಿ ಪ್ರೀ ಪೇಯ್ಡ್ ಆಟೋ

ಮೈಸೂರು, ಜ. 20: ನಗರದ ಕೆ.ಆರ್. ಆಸ್ಪತ್ರೆಯ ಪೂರ್ವಭಾಗದ ದ್ವಾರದಲ್ಲಿ ಇನ್ನೊಂದು ಪ್ರೀ ಪೇಯ್ಡ್ ಆಟೋ ನಿಲ್ದಾಣಕ್ಕೆ ಚಾಲನೆ ನೀಡಲಾಗಿದೆ. ಈ ಮೂಲಕ ನಗರದಲ್ಲಿರುವ ಪ್ರೀ ಪೇಯ್ಡ್ ಆಟೋ ನಿಲ್ದಾಣಗಳ ಸಂಖ್ಯೆ ಎಂಟಕ್ಕೇರಿದೆ.

ನಗರದಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧಗಳನ್ನು ನಿಯಂತ್ರಿಸುವ ಮತ್ತು ಪತ್ತೆ ಹಚ್ಚಲು ಇನ್ನರ್‌ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಜಿಲ್ಲಾ 318 ಮತ್ತು ಮೈಸೂರು ನಗರ ಪೊಲೀಸ್‌ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಆಟೋ ನಿಲ್ದಾಣಕ್ಕೆ ಆಸ್ಪತ್ರೆಯ ಡೀನ್‌ ಮತ್ತು ನಿರ್ದೇಶಕ ಡಾ. ಕೃಷ್ಣಮೂರ್ತಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. [ಆಟೋರಿಕ್ಷಾಗಳಿಗೆ ಡಿಸ್ ಪ್ಲೇ ಕಾರ್ಡ್ ಕಡ್ಡಾಯ]

auto

ಇನ್ನೂ ನಾಲ್ಕು ಆಟೋ ನಿಲ್ದಾಣ : ನಂತರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎ. ಸಲೀಂ, "ಮೈಸೂರಿನಲ್ಲಿ ಪ್ರಯಾಣಿಕರ ಶೋಷಣೆ ತಪ್ಪಿಸಲು ಇನ್ನೂ ನಾಲ್ಕು ಪ್ರೀ ಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ" ಎಂದು ತಿಳಿಸಿದರು. [ಅಣ್ಣಾದೊರೈ ಓಡಿಸೋ ಆಟೋ ನೋಡ್ರಿ]

ಈಗಾಗಲೇ ಮೈಸೂರಿನ ವಿವಿಧೆಡೆ ಏಳು ಪ್ರೀ ಪೇಯ್ಡ ಆಟೋ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ರೈಲ್ವೆ ನಿಲ್ದಾಣ ಆವರಣ, ರೈಲ್ವೆ ನಿಲ್ದಾಣ ವೃತ್ತ, ಪ್ಲಾಟ್‌ ಫಾರಂ ನಂ.6ರ ಬಳಿ, ಗ್ರಾಮಾಂತರ ಬಸ್‌ ನಿಲ್ದಾಣ, ಅರಮನೆಯ ವರಹಾ ಗೇಟ್‌ ಬಳಿ, ಮೃಗಾಲಯದ ಮುಂಭಾಗ ಹಾಗೂ ಇನ್ಫೋಸಿಸ್‌ ಬಳಿ ಪ್ರೀ ಪೇಯ್ಡ ಕೌಂಟರ್‌ ಕಾರ್ಯನಿರ್ವಹಿಸುತ್ತಿವೆ.

ಡಿಸಿಪಿ ಎ.ಎನ್‌.ರಾಜಣ್ಣ, ಕೆ.ಆರ್‌.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಬಿ.ಜಿ.ಸಾಗರ್‌, ಇನ್ನರ್‌ವ್ಹೀಲ್‌ ಕ್ಲಬ್‌ ಆಫ್ ಮೈಸೂರು ಸೆಂಟ್ರಲ್‌ ಸಂಸ್ಥೆಯ ಅಧ್ಯಕ್ಷೆ ಸೌಜನ್ಯ ಅತಾವರ್‌, ಸಂಚಾರ ವಿಭಾಗದ ಎಸಿಪಿ ಪ್ರಭಾಕರ್‌ ಬಾರ್ಕಿ, ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್‌, ಇನ್ನರ್‌ವ್ಹೀಲ್‌ ಕ್ಲಬ್‌ ಆಫ್ ಮೈಸೂರು ಸೆಂಟ್ರಲ್‌ ಸಂಸ್ಥೆಯ ಕಾರ್ಯದರ್ಶಿ ಚಂದ್ರಿಕಾ ಸುಧೀರ್‌, ಇನ್ನರ್‌ವ್ಹೀಲ್‌ ಕ್ಲಬ್‌ 318 ಜಿಲ್ಲಾಧ್ಯಕ್ಷೆ ವಿನೀತ ಸತೀಶ್‌ ಇತರರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+