ಮೈಸೂರಲ್ಲಿ ಪ್ರತಾಪ್ ಸಿಂಹ, ಪ್ರಮೋದಾದೇವಿ ಸೇರಿ ಪ್ರಮುಖರಿಂದ ಮತದಾನ
ಮೈಸೂರು, ಏ.18: ದೇಶದ ಒಟ್ಟು 12 ರಾಜ್ಯದ 95 ಲೋಕಸಭೆ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮೈಸೂರಿನಲ್ಲಿ ಪ್ರಮುಖರು ಯಾರ್ಯಾರು ಮತ ಚಲಾಯಿಸಿದ್ದಾರೆ ಎನ್ನುವುದನ್ನು ನೋಡೋಣ..
ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹರವರು ತಮ್ಮ ಪತ್ನಿ ಅರ್ಪಿತಾ ಜೊತೆ ವಿಜಯನಗರದ ಖಾಸಗಿ ಶಾಲೆಯ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ ಮಾಡಿದರು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗ್ಗೆ ನಾನು ಮಡಿಕೇರಿಯ ವಿಜಯವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಮ್ಮ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಮತ ಇದೆ ಮತದಾನ ಮಾಡಿದ್ದೇನೆ. ಎಲ್ಲಾ ಬೂತ್ ಗಳಿಗೆ ಭೇಟಿ ನೀಡಿದೆ.

ಉತ್ತಮವಾದ ರೆಸ್ಪಾನ್ಸ್ ಇದೆ. ಎಲ್ಲಾ ಪಕ್ಷಗಳಿಗ ತಮದೇ ಅದ ಓಟ್ ಬ್ಯಾಂಕ್ ಗಳಿದೆ. ಆದರೆ ಮೋದಿಗೂ ಸಹ ಮೊದಲನೇ ಬಾರಿ ಓಟ್ ಮಾಡುವವರ ಬ್ಯಾಂಕ್ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶೇಷವಾಗಿ ಮೈಸೂರಿನಲ್ಲಿ 104 ವರ್ಷದ ವೃದ್ಧ ವೀರಣ್ಣ ಆರಾಧ್ಯರಿಂದ ತಾವೇ ಮತಗಟ್ಟೆಗೆ ಆಗಮಿಸಿ ಉತ್ಸುಕರಾಗಿ ಮತ ಚಲಾವಣೆ ಮಾಡಿದರು. ನಗರದ ಅಗ್ರಹಾರದ ನಿವಾಸಿ ವೀರಣ್ಣ, ಕೃಷ್ಣರಾಜ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 142 ರಲ್ಲಿ ಮತ ಚಲಾಯಿಸಿದರು. ನನ್ನ ಮತ ನನ್ನ ಹಕ್ಕು ಎಂದು ಉತ್ಸಾಹದಿಂದ ನುಡಿದು ಇತರರಿಗೂ ಮಾದರಿಯಾದರು.












Click it and Unblock the Notifications