• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಲಪಾಡ್‌ ಇಷ್ಟೊಂದು ಕ್ರೂರಿ ಎಂದು ಗೊತ್ತಿರಲಿಲ್ಲ: ಪ್ರಕಾಶ್ ರೈ

By Yashaswini
|
   ನರೇಂದ್ರ ಮೋದಿ ಡೇಂಜರಸ್ ಪರ್ಸನ್ ಎಂದ ಪ್ರಕಾಶ್ ರಾಜ್ ( ರೈ ) | Oneindia Kannada

   ಮೈಸೂರು, ಫೆಬ್ರವರಿ 26: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿದ್ವತ್ ಮೇಲಿನ ಹಲ್ಲೆ ಆರೋಪಿ ಮೊಹಮ್ಮದ್ ನಲಪಾಡ್‌ನನ್ನು ಈ ಹಿಂದೆ ಹೊಗಳಿದ್ದ ನಟ ಪ್ರಕಾಶ್ ರೈ ಅವರು ಆಗಿನ ತಮ್ಮ ಹೇಳಿಕೆಯಿಂದ ಮುಜುಗರವಾಗಿದೆ ಎಂದು ಹೇಳಿದ್ದಾರೆ.

   ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಪಂಥದವರು ಒಂದೇ ಕಡೆ ಸೇರಿದ್ದು ಒಳ್ಳೆಯದು ಅಂತಾ ಹೇಳಿದ್ದೆ. ಆ ಯುವಕ ಒಳ್ಳೆಯವನು ಅಂತಾ ಕೂಡಾ ಹೇಳಿದ್ದೆ. ವೇದಿಕೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದ. ಆದರೆ ಆ ಯುವಕ ಅಷ್ಟೋಂದು ಕ್ರೂರಿ ಅಂತಾ ಗೊತ್ತಿರಲಿಲ್ಲ. ಇನ್ನು ಮುಂದೆ ಆಲೋಚನೆ ಮಾಡಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ವಿದ್ವತ್‌ ಮೇಲಿನ ಹಲ್ಲೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

   ಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನ

   ಮುಂದುವರೆದು ಮಾತನಾಡಿದ ಅವರು ನಾನು ಸಾಮಾಜಿಕ ಕಳಕಳಿಯಿಂದ ಮಾತನಾಡುವ ಮಾತುಗಳು ಕೂಡ ವಿವಾದ ಸೃಷ್ಠಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ ಅವರು, ನಾನು ಪ್ರಶ್ನಿಸಿದ್ದಕ್ಕೆ ವಿವಾದ ಮಾಡುತ್ತಾರೆ, ಅದು ಅವರ ಸಣ್ಣತನ, ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

   ಹೀಗೆ ಬೆಳೆಸಬೇಕು ನೋಡಿ ಮಕ್ಕಳನ್ನಾ.. ಹ್ಯಾರೀಸ್ ಬೆನ್ನುತಟ್ಟಿದ್ದ ಪ್ರಕಾಶ್ ರೈ

   ಪ್ರಕಾಶ್ ರೈ ಏನೇನು ಮಾತನಾಡಿದರು ತಿಳಿಯಲು ಮುಂದೆ ಓದಿರಿ....

   ಬದುಕಲ ಬಿಡದ ಮನಸ್ಥಿತಿ

   ಬದುಕಲ ಬಿಡದ ಮನಸ್ಥಿತಿ

   ನಾನು ಯಾವ ಸಮುದಾಯದ ವಿರುದ್ಧವೂ ಅಲ್ಲ, ಪರವೂ ಅಲ್ಲ ಎಂದ ಪ್ರಕಾಶ್ ರೈ ನಾನು ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಡಿಸ್ಟರ್ಬ್ ಆಗಿದ್ದೇನೆ ಹಾಗಾಗಿ ಮಾತನಾಡುತ್ತಿದ್ದೇನೆ, ಪ್ರಶ್ನೆಕೇಳುತಿದ್ದೇನೆ. ನಿಮ್ಮ ತಾಯಿ ಕ್ರಿಶ್ಚಿಯನ್ ನೀವು ಇಲ್ಲಿ ಇರಬಾರದು ಎನ್ನುತ್ತಾರೆ ಸಮಾಜದಲ್ಲಿ ನೀನು ಇಲ್ಲಿ ಇರಬಾರದು ಎನ್ನುತ್ತಾರೆ, ನನ್ನನ್ನು ಬದುಕಲು ಬಿಡದ ಕೆಟ್ಟ ಮನಸ್ಥಿತಿಗಳು ಇಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

   ಬಿಜೆಪಿ ದೊಡ್ಡ ರೋಗ

   ಬಿಜೆಪಿ ದೊಡ್ಡ ರೋಗ

   ದೇಹಕ್ಕೆ ದೊಡ್ಡ ರೋಗ ಬಂದಾಗ ಅದರ ಬಗ್ಗೆ ಯೋಚನೆ ಮಾಡುತ್ತೇವೆಯೇ ಹೊರತು ಸಾಮಾನ್ಯ ಕೆಮ್ಮು ನೆಗಡಿ ಬಗ್ಗೆ ಅಲ್ಲ ಎಂದ ಪ್ರಕಾಶ್ ರೈ ಅವರು ಬಿಜೆಪಿ ದೇಶಕ್ಕೆ ಅಂಟಿದ ರೋಗ ಎಂದರು. ಬಿಜೆಪಿಗೆ ಮತ ಹಾಕಬೇಡಿ ಅಂತಾ ಹೇಳಲ್ಲ. ಆದ್ರೆ ಬಿಜೆಪಿ ವಿರುದ್ಧ ಎಚ್ಚೇತ್ತುಕೊಳ್ಳಿ ಅಂತಾ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.

   ಪಕ್ಷವೇ ಅವರನ್ನು ಪ್ರಶ್ನಿಸುತ್ತಿಲ್ಲ

   ಪಕ್ಷವೇ ಅವರನ್ನು ಪ್ರಶ್ನಿಸುತ್ತಿಲ್ಲ

   ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಮತ್ತು ಅನಂತ್‌ಕುಮಾರ್ ಹೆಗಡೆ ಬಗ್ಗೆ ಮಾತನಾಡಿದ ಅವರು 'ಬಿಜೆಪಿ ಪಕ್ಷದ ನಾಯಕರು ಅಂತಾ ಯಾರು ಹೇಳುತ್ತಾರೆ' ಅಂಥವರು ಮಾತು ಕೇಳಿ ಭಯ ಆಗುತ್ತದೆ ಎಂದರು. ಅವರ ಮಾತನ್ನುಅವರ ಪಕ್ಷ ದ ನಾಯಕರೇ ಖಂಡಿಸುತ್ತಿಲ್ಲ. ಈಗಾಗಿಯೇ ಅವರನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ. ದೇಶದಲ್ಲಿ ಕೋಮುವಾದ ಬೆಳೆಸಲು ನಾನು ಎಂ.ಎಲ್.ಎ ಆಗಬೇಕಿಲ್ಲ ಎಂದರು. ನನ್ನ ಮಗ ಸತ್ತಾಗ ಕೂಡಾ ಪ್ರತಾಪ್ ಸಿಂಹ ನನ್ನ ವಿರುದ್ಧ ಹೀನ ಭಾಷೆ ಬಳಸಿ ಮಾತನಾಡಿದ್ದರು ಎಂದರು.

   ಹತ್ಯೆಗಳನ್ನು ಖಂಡಿಸುತ್ತೇನೆ

   ಹತ್ಯೆಗಳನ್ನು ಖಂಡಿಸುತ್ತೇನೆ

   ನಾನು ಯಾವುದೇ ಒಂದು ಧರ್ಮದ ಪರ ಅಲ್ಲ ಎಂದ ಅವರು 'ಕೆಲವರು ಮುಸ್ಲಿಂ ಕೋಮುವಾದಿಗಳು, ಹಿಂದು ಕೋಮುವಾದಿಗಳು ಇದ್ದಾರೆ. ಎಲ್ಲ ರೀತಿಯ ಕೋಮುವಾದವೂ ತಪ್ಪು, ಅದಕ್ಕೆ ನಾನು ಕೋಮುವಾದವನ್ನು ಪ್ರಶ್ನೆ ಮಾಡುತ್ತೇನೆ. ಮನ್ಯಷ್ಯರ ಹತ್ಯೆ ಯಾಗಿದೆ. ಹಿಂದು ಕಾರ್ಯಕರ್ತ,ಮುಸ್ಲಿಂ ಕಾರ್ಯಕರ್ತರ ಅಂತಾ ಅಲ್ಲ. ಈ ಎಲ್ಲಾ ಹತ್ಯೆಯನ್ನ ನಾನು ಖಂಡಿಸುತ್ತೇನೆ ಎಂದರು.

   ಯೋಜನೆಯ ನಿರ್ವಹಣೆ ಆಗಿಲ್ಲ

   ಯೋಜನೆಯ ನಿರ್ವಹಣೆ ಆಗಿಲ್ಲ

   ಮೋದಿ ಸ್ವಚ್ಛ ಭಾರತ ಯೋಜನೆ ಅದ್ಭುತ ಯೋಜನೆ ಎಂದು ಹೊಗಳಿದ ಪ್ರಕಾಶ್ ರೈ ಆದರೆ ಯೋಜನೆಯನ್ನು ಹಳ್ಳ ಹಿಡಿಸಲಾಗಿದೆ ಎಂದರು. ಸ್ವಚ್ಛ ಭಾರತ್ ಯೋಜನೆ ನಿರ್ಮಾಣವಾದ ಶೌಚಾಲಯಗಳು ಬಾಕ್ಸ್ ಗಳಂತಿವೆ. ಒಬ್ಬ ಹೆಣ್ಣು ಮಗಳು ಬಟ್ಟೆ ಬದಲಿಸಲು ಸಾಧ್ಯವಾಗೋದಿಲ್ಲ. 12 ಸಾವಿರದಲ್ಲಿ ಸರಿಯಾಗಿ ಶೌಚಾಲಯ ಕಟ್ಟಲು ಸಾಧ್ಯವಾ ಎಂದು ಅವರು ಪ್ರಶ್ನಿಸಿದರು. ನಿರ್ವಹಣೆ ಮಾಡದೆ, ಇವತ್ತು ಶೌಚಾಲಯ ಗೋಡೌನ್ ಗಳಂತಾಗಿವೆ ಎಂದರು.

   ಬಿಜೆಪಿಯಿಂದ ರಾಜ್ಯಕ್ಕೆ ಕಪ್ಪು ಹಣ?

   ಬಿಜೆಪಿಯಿಂದ ರಾಜ್ಯಕ್ಕೆ ಕಪ್ಪು ಹಣ?

   ಭ್ರಷ್ಟಾಚಾರಕ್ಕಿಂತಲೂ ಕೋಮುವಾದವೇ ದೇಶಕ್ಕೆ ಮಾರಕ ಎಂದ ಪ್ರಕಾಶ್ ರೈ 'ನನಗೆ ಭ್ರಷ್ಟಾಚಾರಕ್ಕಿಂದ ಕೋಮು ಸೌಹಾರ್ದತೆ ಮುಖ್ಯ' ಎಂದರು. ಬಿಜೆಪಿ ಕೂಡ ಭ್ರಷ್ಟ ಪಕ್ಷ ಎಂದ ಅವರು ಗುಜರಾತ್ ಚುನಾವಣೆ, ಈ ರಾಜ್ಯದ ಚುನಾವಣೆಗೆ ಬಿಜೆಪಿ ಮಂದಿ ಕಪ್ಪು ಹಣ ತಂದಿಲ್ವ.? ಎಂದು ಪ್ರಶ್ನಿಸಿದರು.

   ಸುಳ್ಳು ಹೇಳಿದ್ದಾರೆ

   ಸುಳ್ಳು ಹೇಳಿದ್ದಾರೆ

   ಮೋದಿ ದೇಶಕ್ಕೆ ಅಪಾಯಕಾರಿ ಎಂದ ಅವರು 'ಮೋದಿ ಮೋಸ್ಟ್ ಡೇಂಜರಸ್ ಪರ್ಸನ್' ಎಂದರು. 15 ಲಕ್ಷ ಹಣ ಅಕೌಂಟ್ ಹಾಕ್ತೇನೆ ಅಂತಾ ಸುಳ್ಳು ಹೇಳಿದ್ದಾರೆ. ಜಿಎಸ್ ಟಿ ತಂದ ಹಿನ್ನಲೆ ಗುಡಿಕೈಗಾರಿಕೆಗಳು ಮುಚ್ಚಲು ಕಾರಣ ಕರ್ತರಾಗಿದ್ದಾರೆ ಎಂದು ಆರೋಪ ಮಾಡಿದರು.

   ಮೋದಿ, ಅಮಿತ್ ಶಾ, ಹೆಗಡೆ ಹಿಂದೂ ಅಲ್ಲ: ನಟ ಪ್ರಕಾಶ್ ರೈ

   ಕೈಯಲ್ಲಿ 20 ಸಿನಿಮಾ ಇವೆ

   ಕೈಯಲ್ಲಿ 20 ಸಿನಿಮಾ ಇವೆ

   ತಮ್ಮ ಸಿನಿಮಾ ಅವಕಾಶಗಳು ಕಡಿಮೆ ಆಗಿವೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ ನನ್ನ ಮಾರ್ಕೆಟಿಂಗ್ ಬಿದ್ದಿಲ್ಲ. ಈಗಲೂ 20 ಸಿನಿಮಾಗಳಿಗೆ ಡೆಟ್ ಕೇಳಿದ್ದಾರೆ. ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಇತ್ತೀಚಿನ ಬೆಳವಣಿಗೆಗಳ ಬೆನ್ನಲ್ಲೆ ಮಾರ್ಕೆಟ್ ಬಿದ್ದಿದೆ ಎಂಬುದು ಸುಳ್ಳು ಸುದ್ದಿ ಎಂದರು.

   ಯಾಕೆ ಸಮಸ್ಯೆ ಬಗಿಹರಿಸಿಲ್ಲ

   ಯಾಕೆ ಸಮಸ್ಯೆ ಬಗಿಹರಿಸಿಲ್ಲ

   ಕಾವೇರಿ ಹಾಗೂ ಮಹದಾಯಿ ವಿಚಾರ ಮಾತನಾಡಿದ ಅವರು 'ನಾವು ಇದೇ ರೀತಿ ಜಗಳವಾಡ್ತಿದ್ರೆ ಇನ್ನ ಹತ್ತು ವರ್ಷಗಳಲ್ಲಿ ಕಾವೇರಿಯೇ ಬತ್ತಿಹೋಗ್ತಾಳೆ' ಎಂದರು. ರಾಜಕೀಯ ಪಕ್ಷಗಳು ಜನರನ್ನ ಉದ್ರೇಕಿಸಿ ಪೊಲಿಟಿಕಲ್ ಮೈಲೇಜ್ ತಗೊಳ್ತಿದ್ದಾರೆ, ಬರಗಾಲ ಅನ್ನೊದು ರಾಜಕಾರಣಿಗಳಿಗೆ ಬಂಡವಾಳವಾಗಿದೆ. ದೇಶ ರಾಜ್ಯ ಆಳಿದ ಇಷ್ಟೊಂದು ಪ್ರಧಾನ ಮಂತ್ರಿಗಳು ,ಮುಖ್ಯಂತ್ರಿಗಳಿಂದ ಯಾಕೇ ಕಾವೇರಿ ,ಮಹದಾಯಿ ಸಮಸ್ಯೆ ಯಾಕೆ ಬಗೆಹರಿಸಿಲ್ಲ ಎಂದು ಪ್ರಶ್ನಿಸಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Actor Prakash Rai says 'did not know Mohammad Nalapad was so cruel'. He talked to media in Mysuru and lambasted on BJP and Prathap Simha and Ananth Kumar Hegde.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more