Power Cut: ಈ ಭಾಗಗಳಲ್ಲಿ ಡಿಸೆಂಬರ್ 17ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 17ರಂದು ಮೈಸೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದವತಿಯಿಂದ ಮೈಸೂರು ನಗರದ 66/11 ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳಲಾಗುತ್ತದೆ. ಈ ಹಿನ್ನೆಲೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅನಿಯಮಿತ ವ್ಯತ್ಯಯ ಉಂಟಾಗಲಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ವಿತರಣಾ ವ್ಯವಸ್ಥೆಯ ಸುಧಾರಣೆ, ಸುರಕ್ಷತೆ ಹಾಗೂ ನಿರಂತರ ಸರಬರಾಜು ಖಚಿತ ಪಡಿಸುವ ಉದ್ದೇಶದಿಂದ ಈ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಈ ಅವಧಿಯಲ್ಲಿ 66/11 ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದ ಫೀಡರ್‌ಗಳಲ್ಲಿ ತಾಂತ್ರಿಕ ತಪಾಸಣೆ, ದುರಸ್ತಿ ಮತ್ತು ಅಗತ್ಯ ಸುಧಾರಣಾ ಕಾರ್ಯಗಳು ನಡೆಯಲಿವೆ. ಕಾಮಗಾರಿಯ ವೇಳೆ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತ ಆಗುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಕೆಲಸ ಬೇಗ ಮುಗಿದರೆ, ಆಗಲೇ ವಿದ್ಯುತ್ ಸರಬರಾಜು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಎಲ್ಲೆಲ್ಲಿ ಕರೆಂಟ್ ಕಟ್?: ಕೆಸರೆ ಮೊದಲನೇ ಮತ್ತು ಎರಡನೇ ಹಂತ, ಸುಭಾಷಾ ನಗರ, ಶೋಭಾ ಗಾರ್ಡನ್, ಆರ್.ಎಸ್. ನಾಯ್ಡು ನಗರ, ಎನ್.ಆರ್. ಗಾರ್ಡನ್, ಬೆಲವತ್ತ, ಶ್ಯಾದನಹಳ್ಳಿ, ನಾಗನಹಳ್ಳಿ, ಹೊಸ ಬಡಾವಣೆ, ಕೆ.ಆರ್.ಮಿಲ್ ಕಾಲೋನಿ, ವರುಣಾ ಚಾನೆಲ್, ಸಿದ್ದಲಿಂಗಪುರ, ಕಳಸ್ತಾವಾಡಿ, ಲಕ್ಷ್ಮಿಪುರಂ ಸೇರಿದಂತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಸಾರ್ವಜನಿಕರು ನಿಗಮದ ನಿರ್ವಹಣಾ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದೆ. ಚಾ.ವಿ.ಸ.ನಿ.ನಿ.ಯ ನ.ರಾ. ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಈ ಕಾಮಗಾರಿ ಪೂರ್ಣಗೊಂಡ ಬಳಿಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮತ್ತಷ್ಟು ಬಲಿಷ್ಠ ಆಗಲಿದೆ ಎಂದು ತಿಳಿಸಲಾಗಿದೆ. ಇನ್ನೂ ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆಯೋ ಆ ಭಾಗಗಳ ಜನರು ಮುಂಚಿತವಾಗಿ ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಇನ್ನಿತರೆ ಚಾರ್ಜಿಂಗ್ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಮನವಿ ಮಾಡಿದೆ.











Click it and Unblock the Notifications