ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢ ಮಾಸದ ಕೊನೆ ಶುಕ್ರವಾರ: ಚಾಮುಂಡೇಶ್ವರಿ ದರ್ಶನ ಪಡೆದ ರಾಜಕಾರಣಿಗಳು

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 10 : ಆಷಾಢ ಮಾಸದ ಕೊನೆ ಶುಕ್ರವಾರ ಹಿನ್ನೆಲೆಯಲ್ಲಿ ಭಕ್ತಾದಿಗಳ ಜೊತೆಗೆ ವಿಐಪಿಗಳು, ಸಿನಿಮಾ ನಟರು, ರಾಜಕಾರಣಿಗಳ ದಂಡೇ ಹರಿದುಬರುತ್ತಿದೆ. ಚಾಮುಂಡಿ ಬೆಟ್ಟಕ್ಕೆ ಸ್ವಕುಟುಂಬ ಸಮೇತರಾಗಿ ಆಗಮಿಸಿದ ಸಚಿವ ಡಿ.ಕೆ ಶಿವಕುಮಾರ್, ತಾಯಿ ಚಾಮುಂಡಿ ದರ್ಶನ ಪಡೆದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಒಳ್ಳೆ ಬೆಳೆಯಾಗಿದೆ. ತಾಯಿ ಚಾಮುಂಡೇಶ್ವರಿ ನಾಡಿಗೆ ಒಳಿತು ಮಾಡಿದ್ದಾಳೆ ಎಂದರು.

ಇತಿಹಾಸ ಬರೆಯುತ್ತಿದೆ ಕಬಿನಿ ಹೊರಹರಿವು: ನಂಜನಗೂಡು ಭಾಗಶಃ ಜಲಾವೃತಇತಿಹಾಸ ಬರೆಯುತ್ತಿದೆ ಕಬಿನಿ ಹೊರಹರಿವು: ನಂಜನಗೂಡು ಭಾಗಶಃ ಜಲಾವೃತ

ಕಬಿನಿ‌ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಕಬಿನಿ‌ ಸೇರಿದಂತೆ ಎಲ್ಲಾ ನದಿ ಪಾತ್ರದ ಜನರಿಗೆ‌ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರವಾಹ ಉಂಟಾಗುವಂತಹ ಸ್ಥಳಗಳಲ್ಲಿ‌ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇವೆ.

Politicians are getting the Chamundeshwari darshan in Mysuru

ರೈತರ ಸಾಲ ಮನ್ನಾ ವಿಚಾರದಲ್ಲಿ ಕ್ಲಾರಿಟಿ ಇಲ್ಲ‌ ಅನ್ನೊ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಡಿ.ಕೆ ಶಿವಕುಮಾರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದರು.

ಚಾಮುಂಡೇಶ್ವರಿ ದರ್ಶನ ಪಡೆದ ಬಿ.ವೈ. ವಿಜಯೇಂದ್ರ

ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಇಂದು ಬೆಳಗಿನ ಜಾವವೇ ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟ ಹತ್ತಿ ನರೇಂದ್ರ ಮೋದಿ ಮತ್ತೆ ಪಿಎಂ ಆಗಲಿ ಅಂತ ಪ್ರಾರ್ಥನೆ ಸಲ್ಲಿಸಿದರು.

ಮೈಸೂರು: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್ಮೈಸೂರು: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ನರೇಂದ್ರ ಮೋದಿ ಅವರು ಇಂದು ವಿಶ್ವನಾಯಕರಾಗಿದ್ದಾರೆ. ಅವರ ನಾಯಕತ್ವ ದೇಶಕ್ಕೆ ಬೇಕಿದೆ. ಈ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

Politicians are getting the Chamundeshwari darshan in Mysuru

ಇದೇ ಮೊದಲ ಬಾರಿಗೆ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುತ್ತಿರುವುದು ಸಂತಸ ತಂದಿದೆ ಎಂದು ಖುಷಿಪಟ್ಟರು.

ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಚ್.ಡಿ ರೇವಣ್ಣ

ಆಷಾಢ ಮಾಸದ ಕೊನೆ ಶುಕ್ರವಾರ ಹಿನ್ನಲೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕಿದ ಸಚಿವ ಎಚ್ ಡಿ ರೇವಣ್ಣ ದೇವಿ ದರ್ಶನ ಪಡೆದು ದೌಡಾಯಿಸಿದರು. ಕಮಿಷನ್ ಸರ್ಕಾರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನನ್ನೇ ಕೇಳಿ‌. ದೇವಿ ದರ್ಶನ ಮಾಡಿದ್ದೇನೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದಷ್ಟೆ ಹೇಳಿ ತೆರಳಿದರು.

Politicians are getting the Chamundeshwari darshan in Mysuru

ಇದೇ ವೇಳೆ ಜಯ‌ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ‌ರೈ ಸಹ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

English summary
Today Last Friday of the month of Ashada therefore VIPs, cinema actors and politicians are getting the Chamundeshwari darshan in Mysuru District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X