ವಿಶ್ವಯೋಗ ದಿನ; ಮೋದಿ ಮೈಸೂರು ಕಾರ್ಯಕ್ರಮಕ್ಕೆ ಸ್ಥಳ ಅಂತಿಮ

ಮೈಸೂರು ಮೇ 30: "ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಜೂನ್‌ 21 ರಂದು ಮೈಸೂರಿನಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ರೇಸ್ ಕೋರ್ಸ್ ಹಾಗೂ ಅರಮನೆ ಆವರಣವನ್ನು ಪರಿಶೀಲನೆ ಮಾಡಲಾಗಿತ್ತು. ಅಂತಿಮವಾಗಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ಅರಮನೆ ಮುಂಭಾಗ ಮೋದಿ ಅವರ ಯೋಗ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಆಗಮನ ಮೈಸೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಸಂತಸ ಮತ್ತು ಹೆಮ್ಮೆ ತರುತ್ತಿದೆ. ಕೇವಲ ಒಂದು ದಿನ ಮಾತ್ರ ಮೋದಿ ಅವರ ಜೊತೆ ಯೋಗ ಮಾಡುವುದಲ್ಲ, ಅಂದಿನಿಂದ ಪ್ರತಿದಿನ ಎಲ್ಲರೂ ಯೋಗ ಮಾಡುವುದಕ್ಕೆ ಪ್ರಾರಂಭಿಸಬೇಕು. ಮೋದಿ ಆಗಮನ ಯೋಗ ಆರಂಭಿಸಲು ಎಲ್ಲರಿಗೂ ಪ್ರೇರಪಣೆಯಾಗಲಿ" ಎಂದರು.

PM Narendra Modi To Attend Yoga program In Mysuru palace Says Pralhad Joshi

ಜಿಲ್ಲಾಡಳಿತದಿಂದ ಸಿದ್ಧತೆ; "ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವುದರಿಂದ ಜಿಲ್ಲಾಡಳಿತ ಈಗಾಗಲೇ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ" ಎಂದು ಜಿಲ್ಲಾಧಿಕಾರಿ ಗೌತಮ್‌ ಬುಗಾದಿ ತಿಳಿಸಿದ್ದಾರೆ. ಇದಕ್ಕಾಗಿ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ತೆರವು ಮಾಡಲಾಗಿದೆ. ರಸ್ತೆ ದುರಸ್ಥಿ ಮತ್ತ ಸ್ವಚ್ಛತಾ ಕಾರ್ಯಗಳು ನಗರದಲ್ಲಿ ಸಾಗುತ್ತಿವೆ.

PM Narendra Modi To Attend Yoga program In Mysuru palace Says Pralhad Joshi

ಸುತ್ತೂರು ಮಠದಲ್ಲಿ ತಾಲೀಮು; ಜೂನ್ 21ರಂದು ಸಾಂಸ್ಕೃತಿಕ ನಗರಕ್ಕೆ ಪ್ರಧಾನ ಮಂತ್ರಿ ಆಗಮಿಸುವುದರಿಂದ ಸಿದ್ಧತೆ ಬರದಿಂದ ಸಾಗುತ್ತಿದೆ. ಯೋಗ ಫಡರೇಷನ್‌ ಆಫ್‌ ಮೈಸೂರು ವತಿಯಿಂದ ಭಾನುವಾರ ಚಾಮುಂಡಿ ಬೆಟ್ಟದ ಪಾದದ ಬಳಿಯಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಎರಡನೇ ಹಂತದ ಯೋಗ ತಾಲೀಮು ನಡೆಸಲಾಯಿತು. ಒಂದು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಈ ತಾಲೀಮಿನಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+