ಮೈಸೂರು ಸಮೀಪ ಬೋರ್‌ ವೆಲ್ ನಲ್ಲಿ ಪೆಟ್ರೋಲ್ ಮಿಶ್ರಿತ ನೀರು

ಮೈಸೂರು, ಫೆಬ್ರವರಿ 23: ಮೈಸೂರು ಸಮೀಪದ ಸಿದ್ದಲಿಂಗಪುರದ ಪ್ರಕಾಶ್‌ ಎಂಬುವರು ತೋಡಿಸಿರುವ ಬೋರ್‌ ವೆಲ್ ನಲ್ಲಿ ಪೆಟ್ರೋಲ್‌ ಮಿಶ್ರಿತ ನೀರು ಬರುತಿದ್ದು, ಸ್ಥಳೀಯರಲ್ಲಿ ಕುತೂಹಲ ಸೃಷ್ಟಿಸಿದೆ.

ಈ ಬೋರ್‌ ವೆಲ್ ನ್ನು ತೋಡಿಸಿ ೫ ವರ್ಷಗಳಾಗಿದ್ದು, ನೀರು ಸರಿಯಾಗೇ ಬರುತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಸೀಮೆಎಣ್ಣೆ ವಾಸನೆಯುಳ್ಳ ನೀರು ಬರುತಿತ್ತು. ಆದರೆ ಇದನ್ನು ಕುಡಿಯಲು ಆಗುವುದಿಲ್ಲ ಎಂದು ಮನೆ ಮಾಲೀಕ ಪ್ರಕಾಶ್‌ ತಿಳಿಸಿದರು.

ಇದೀಗ ಈ ನೀರು ಮಣ್ಣಿನ ಬಣ್ಣಕ್ಕೆ ತಿರುಗಿದ್ದು, ನೆಲಕ್ಕೆ ಚೆಲ್ಲಿ ಬೆಂಕಿ ಹಚ್ಚಿದರೆ ಉರಿಯುತ್ತಿದೆ. ಮನೆಯ ಎದುರುಗಡೆ ಪೆಟ್ರೋಲ್‌ ಬಂಕ್ ಇದ್ದು ಅದರ ಭೂಮಿಯೊಳಗಿನ ಟ್ಯಾಂಕ್‌ ನಿಂದ ಸೋರಿಕೆಯಾಗಿ ನೀರಿನೊಳಗೆ ಮಿಶ್ರಣ ಆಗಿರಬಹುದೆಂದು ಶಂಕಿಸಲಾಗಿದೆ.

Petrol Mixed Water In Borewell Near Mysuru

ಈ ವಿಷಯವನ್ನು ಪೆಟ್ರೋಲ್‌ ಬಂಕ್ ಮಾಲೀಕರಿಗೆ ತಿಳಿಸಿದಾಗ, ನಮ್ಮಿಂದ ಸೋರಿಕೆ ಆಗಿಲ್ಲ ನಮ್ಮ ಸ್ಟಾಕ್‌ ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ. ಈಗ ಬೋರ್‌ವೆಲ್ ನೀರು ಬಳಕೆಗೆ ಬಾರದಂತಾಗಿದೆ.

Petrol Mixed Water In Borewell Near Mysuru

ಈ ಬೋರ್‌ ವೆಲ್ ಪೆಟ್ರೋಲ್‌ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ನಂತರವೇ ಇದರ ನಿಖರವಾದ ಕಾರಣ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+