ಹುಷಾರ್! ಮೈಸೂರಿನಲ್ಲೀಗ ಪೆಟ್ರೋಲ್ ಕಳ್ಳರ ಹಾವಳಿ
ಮೈಸೂರು, ಜನವರಿ 4: ಅರಮನೆ ನಗರಿಯಲ್ಲೀಗ ಪೆಟ್ರೋಲ್ ಕಳ್ಳರ ಹಾವಳಿ ಶುರುವಾಗಿದೆ. ಬೆಳ್ಳಂಬೆಳಿಗ್ಗೆ ಜನರೆಲ್ಲಾ ಸುಖ ನಿದ್ದೆಯಲ್ಲಿರುವಾಗ ಪೆಟ್ರೋಲ್ ಕಳ್ಳತನಕ್ಕೆ ಇಳಿಯುತ್ತಿದ್ದಾರೆ ಖತರ್ ನಾಕ್ ಕಳ್ಳರು.

ಈಚೆಗೆ ಮೈಸೂರಿನಲ್ಲಿ ಮನೆಗಳ್ಳರು, ಸರಗಳ್ಳರ ಕಾಟ ಹೆಚ್ಚಾಗಿತ್ತು. ಈ ನಡುವೆಯೇ ಪೆಟ್ರೋಲ್ ಕಳ್ಳತನವೂ ಆರಂಭವಾಗಿದೆ. ಮೈಸೂರಿನ ಮುಖ್ಯ ನಗರಗಳಲ್ಲೇ ವಾಹನಗಳ ಪೆಟ್ರೋಲ್ ಕದಿಯುವ ಪ್ರಕರಣಗಳು ನಡೆಯುತ್ತಿವೆ.
ಬೆಳಗಿನ ಜಾವ ಮೂರು ಗಂಟೆ ಬಳಿಕ ಪೆಟ್ರೋಲ್ ಕದಿಯುವ ಕಾರ್ಯಾಚರಣೆಗೆ ಇಳಿಯುತ್ತಿದ್ದಾರೆ ಇವರು. ಮನೆಗಳ ಮುಂದೆ ನಿಲ್ಲಿಸಿರುವ ಗಾಡಿಗಳಿಂದ ಪೆಟ್ರೋಲ್ ಕದಿಯುವುದೇ ಕಾಯಕ ಮಾಡಿಕೊಂಡಿದ್ದಾರೆ.
ಹೀಗೆ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಗ್ಯಾಂಗೊಂದು ಪೆಟ್ರೋಲ್ ಕದಿಯುತ್ತಿರುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಕಳ್ಳರ ಹಾವಳಿಯಿಂದಾಗಿ ವಾಹನ ಸವಾರರು ಕಂಗಾಲಾಗಿದ್ದು, ಪೊಲೀಸರು ರಾತ್ರಿ ಗಸ್ತನ್ನು ತೀವ್ರಗೊಳಿಸಿ ಪೆಟ್ರೋಲ್ ಕಳ್ಳರ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications