6 ಕೋಟಿ ಸಾಲಕ್ಕೆ ಮೂಡ ಸೈಟ್ ನಕಲಿ ದಾಖಲೆ; ಬಂಧನ

ಮೈಸೂರು, ಜನವರಿ 06: ಮೈಸೂರು ನಗರಾಭಿೃದ್ಧಿ ಪ್ರಾಧಿಕಾರದ (ಮೂಡ) ನಿವೇಶನದ ನಕಲಿ ದಾಖಲೆಗಳನ್ನು ಅಡಮಾನವಿಟ್ಟು 6 ಕೋಟಿ ಸಾಲ ಪಡೆಯಲು ಪ್ರಯತ್ನ ನಡೆಸಿದ ಘಟನೆ ನಡೆದಿದೆ. ನಕಲಿ ದಾಖಲಾತಿಗಳನ್ನು ಸಿದ್ಧಪಡಿಸಿದ್ದ ವಂಚಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮೈಸೂರು ನಗರದ ಯಾದವಗಿರಿಯ ನಿವೇಶನಕ್ಕೆ ಸಂಬಂಧಿಸಿದಂತೆ ಎಸ್‌ಬಿಐನಲ್ಲಿ 6 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಾಲ ನೀಡುವ ಸಂಬಂಧ ಬ್ಯಾಂಕಿನವರು ತಮ್ಮ ವಕೀಲರಾದ ಸ್ಮಿತಾ ದೇವಯ್ಯ ಅವರಿಗೆ ಕಡತವನ್ನು ಕಳಿಸಿದ್ದರು.

ಸಾಲಕ್ಕಾಗಿ ನೀಡಿದ್ದ ನಿವೇಶನದ ದಾಖಲಾತಿಗಳ ಬಗ್ಗೆ ಸಂಶಯ ಮೂಡಿದ ಕಾರಣ ವಕೀಲೆ ಸ್ಮಿತಾ ಅವರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಶೋಧನೆ ನಡೆಸಿದಾಗ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ನಿವೇಶನಕ್ಕೂ ಅಲ್ಲಿದ್ದ ದಾಖಲೆಗಳಿಗೂ ತಾಳೆ ಆಗದಿರುವುದು ಕಂಡು ಬಂದಿದೆ.

People Arrested For Making Fake Documents For Loan

ಈ ನಿವೇಶನಗಳು ಸಿಐಟಿಬಿಯಿಂದ ಮಂಜೂರಾಗಿರುವ ನಿವೇಶನ ಎಂಬಂತೆ ನಕಲಿ ದಾಖಲಾತಿಗಳನ್ನು ತಯಾರು ಮಾಡಲಾಗಿತ್ತು. ಸ್ಮಿತಾ ಅವರು ಮೂಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಮತ್ತು ಆಯುಕ್ತ ನಟರಾಜ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.

ನಕಲಿ ದಾಖಲಾತಿಗಳನ್ನು ಮಾಡಿದ್ದ ವಂಚಕರನ್ನು ಬಂಧಿಸಲು ಯೋಜನೆ ರೂಪಿಸಲಾಗಿದೆ.
ಮತ್ತಷ್ಟು ಮಾಹಿತಿ ಬೇಕೆಂದು ಸಾಲ ಪಡೆಯುವವರಿಗೆ ಸ್ಮಿತಾ ಅವರು ತಿಳಿಸಿದ್ದರು. ಮೂವರು ಸಹ ಸ್ಮಿತಾ ಅವರ ಕಛೇರಿಗೆ ಆಗಮಿಸಿದ್ದರು.

ಆಗ ಕಚೇರಿಯಲ್ಲಿದ್ದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಸ್ಐಆರ್ ದಾಖಲಾಗಿದೆ. ಸಮಯ ಪ್ರಜ್ಞೆ ಮೆರೆದು ಕೋಟ್ಯಾಂತರ ರೂಪಾಯಿ ವಂಚನೆ ತಪ್ಪಿಸಿದ ಸ್ಮಿತಾ ಅವರನ್ನು ರಾಜೀವ್ ಅವರು ಅಭಿನಂದಿಸಿದರು.

ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳು ಸಾಲ ಕೊಡುವ ವೇಳೆ ದಾಖಲಾತಿಗಳ ನೈಜತೆಯನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಮೂಡ ಅಧ್ಯಕ್ಷ ಬ್ಯಾಂಕ್‌ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+