• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಪ್ರವೀಣರೇ... ಮೈಸೂರು ದಸರಾ ಆಹಾರ ಮೇಳದಲ್ಲಿದೆ ಅವಕಾಶ!

|

ಮೈಸೂರು, ಆಗಸ್ಟ್ 27: ಮೈಸೂರು ದಸರಾದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ, ಬಾಯಲ್ಲಿ ನೀರೂರಿಸುವ ಥರಾವರಿ ಭಕ್ಷ್ಯಭೋಜನಗಳ ಆಹಾರ ಮೇಳ ಆಹಾರಪ್ರಿಯರ ಗಮನ ಸೆಳೆಯುತ್ತದೆ. ಇಲ್ಲಿ ಹಲವು ಬಗೆಯ, ವಿವಿಧ ಕಡೆಗಳ ತಿನಿಸುಗಳನ್ನು ಸವಿಯಲೆಂದೇ ಜನ ತಂಡೋಪತಂಡವಾಗಿ ಬರುತ್ತಾರೆ.

ಮೊದಲು ದಸರಾ ಆಹಾರ ಮೇಳ ನವರಾತ್ರಿಯ ದಿನಗಳಲ್ಲಿ ಮಾತ್ರ ನಡೆಯುತ್ತಿದ್ದರೆ, ಈ ಬಾರಿ ಸೆ.29ರಿಂದ ಅ.16ರವರೆಗೆ

ಮೈಸೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಬೇಡನ್ ಪೋವಲ್ ಶಾಲಾ ಆವರಣ ಮತ್ತು ಲಲಿತ್ ಮಹಲ್ ಹೋಟೆಲ್ ಪ್ಯಾಲೆಸ್ ಪಕ್ಕದ ಮುಡಾ ಮೈದಾನದಲ್ಲಿ ನಡೆಯಲಿದೆ.

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಟಿಬೆಟಿಯನ್ ಆಹಾರ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತದ ಆಹಾರ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರಗಳು ಇರಲಿವೆ. ಜೊತೆಗೆ ಅಂತರ ರಾಷ್ಟ್ರೀಯ ಚೈನೀಸ್ ಆಹಾರ, ಇಟಾಲಿಯನ್ ಆಹಾರ ಶೈಲಿ, ಫ್ರೆಂಚ್‌ ಆಹಾರ ಹಾಗೂ ಆಫ್ರಿಕನ್ ಅಡುಗೆಗಳು ಇರಲಿವೆ.

ಇಷ್ಟೇ ಅಲ್ಲದೆ, ಬುಡಕಟ್ಟು ಶೈಲಿ, ಸಹಜಕೃಷಿ ಆಹಾರ, ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಶೈಲಿ ಆಹಾರಗಳು, ಬೇಕರಿ ಮತ್ತು ಕಾಂಡಿಮೆಂಟ್ ‌ಗಳು, ಚಾಕೊಲೇಟ್ ಮಳಿಗೆಗಳು, ಐಸ್‌ಕ್ರೀಂ ಪಾರ್ಲರ್ ‌ಗಳು, ಸಾಂಪ್ರದಾಯಿಕ ಸಿಹಿ ತಿಂಡಿ, ತಂಪು ಪಾನೀಯಗಳು, ಚಾಟ್ಸ್ ‌ಗಳು, ಸಿರಿಧಾನ್ಯ, ಸಹಜ ಹಾಗೂ ಸಾವಯವ ಧಾನ್ಯಗಳ ಅಡುಗೆಗಳು ಇಲ್ಲಿರಲಿವೆ. ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್‌ಗಳು ಹಾಗೂ ಸಂಘ ಸಂಸ್ಥೆಗಳು, ರೆಸ್ಟೊರೆಂಟ್ ಸೇರಿದಂತೆ ಪಾಕಪ್ರವೀಣರು ಆಹಾರ ಮಳಿಗೆಯನ್ನು ಇಲ್ಲಿ ತೆರೆಯಲು ಅವಕಾಶವಿದೆ.

ಮಳಿಗೆ ತೆರೆಯಲು ಇಚ್ಛಿಸುವವರು ಅರ್ಜಿಗಳನ್ನು ರೂಂ ನಂ.33, 2ನೇ ಮಹಡಿ, ಹೊಸ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಸಿದ್ದಾರ್ಥನಗರ, ಮೈಸೂರು ಇಲ್ಲಿಂದ ಸೆ.16ರೊಳಗಾಗಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೆ.18 ರೊಳಗೆ ಸಲ್ಲಿಸಬಹುದು.

ಇಂದು ಮೈಸೂರು ಅರಮನೆ ತಲುಪಲಿದೆ ಜಂಜೂಸವಾರಿ ಆನೆಗಳು

ಅಲ್ಲದೆ, ಹೆಚ್ಚಿನ ಮಾಹಿತಿಗೆ ಪಿ.ಶಿವಣ್ಣ, ಜಂಟಿ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮೊಬೈಲ್ ಸಂಖ್ಯೆ: 9448439392, ಕುಮಾರ್-9902248619, ಸುರೇಶ್- 8722104052, ನವೀನ್-7406983767, ಮಾದೇಗೌಡ-890939533, ಶಶಿಧರನಾಯಕ-9632960615 ಹಾಗೂ ಕಚೇರಿಯ ದೂರವಾಣಿ ಸಂಖ್ಯೆ : 0821-2422107ನ್ನು ಸಂಪರ್ಕಿಸಬಹುದು.

English summary
This year, the food festival will be held from September 29 to 16 at Muda Grounds in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X