• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಶುರುವಾಗಿದೆ ಡ್ರೋನ್ ಬಳಕೆ

|

ಮೈಸೂರು, ಜನವರಿ 18: ಅಕ್ರಮ ಗಣಿಗಾರಿಕೆ, ಕಟ್ಟಡ ನಿರ್ಮಾಣದ ಕಲ್ಲುಗಳ ಸಾಗಣೆ, ಅತಿಕ್ರಮಣ ಹಾಗೂ ಒತ್ತುವರಿಯನ್ನು ಕಡಿವಾಣ ಹಾಕಲು ಡಿಜಿಟಲ್ ಲೆಕ್ಕಪರಿಶೋಧನೆಗಾಗಿ ಮುಂದಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಈ ಸಂಬಂಧ ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ರಾಜ್ಯದ ಎಲ್ಲಾ ಕ್ವಾರಿಗಳ ಸಮೀಕ್ಷೆ ನಡೆಸುತ್ತಿದೆ. ಈ ಸರ್ವೇ ಕಾರ್ಯ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

ರಾಜ್ಯದಲ್ಲಿರುವ ಉಪ ಖನಿಜಗಳ 2,400 ಕ್ವಾರಿಗಳು ಹಾಗೂ ಸ್ಥಗಿತಗೊಂಡ ಸುಮಾರು 2,300 ಕ್ವಾರಿಗಳನ್ನು ಗುರುತಿಸಿ ಡಿಜಿಪಿಎಎಸ್ ತಂತ್ರಜ್ಞಾನ ಬಳಸಿ ಹಾಗೂ ಡ್ರೋನ್ ಮೂಲಕ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳುತ್ತಿದೆ. ಈಗಾಗಲೇ ಶೇ.60ಷ್ಟು ಸರ್ವೆ ಸಂಪೂರ್ಣಗೊಂಡಿದೆ.

ಡ್ರೋನ್ ಬಳಕೆಗೆ ಬಂತು ಕೇಂದ್ರ ಸರಕಾರದ ನೀತಿ, ಅದರಲ್ಲಿ ಏನೈತಿ?

ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಮತ್ತು ಗ್ರಾಮಾಂತರ, ಶಿವಮೊಗ್ಗ ಸೇರಿದಂತೆ ಮುಂತಾದ ಕಡೆ ಈ ಬಹುತೇಕ ಸಮೀಕ್ಷೆ ಸಂಪೂರ್ಣಗೊಂಡಿದೆ. ಇದರೊಟ್ಟಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಸಮೀಕ್ಷೆ ಕಾರ್ಯ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಗಣಿ ಮತ್ತು ಭೂಗರ್ಭ ಇಲಾಖೆ ಅಂಕಿ ಅಂಶಗಳ ಪ್ರಕಾರ ಹಾಲಿ 2, 350 ಸಣ್ಣ ಪ್ರಮಾಣದ ಖನಿಜಗಳ ಗಣಿಗಾರಿಕೆ ಮತ್ತು 378 ದೊಡ್ಡ ಪ್ರಮಾಣದ ಖನಿಜಗಳ ಗಣಿಗಾರಿಕೆ ರಾಜ್ಯದಲ್ಲಿ ನಡೆಯುತ್ತಿದೆ. ಇದರಲ್ಲಿ ಬಹುತೇಕ ಕಲ್ಲು ಗಣಿಗಾರಿಕೆಯಾಗಿದೆ.

 1000 ಕೋಟಿ ರೂ.ದಂಡ ಸಂಗ್ರಹ

1000 ಕೋಟಿ ರೂ.ದಂಡ ಸಂಗ್ರಹ

ಗಣಿ ಇಲಾಖೆಯ ಡಿಜಿಟಲೀಕರಣ ಹಾಗೂ ಡ್ರೋನ್ ಸಮೀಕ್ಷೆಯಿಂದ ಮುಂದಿನ ವರ್ಷ 1000 ಕೋಟಿ ರೂ.ದಂಡ ಸಂಗ್ರಹದ ಗುರಿ ಹೊಂದಲಾಗಿದೆ. ಕಳೆದ ವರ್ಷ ದಂಡ ಶುಲ್ಕದ ಪ್ರಮಾಣ ಕೇವಲ 37 ಕೋಟಿಯಾಗಿತ್ತು. ಅಕ್ರಮ ಗಣಿಗಾರಿಕೆಯಿಂದ ಹಾಗೂ ವೈಜ್ಞಾನಿಕ ಸಮೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರದ ಹಣ ಖೋತಾ ಆಗುತ್ತಿತ್ತು. ಆದರೆ ಈ ಬಾರಿ ಬರೋಬ್ಬರಿ 3000 ರೂ. ಕೋಟಿ ದಂಡದ ಗುರಿ ಹೊಂದಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

 ಸಮೀಕ್ಷೆ ತೃಪ್ತಿಕರವಾಗಿರಲಿಲ್ಲ

ಸಮೀಕ್ಷೆ ತೃಪ್ತಿಕರವಾಗಿರಲಿಲ್ಲ

ಈ ಮೊದಲು ಕ್ವಾರಿಗಳನ್ನು ಖುದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದರು. ಆದರೆ ಅದು ತೃಪ್ತಿಕರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಆಧಾರಿತ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಡ್ರೋನ್ ಮೂಲಕ ಕ್ವಾರಿಗಳ ನಡೆದ ಮಟ್ಟವನ್ನು ಹಾಗೂ ಡಿಜಿಪಿಎಸ್ ನಿಂದ ಕ್ವಾರಿ ಗಡಿಗಳನ್ನು ಗುರುತಿಸಲಾಗುವುದು.

ಕೊಡಗಿನ ಜನರ ರಕ್ಷಣೆಗೆ ಬೆಂಗಳೂರು ಹುಡುಗರ ಡ್ರೋನ್

 ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿದೆ

ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿದೆ

ತದನಂತರದಲ್ಲಿ ಉದ್ದೇಶಿತ ಕ್ವಾರಿಗಳಲ್ಲಿ ಎಷ್ಟು ಗಣಿಗಾರಿಕೆ ನಡೆದಿದೆ ಎಂಬುದನ್ನು ಡಿಜಿಟಲ್ ತಂತ್ರಜ್ಞಾನದಿಂದ ಲೆಕ್ಕ ಹಾಕಲಾಗುವುದು. ಈ ಕ್ರಮದಿಂದ ಗುತ್ತಿಗೆದಾರರು ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಸಿದರೆ ಸುಲಭವಾಗಿ ಕಂಡುಹಿಡಿಯಬಹುದು. ಆ ಮೂಲಕ ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿದೆ.

 ಪಂಚಾಯಿತಿ ವ್ಯಾಪ್ತಿಯಲ್ಲೂ ಮಾಹಿತಿ ಲಭ್ಯ

ಪಂಚಾಯಿತಿ ವ್ಯಾಪ್ತಿಯಲ್ಲೂ ಮಾಹಿತಿ ಲಭ್ಯ

ಮುಂದಿನ ದಿನಗಳಲ್ಲಿ ಈ ದತ್ತಾಂಶಗಳನ್ನು ಕ್ರೋಢೀಕರಿಸಿ ಮ್ಯಾಪಿಂಗ್ ಮಾಡಲಾಗುವುದು ಆಗ ಪಂಚಾಯಿತಿ ವ್ಯಾಪ್ತಿಯಲ್ಲೂ ಈ ಮಾಹಿತಿ ಲಭ್ಯವಾಗಲಿದೆ.

"ಡ್ರೋನ್" ಬಳಸಿ ಬೆಳೆ ಪರಿಸ್ಥಿತಿ ಸರ್ವೆ : ಸಚಿವ ಶಿವಶಂಕರರೆಡ್ಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mining and Geology department has been conducting digital auditing to minimize illegal mining in state. This is the first time in our karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more