ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಎನ್ ಐಇ ವಿಶ್ವವಿದ್ಯಾಲಯ ಸ್ಥಾಪನೆ:ಡಿಎ ಪ್ರಸನ್ನ ನೂತನ ಕುಲಪತಿ

|
Google Oneindia Kannada News

ಮೈಸೂರು, ಮಾರ್ಚ್ 11: ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ (ಎನ್‌ ಐಇ) ಸಂಸ್ಥೆಯು ಎನ್‌ಐಇ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಸಂಸ್ಥಾಪಕ ಕುಲಪತಿಯನ್ನಾಗಿ ಡಿ.ಎ.ಪ್ರಸನ್ನ ಅವರನ್ನು ನೇಮಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಬಾಟ್ನಿ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ (ಮಾರ್ಚ್.10) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ನಂಜನಗೂಡು ತಾಲ್ಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿನ ಅಡಕನಹಳ್ಳಿ ಗ್ರಾಮದ ಬಳಿ 50 ಎಕರೆ ಪ್ರದೇಶದಲ್ಲಿ ವಿ.ವಿ ತಲೆಎತ್ತಲಿದೆ. ಒಟ್ಟು 200 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿದ್ದು, ಭೂಮಿ ಖರೀದಿಗಾಗಿ 45 ಕೋಟಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧಾರಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಡಿ.ಎ.ಪ್ರಸನ್ನ ಅವರು ಎನ್‌ಐಇ ಕಾಲೇಜಿನ ಹಿರಿಯ ವಿದ್ಯಾರ್ಥಿ. ಇವರು 1968ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ವಿಪ್ರೊ ಉಪಾಧ್ಯಕ್ಷರಾಗಿ, ಮಣಿ ಪಾಲ್ ವಿಶ್ವವಿದ್ಯಾಲಯದ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ವಿಭಾಗದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸನ್ನ ಯಶಸ್ವಿ ಉದ್ಯಮಿಯೂ ಆಗಿದ್ದು, ನಮ್ಮ ವಿಶ್ವವಿದ್ಯಾಲಯವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

National Institute of Engineering has established NIE University

 ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ, ಆಹಾ ಆ 72 ಗಂಟೆಗಳು! ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ, ಆಹಾ ಆ 72 ಗಂಟೆಗಳು!

ನಂತರ ಪ್ರಸನ್ನ ಅವರು ಮಾತನಾಡಿ, ವಿ.ವಿ.ಯ ಕಾಮಗಾರಿಗಳು 3 ವರ್ಷದೊಳಗೆ ಮುಗಿಯಲಿವೆ. ಈಗಾಗಲೇ ಎನ್‌ಐಇಯಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಸರ್ಕಾರದ ನಿಯಮಾವಳಿಗಳಿಗೆ ತಕ್ಕಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಭರ್ತಿ ಮಾಡಲಾಗುವುದು. ಅಂತೆಯೇ, ನಮ್ಮ ವಿ.ವಿ.ಯು ಬೋಧನೆ, ಸಂಶೋಧನೆ ಹಾಗೂ ಪ್ರಕಟಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಸದ್ಯಕ್ಕೆ ಎಂಜಿನಿಯರಿಂಗ್ ಹಾಗೂ ವಿಜ್ಞಾನ ಸಂಬಂಧಿತ ಕೋರ್ಸುಗಳು ಶುರುವಾಗಲಿವೆ. ಬಳಿಕ ವಾಣಿಜ್ಯ ಹಾಗೂ ಮಾನವಿಕ ವಿಷಯಗಳನ್ನೂ ಪರಿಚಯಿಸುವ ಚಿಂತನೆಯಿದೆ ಎಂದು ಮಾಹಿತಿ ನೀಡಿದರು.

National Institute of Engineering has established NIE University

 BWSSBಯಲ್ಲಿ ವಿವಿಧ ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ BWSSBಯಲ್ಲಿ ವಿವಿಧ ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ

ಮುಂದಿನ 10 ವರ್ಷಗಳಲ್ಲಿ ಎನ್‌ಐಇ ವಿ.ವಿ.ಯನ್ನು ದೇಶದ ಮುಂಚೂಣಿ ವಿ.ವಿ.ಗಳ ಸಾಲಿಗೆ ಸೇರಿಸಬೇಕು ಎಂಬುದು ನಮ್ಮ ಗುರಿ. ಇದಕ್ಕಾಗಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದು ಪ್ರಸನ್ನ ಅವರು ತಿಳಿಸಿದರು.

English summary
National Institute of Engineering has established NIE University.DA Prasann has been appointed as new Chancellor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X