ಬರ್ತ್ ಡೇ ಪಾರ್ಟಿಯಲ್ಲಿ ಸಿಡಿದ ಗ್ಯಾಸ್ ಬಲೂನ್: ಯುವತಿಗೆ ಗಾಯ
Recommended Video

ಬರ್ತ್ ಡೇ ಪಾರ್ಟಿಯಲ್ಲಿ ಸಿಡಿದ ಗ್ಯಾಸ್ ಬಲೂನ್: ಯುವತಿಗೆ ಗಾಯ | Oneindia Kannada
ಮೈಸೂರು, ಏಪ್ರಿಲ್ 21: ಹುಟ್ಟುಹಬ್ಬ ಆಚರಿಸುವ ಸಂಭ್ರಮದಲ್ಲಿದ್ದ ಯುವತಿ ಸ್ಪಾರ್ಕರ್ ಹಚ್ಚುವಾಗ ಗ್ಯಾಸ್ ಬಲೂನ್ ಸ್ಫೋಟಗೊಂಡ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.
ನಗರದ ಎನ್.ಆರ್. ಮೊಹಲ್ಲಾದ ನಿವಾಸಿಯಾಗಿರುವ ಸಂಜನಾ ಇತ್ತೀಚೆಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಈ ಘಟನೆ ನಡದಿದೆ. ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಇಲ್ಲಿನ ಖಾಸಗಿ ಹೊಟೇಲ್ ವೊಂದರಲ್ಲಿ ಅವರು ಬರ್ತ ಡೇಯನ್ನು ಹಲವಾರು ಜನರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿದ್ದರು. ಕೇಕ್ ಕತ್ತರಿಸುವ ಮುನ್ನ ಸ್ಪಾರ್ಕರ್ ಕ್ಯಾಂಡಲ್ ಹಚ್ಚಿದ್ದ ಸಂಜನಾ ಅವರು ಸಂಭ್ರಮ ಪಡುವ ಮೊದಲೇ ಗ್ಯಾಸ್ ಬಲೂನ್ ಸಿಡಿದ ಪರಿಣಾಮ ಅವರ ಮುಖ, ಕೈಗಳಿಗೆ ಕಿಡಿ ತಗುಲಿ ಹಲವೆಡೆ ಸುಟ್ಟಗಾಯಗಳಾದವು.

ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬರ್ತ್ ಡೇ ಸಮಯದಲ್ಲಿ ಮೋಜಿಗಾಗಿ ಸ್ಪಾರ್ಕಲ್ ಹಚ್ಚುವಾಗ ಎಚ್ಚರವಿರಲಿ.












Click it and Unblock the Notifications