ಮೈಸೂರಿನಿಂದ ಅಯೋಧ್ಯೆ ವಿಶೇಷ ರೈಲು ಸೇವೆ ಆರಂಭ: ದಿನ, ಸಮಯ, ಮಾರ್ಗ ಸಂಪೂರ್ಣ ವಿವರ ಇಲ್ಲಿದೆ

ಮೈಸೂರು, ಜನವರಿ 13: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಶ್ರೀರಾಮ ಮಂದಿರ ಲೋಕಾರ್ಪಣೆ ಮೊದಲು ಹಾಗೂ ನಂತರ ಅಯೋಧ್ಯೆಗೆ ವಿಶೇಷ ರೈಲುಗಳು ಸಂಚಾರಕ್ಕೆ ಅವಕಾಶ ನೀಡಿದೆ.

ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಾಗೂ ದೇಶದ ಪ್ರಮುಖ ನಗರಗಳಿಗೆ ವಿಶೇಷ ರೈಲು ಸಂಚಾರ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಮೈಸೂರಿನಿಂದ ವಿಶೇಷ ರೈಲು ಅಯೋಧ್ಯೆಗೆ ಸಂಚಾರ ನಡೆಸಲಿದೆ. ಅಯೋಧ್ಯೆ ಶ್ರೀರಾಮ ಮಂದಿರದ ಕಣ್ತುಂಬಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಅಯೋಧ್ಯೆ ಕಡೆಗೆ ಸಾಗುತ್ತಿದ್ದಾರೆ. ಕರ್ನಾಟದಿಂದಲೂ ಸಾವಿರಾರು ಭಕ್ತರು ಶ್ರೀರಾಮ ಮಂದಿರ ನೋಡಲು ಅಯೋಧ್ಯೆಗೆ ತೆರಳಲು ಸಜ್ಜಾಗುತ್ತಿದ್ದಾರೆ.

Mysuru To Ayodhya Special Train Starts From February 4th

ಮೈಸೂರು ಹಾಗೂ ಸುತ್ತಮುತ್ತಲಿನ ಸ್ಥಳದಿಂದ ಅಯೋಧ್ಯೆಗೆ ತೆರಳಬೇಕು ಎಂದುಕೊಂಡವರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿ ನೀಡಲಾಗಿದೆ. ಫೆಬ್ರವರಿ 4ರಂದು ಮೈಸೂರಿನಿಂದ ಅಯೋಧ್ಯೆಗೆ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಫೆಬ್ರವರಿ 4ರಂದು ಮೈಸೂರಿನಿಂದ ಅಯೋಧ್ಯೆಗೆ ರೈಲು ಸೇವೆ ಆರಂಭವಾಗಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪ್‌ ಸಿಂಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮೈಸೂರು-ಅಯೋಧ್ಯೆ ರೈಲಿನ ವಿವರ

ಫೆಬ್ರವರಿ 4ರಂದು ರೈಲ್ವೆ ಸಮಯ 00:15ಗೆ ಮೈಸೂರಿನಿಂದ ಹೊರಡಲಿರುವ ಈ ರೈಲು ಬೆಳಗ್ಗೆ 3:15ಕ್ಕೆ ಎಸ್‌ಎಮ್‌ವಿಟಿ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ. 4:00ಕ್ಕೆ ಬೆಂಗಳೂರಿನಿಂದ ಹೊರಡಲಿರುವ ರೈಲು 5:18ಕ್ಕೆ ತುಮಕೂರು ತಲುಪಲಿದ್ದು, ಅಲ್ಲಿಂದ 5:20ಕ್ಕೆ ಹೊರಡಲಿದೆ. ಬೆಳಗ್ಗೆ 7:00ಕ್ಕೆ ಅರಸಿಕೆರೆ ಜಂಕ್ಷನ್‌ಗೆ ತೆರಳಲಿರುವ ರೈಲು, ಅಲ್ಲಿಂದ 7:10ಕ್ಕೆ ಹೊರಡಲಿದೆ. 7:35ಕ್ಕೆ ಕಡೂರಿಗೆ ತಲುಪಲಿರುವ ರೈಲು 7:37ಕ್ಕೆ ಅಲ್ಲಿಂದ ಹೊರಡಲಿದೆ. ಬಳಿಕ ಬಿರೂರು ಜಂಕ್ಷನ್‌ಗೆ ತಲುಪಲಿರುವ ರೈಲು ಅಲ್ಲಿಂದ 7:45ಕ್ಕೆ ಹೊರಡಲಿದೆ. ಬಳಿಕ ಸುದೀರ್ಘ ಎರಡೂವರೆ ದಿನಗಳ ಪ್ರಯಾಣದ ಬಳಿಕ ಫೆಬ್ರವರಿ 7ರಂದು ಈ ವಿಶೇಷ ರೈಲು ಅಯೋಧ್ಯೆ ತಲುಪಲಿದೆ.

Mysuru To Ayodhya Special Train Starts From February 4th

ಮೈಸೂರಿನಿಂದ ಅಯೋಧ್ಯೆಗೆ 2,894 ಕಿಲೋಮೀಟರ್‌ ದೂರವಿದ್ದು, ಸುಮಾರು 60:40 ಗಂಟೆಗಳ ರೈಲು ಸಂಚಾರ ಬೇಕಾಗುತ್ತದೆ. ಮತ್ತೆ ಈ ವಿಶೇಷ ರೈಲು ಫೆಬ್ರವರಿ 7ರ ಸಂಜೆ ರೈಲು ಸಮಯ 21:20ಕ್ಕೆ ಅಯೋಧ್ಯೆಯಿಂದ ಹೊರಡಲಿರುವ ಈ ರೈಲು ಎರಡು ದಿನಗಳ ಪ್ರಯಾಣದ ಬಳಿಕ ಫೆಬ್ರವರಿ 9ರಂದು ಮೈಸೂರು ತಲುಪಲಿದೆ. ಮೈಸೂರಿನಿಂದ ಅಯೋಧ್ಯೆಗೆ ಫೆಬ್ರವರಿ 18ರಂದು ಕೂಡ ಈ ವಿಶೇಷ ರೈಲು ಸೇವೆ ಇರಲಿದ್ದು, ಅಯೋಧ್ಯೆಯಿಂದ ಫೆಬ್ರವರಿ 21ರಮದು ವಾಪಸ್‌ ಆಗಲಿದೆ. 20 ಸ್ಲೀಪರ್‌ ಹಾಗೂ 2 ಗಾರ್ಡ್‌ ಕೋಚ್‌ ಸೇರಿದಂತೆ ಒಟ್ಟು 22 ಆಸನಗಳ ರೈಲು ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+