ದೊಡ್ಡ ಪರದೆಯಲ್ಲಿ ಸಿದ್ದು ಅಭಿಮಾನಿಗಳಿಂದ 'ವೀಕೆಂಡ್' ವೀಕ್ಷಣೆ
ಮೈಸೂರು,ಜೂನ್ 25: ಝೀ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸೀನರಾಗಿದ್ದರು. ಮುಖ್ಯಮಂತ್ರಿಗಳ ತವರಿನ ಜನ ಅವರ ಕಾರ್ಯಕ್ರಮವನ್ನು ಮೈಸೂರಿನ ಟಿ.ಕೆ.ಲೇ ಔಟ್ ನ ಮಾರುತಿ ಟೆಂಟ್ ಸರ್ಕಲ್ ನಲ್ಲಿ ಬಿಗ್ ಸ್ಕ್ರೀನ್ ಅಳವಡಿಸಿ ವೀಕ್ಷಿಸಿದರು.
ಮಖ್ಯಮಂತ್ರಿ ಸಿದ್ದರಾಮಯ್ಯನವರ ಬಾಲ್ಯ, ಯೌವ್ವನ, ಅವರ ಕಾಲೇಜು ದಿನಗಳು, ಸಹಪಾಠಿಗಳು, ಸ್ನೇಹಿತರು, ರಾಜಕೀಯ ಜೀವನಗಳ ಕುರಿತು ತಿಳಿಯುವ ಕುತೂಹಲ ಬಹುತೇಕ ಎಲ್ಲರಲ್ಲಿಯೂ ಇರುವುದು ಸಹಜ. ಅವುಗಳನ್ನು ವೀಕ್ಷಿಸುವ ತವಕ ಅವರ ಹುಟ್ಟೂರಿನ ಜನತೆಯಲ್ಲೂ ಬಹಳವಾಗಿತ್ತು.

ಹೀಗಾಗಿ ರಾತ್ರಿ 9ಗಂಟೆಯಿಂದ 10.30ವರೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಕುತೂಹಲದಿಂದ ಎಳೆಯರಿಂದ ವೃದ್ಧರವರೆಗೂ ವೀಕ್ಷಿಸಿದರು. ಸ್ಥಳೀಯ ಅಭಿಮಾನಿಗಳಾದ ಗೋಪಿ ಮತ್ತು ಬಳಗ ಬಿಗ್ ಸ್ಕ್ರೀನ್ ಅಳವಡಿಸಿತ್ತು. ಕಾರ್ಯಕ್ರಮದ ಅರ್ಧಭಾಗ ಪ್ರಸಾರವಾಗಿದ್ದು, ಉಳಿದರ್ಧ ಇಂದು ಪ್ರಸಾರವಾಗಲಿದೆ.












Click it and Unblock the Notifications