ಮೈಸೂರು ಟ್ರಾಫಿಕ್ ವಾರ್ಡನ್ ನೋಂದಣಿಗೆ ಅರ್ಜಿ ಆಹ್ವಾನ
ಮೈಸೂರು, ಫೆ. 17: ನಗರದ ಟ್ರಾಫಿಕ್ ಪೊಲೀಸರಿಗೆ ಸಂಚಾರ ನಿಯಂತ್ರಣದಲ್ಲಿ ಸಹಕರಿಸಲು ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್‍ನ್ನು ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಯ ಕಾರ್ಯನಿರ್ವಹಣೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇನ್ನಷ್ಟು ನಾಗರಿಕರು ಸಂಸ್ಥೆಯಲ್ಲಿ ಹೆಸರು ನೋಂದಾಯಿಸಬೇಕೆಂದು ಮೈಸೂರು ಪೊಲೀಸ್ ಆಯುಕ್ತರು ಕೋರಿದ್ದಾರೆ.
ಸಂಸ್ಥೆಗೆ ಎರಡು ತಂಡದಲ್ಲಿ ತಲಾ 25ರಂತೆ 50 ಜನರು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ. ಮೈಸೂರು ನಗರದಲ್ಲಿನ ಸಂಚಾರ ವ್ಯವಸ್ಥೆಯ ಸುಧಾರಣೆಯ ಸಲುವಾಗಿ ಸಂಚಾರಿ ಪೊಲೀಸರಿಗೆ ಸಹಕರಿಸುತ್ತಿದ್ದಾರೆ.
ವಿದ್ಯಾವಂತರು, ಕೈಗಾರಿಕೋದ್ಯಮಿಗಳು, ವೈದ್ಯರು ಹಾಗೂ ಮಹಿಳೆಯರು ಸಹ ನೋಂದಾಯಿಸಿಕೊಂಡಿದ್ದಾರೆ. ಸಂಸ್ಥೆಯವರು ಸಂಚಾರ ನಿಯಂತ್ರಣ ಕಾರ್ಯದಲ್ಲಿ ಸಹಕರಿಸುವುದರ ಜೊತೆಗೆ 2015ನೇ ವರ್ಷದ ಗಣರಾಜ್ಯೋತ್ಸವದ ರಾಷ್ಟ್ರೀಯ ಕಾರ್ಯಕ್ರಮದ ಕವಾಯಿತಿನಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸಂಸ್ಥೆಗೆ ಸದಸ್ಯರಾಗಲು ಬಯಸುವವರು ಅರ್ಜಿಯನ್ನು ಜೆ.ಎಲ್.ಬಿ. ರಸ್ತೆಯಲ್ಲಿರುವ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ಅವರಣದಲ್ಲಿರುವ ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್ ಸಂಸ್ಥೆಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಫೆ. 24ರೊಳಗೆ ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್ ಸಂಸ್ಥೆಯ ಕಚೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳಿರಬೇಕು.
1. ಭಾರತೀಯನಾಗಿರಬೇಕು
2. ಮಯೋಮಿತಿ 18 ರಿಂದ 50 ವರ್ಷ
3. ಕನಿಷ್ಠ ಪಿಯುಸಿ ಅಥವಾ ತತ್ಸಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
4. ಮೈಸೂರು ನಗರದ ವಾಸಿಯಾಗಿರಬೇಕು
5. ದೈಹಿಕವಾಗಿ ದೃಢವಾಗಿರಬೇಕು, ಸಂಚಾರ ನಿಯಂತ್ರಣ ಮಾಡಲು ಸಮರ್ಥರಾಗಿರಬೇಕು
ಹೆಚ್ಚಿನ ವಿವರಗಳಿಗೆ ದೂ. ಸಂ. 8861786264 ಅಥವಾ 8880888853 ಸಂಪರ್ಕಿಸಬಹುದು.












Click it and Unblock the Notifications