ಮಧ್ಯವರ್ತಿಗಳಿಲ್ಲದೆ LL ಪಡೆಯಲು ಮೈಸೂರು ಪೊಲೀಸರ ಸಲಹೆ

ಮೈಸೂರು, ಜನವರಿ 10 : ಮೈಸೂರು ನಗರದ ಆರ್‍ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಹಾಗೂ ಅರ್ಹರಿಗೆ ಕಲಿಕಾ ಚಾಲನಾ(LL) ಪರವಾನಗಿ ಕೊಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಅದರನ್ವಯ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಪೊಲೀಸರೇ ಮುಂದೆನಿಂತು ಕಲಿಕಾ ಪರವಾನಗಿ ನೀಡುವ ಕಾರ್ಯ ಆರಂಭಿಸಲಾಗಿದೆ.

ನಗರದ ಆರ್‍ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಹಾಗೂ ಅರ್ಹರಿಗೆ ಚಾಲನಾ ಕಲಿಕಾ ಪರವಾನಗಿ ಕೊಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹೊಸ ಯೋಜನೆ ಯೊಂದನ್ನು ರೂಪಿಸಿದೆ. ಅದರನ್ವಯ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಪೊಲೀಸರೇ ಮುಂದೆ ನಿಂತು ಕಲಿಕಾ ಪರವಾನಗಿ ನೀಡುವ ಕಾರ್ಯ ಆರಂಭವಾಯಿತು. ನಗರದ ಪಶ್ಚಿಮ ಆರ್‍ಟಿಒ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ನಗರ ಪೊಲೀಸ್ ಇಲಾಖೆ ಸಂಚಾರ ವಿಭಾಗದ ಎಸಿಪಿ ಕೆ.ಎನ್.ಮಾದಯ್ಯ ಕಲಿಕಾ ಚಾಲನಾ ಪರವಾನಗಿ ಕೊಡಿಸುವ ಮೂಲಕ ಕಾರ್ಯಕಮಕ್ಕೆ ಚಾಲನೆ ನೀಡಿದರು.

ಸಂಕ್ರಾಂತಿ ವಿಶೇಷ ಪುಟ

Mysuru: Police explain importance of having LL

ಇದೇ ವೇಳೆ ಜಂಟಿಯಾಗಿ ನಡೆದ ವಾಹನ ಚಾಲನಾ ಪರವಾನಗಿ ಅಭಿಯಾನದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಪಶ್ಚಿಮ) ವ್ಯಾಪ್ತಿಗೆ ಒಳಪಡುವ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಎಲ್ಲಾ ಅವಶ್ಯಕ ದಾಖಲಾತಿಗಳೊಂದಿಗೆ ಕಚೇರಿಗೆ ಹಾಜರಾಗಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸಿ ಸರಿಯಾದ ದಾಖಲಾತಿಗಳನ್ನು ಹೊಂದಿರುವವರಿಗೆ ಕಲಿಕಾ ಚಾಲನಾ ಪರವಾನಗಿಯನ್ನು ನಿಯಮಾನುಸಾರ ಕೊಡಿಸಲು ಕ್ರಮ ಕೈಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+