ಅರಮನೆ ದೀಪಾಲಂಕಾರಕ್ಕೆ ಎಲ್‌ಇಡಿ ಬಲ್ಬ್ ಬಳಸಲ್ಲ

ಮೈಸೂರು, ಜ. 20: ನಗರದ ಬಹುದೊಡ್ಡ ಆಕರ್ಷಣೆ ಒಡೆಯರ್ ಬಾಳಿದ, ಆಳಿದ ಅರಮನೆ. ಹಗಲಲ್ಲಿ ರಾಜವೈಭವವನ್ನು ತೋರಿಸಿದರೆ, ರಾತ್ರಿ ಸಮಯದಲ್ಲಿ ವಿದ್ಯುತ್‌ ಅಲಂಕಾರದಿಂದ ಕಂಗೊಳಿಸುತ್ತದೆ. ಆದರೆ, ಈ ವಿದ್ಯುತ್ ಅಲಂಕಾರಕ್ಕಾಗಿ ವೆಚ್ಚವಾಗುತ್ತಿರುವ ಹಣ, ಅದಕ್ಕಿಂತಲೂ ಮುಖ್ಯವಾಗಿ ಖರ್ಚಾಗುತ್ತಿರುವ ವಿದ್ಯುತ್ ಪ್ರಮಾಣ ಆತಂಕ ತರುತ್ತದೆ.

ಪ್ರಸ್ತುತ ಈ ಅರಮನೆಯಲ್ಲಿ 96,000 ಪ್ರಕಾಶಮಾನವಾದ ಬಲ್ಬ್‌ಗಳಿವೆ. ವಿದ್ಯುತ್ ಅಲಂಕಾರಕ್ಕಾಗಿ ಪ್ರತಿ ತಿಂಗಳು ವೆಚ್ಚವಾಗುತ್ತಿರುವ ಹಣ 5ರಿಂದ 6 ಲಕ್ಷ ರು. ದಸರಾ ಸಮಯದಲ್ಲಿ ಇನ್ನೂ 2 ಲಕ್ಷ ರೂ. ಹೆಚ್ಚು ವೆಚ್ಚವಾಗುತ್ತದೆ. [ಒಡೆಯರ್ ಉತ್ತರಾಧಿಕಾರಿ ಗೊಂದಲಕ್ಕೆ ತೆರೆ?]

palace

ಬಂಗಾರದ ಬಣ್ಣ ಬೇಕು : ಇದನ್ನು ತಪ್ಪಿಸಲು ಅರಮನೆ ಆಡಳಿತ ಮಂಡಳಿ ಸಾಂಪ್ರದಾಯಿಕ ಬಲ್ಬ್‌ ತೆಗೆದು ಎಲ್‌ಇಡಿ ಬಲ್ಬ್ ಉಪಯೋಗಿಸಲು ತೀರ್ಮಾನಿಸಿತ್ತು. ಆದರೆ, ಎಲ್‌ಇಡಿ ಬಲ್ಬ್‌ ಪ್ರಸ್ತುತ ಬಿಳಿ ಬಣ್ಣದಲ್ಲಿ ಮಾತ್ರ ಸಿಗುತ್ತಿದೆ. ಬಂಗಾರ ಬಣ್ಣದ ಎಲ್‌ಇಡಿ ಬಲ್ಬ್‌ ಸಿಗುತ್ತಿಲ್ಲ. ಆದ್ದರಿಂದ ಮೈಸೂರು ಅರಮನೆಗೆ ಅಗತ್ಯವಾಗಿರುವ ಬಂಗಾರದ ಬಣ್ಣ ಹೊರಹೊಮ್ಮುವುದು ಸಾಧ್ಯವಿಲ್ಲದ ಕಾರಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ಅರಮನೆ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. [ಒಬಾಮಾಗೆ ಮೈಸೂರು ಪಂಚೆ]

ಅಲ್ಲದೆ, ಎಲ್‌ಇಡಿ ಬಲ್ಬ್‌ಗಳು ಸಾಮಾನ್ಯ ಬಲ್ಬ್‌ಗಿಂತ ಕಡಿಮೆ ಬಾಳಿಕೆಯುಳ್ಳದ್ದು. ಮೈಸೂರು ಅರಮನೆಯಲ್ಲಿ ಪ್ರತಿವರ್ಷ ಸುಮಾರು 15 ಸಾವಿರ ಬಲ್ಬ್‌ಗಳನ್ನು ಬದಲಾಯಿಸಲಾಗುತ್ತದೆ. ಮಂಗಗಳ ಜಿಗಿದಾಟ, ಹಕ್ಕಿಗಳು ಕುಳಿತುಕೊಳ್ಳುವ ಕಾರಣದಿಂದಲೂ ಬಲ್ಬ್‌ಗಳು ಒಡೆಯುತ್ತಿರುತ್ತವೆ. ಆದ್ದರಿಂದ ಪದೇ ಪದೆ ಎಲ್‌ಇಡಿ ಬಲ್ಬ್ ಬದಲಾಯಿಸುವುದು ವೆಚ್ಚದಾಯಕವಾಗುತ್ತದೆ. ಅರಮನೆಯ ಒಳಾಂಗಣದಲ್ಲಿ ಸಾಧ್ಯವಿರುವೆಡೆ ಎಲ್‌ಇಡಿ ಬಲ್ಬ್ ಲಗತ್ತಿಸಲಾಗಿದೆ. [ಅಂಬಾವಿಲಾಸ ಅರಮನೆ ಅಭಿವೃದ್ಧಿ]

ಶೀಘ್ರ ಉತ್ಪಾದನೆ ಅಗತ್ಯ : ಕೇಂದ್ರ ಸರ್ಕಾರ ಈಗಾಗಲೇ ವಿದ್ಯುತ್ ಉಳಿತಾಯಕ್ಕಾಗಿ ಸಾಮಾನ್ಯ ಬಲ್ಬ್‌ಗಳ ಉತ್ಪಾದನೆ ನಿಲ್ಲಿಸಲು ತೀರ್ಮಾನಿಸಿದೆ. 2015ರಿಂದ 100 ವ್ಯಾಟ್, 2016ಕ್ಕೆ 60 ವ್ಯಾಟ್ ಹಾಗೂ 2017ಕ್ಕೆ 40 ವ್ಯಾಟ್ ಬಲ್ಬ್ ಉಪಯೋಗ ನಿಲ್ಲಿಸಲು ತೀರ್ಮಾನಿಸಲಾಗಿದೆ. ಅಷ್ಟರೊಳಗೆ ಎಲ್‌ಇಡಿ ಬಲ್ಬ್‌ಗಳನ್ನು ಉತ್ಪಾದಕ ಕಂಪನಿಗಳು ವಿವಿಧ ಬಣ್ಣಗಳಲ್ಲಿ ಉತ್ಪಾದಿಸುವ ಅಗತ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+