ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ

ಮೈಸೂರು, ನವೆಂಬರ್ 22 : ಮೈಸೂರು- ಮಂಗಳೂರು ನಡುವೆ ವಿಮಾನ ಸೇವೆ ಡಿಸೆಂಬರ್ 10ರಿಂದ ಆರಂಭವಾಗಲಿದೆ. ಮೈಸೂರು ನಗರದಲ್ಲಿ ಕರಾವಳಿ ಭಾಗದ ಸುಮಾರು 70 ಸಾವಿರ ಜನರಿದ್ದು, ವಿಮಾನ ಹಾರಾಟದಿಂದ ಅನುಕೂಲವಾಗಲಿದೆ.

ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ವಿಮಾನ ಹಾರಾಟವನ್ನು ನಡೆಸುತ್ತಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರ ಮಂಗಳೂರು-ಮೈಸೂರು ನಡುವೆ ವಿಮಾನ ಹಾರಾಟಕ್ಕೆ ಅಕ್ಟೋಬರ್ 25ರಿಂದಲೇ ಅನುಮತಿ ನೀಡಿತ್ತು. ಆದರೆ, ಕಾರಣಾಂತರಗಳಿಂದಾಗಿ ಡಿಸೆಂಬರ್‌ನಲ್ಲಿ ವಿಮಾನ ಹಾರಾಟ ಆರಂಭವಾಗುತ್ತಿದೆ.

9ಐ-532 ವಿಮಾನ ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಡಲಿದ್ದು, 12.15ಕ್ಕೆ ಮಂಗಳೂರು ತಲುಪಲಿದೆ. 9ಐ-533 ಸಂಖ್ಯೆಯ ವಿಮಾನ ಮಂಗಳೂರಿನಿಂದ 12.40ಕ್ಕೆ ಹೊರಡಲಿದ್ದು, 1.40ಕ್ಕೆ ಮೈಸೂರಿಗೆ ಆಗಮಿಸಲಿದೆ.

ವಾರದಲ್ಲಿ 4 ದಿನ ಸಂಚಾರ

ವಾರದಲ್ಲಿ 4 ದಿನ ಸಂಚಾರ

ಮೈಸೂರು-ಮಂಗಳೂರು ವಿಮಾನ ವಾರದಲ್ಲಿ ನಾಲ್ಕು ದಿನಗಳ ಕಾಲ ಹಾರಾಟ ನಡೆಸಲಿದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಮೈಸೂರು ವಿಮಾನ ನಿಲ್ದಾಣ

ಮೈಸೂರು ವಿಮಾನ ನಿಲ್ದಾಣ

ಮೈಸೂರಿನ ಮಂಡಕಹಳ್ಳಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿ 10 ವರ್ಷಗಳು ಕಳೆದಿವೆ. ಈಗ ಮಂಗಳೂರಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಮೈಸೂರಿನಲ್ಲಿರುವ ಕರಾವಳಿ ಭಾಗದ ಜನರು ತವರಿಗೆ ಮರಳಲು ಬಹಳ ಕಷ್ಟಪಡಬೇಕಿತ್ತು. ಈಗ ಮೈಸೂರಿನ ಜನರು ಮಂಗಳೂರಿಗೆ ಹೋಗಿ ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸಲು ಅನುಕೂಲವಾಗಲಿದೆ.

ಹಲವು ವರ್ಷಗಳ ಒತ್ತಾಯ

ಹಲವು ವರ್ಷಗಳ ಒತ್ತಾಯ

ಮೈಸೂರಿನಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿತ್ತು. ಕರಾವಳಿ ಭಾಗದ ಹಲವಾರು ಸಂಘ ಸಂಸ್ಥೆಗಳು ಸಹ ಮೈಸೂರಿಗೆ ವಿಮಾನ ಸೇವೆ ಆರಂಭಿಸುವಂತೆ ಬೇಡಿಕೆ ಇಟ್ಟಿದ್ದವು. ಈಗ ಬೇಡಿಕೆಗೆ ಮನ್ನಣೆ ಸಿಕ್ಕಿದೆ.

ಪ್ರಯಾಣ ಅವಧಿ ಕಡಿತ

ಪ್ರಯಾಣ ಅವಧಿ ಕಡಿತ

ಮೈಸೂರು-ಮಂಗಳೂರು ನಡುವಿನ ದೂರ ಸುಮಾರು 255 ಕಿ. ಮೀ. ಆಗಿದೆ. ಬಸ್‌ನಲ್ಲಿ ಸಂಚಾರ ನಡೆಸಲು ಸಮಾರು 6 ತಾಸು, ಕಾರಿನಲ್ಲಿ ಸಂಚರಿಸಲು ಸುಮಾರು 5.30 ತಾಸು ಪ್ರಯಾಣ ಮಾಡಬೇಕಿತ್ತು. ವಿಮಾನದಲ್ಲಿ ಕೇವಲ 1 ಗಂಟೆಯಲ್ಲಿ ಸಂಚಾರ ನಡೆಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+