ಮಾಲ್ ಆಫ್ ಮೈಸೂರಿನ ಅನುಮತಿ ರದ್ದು ಮಾಡಲು ನಿರ್ಧಾರ

ಮಾಲ್ ನಿರ್ಮಾಣದ ವೇಳೆ, ಮಲ್ಟಿಲೆವೆಲ್ ಪಾರ್ಕಿಂಗ್ ಮಾಡುತ್ತೇವೆ ಎಂದು ಅನುಮತಿ ಪಡೆದು ಸಿಂಗಲ್ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಿರುವ ಆರೋಪ.

ಮೈಸೂರು, ಮಾರ್ಚ್ 7: ನಗರದ ಮಾಲ್ ಆಫ್ ಮೈಸೂರಿನ ಕಟ್ಟಡ ಟೌನ್ ಪ್ಲಾನಿಂಗ್ ಸಮಿತಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕಟ್ಟಡದ ಅನುಮತಿ ರದ್ದು ಮಾಡಲು ಸೋಮವಾರ ಪಾಲಿಕೆಯಲ್ಲಿ ನಡೆದ ಟೌನ್ ಪ್ಲಾನಿಂಗ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಟೌನ್ ಪ್ಲಾನಿಂಗ್ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಲ್ ಆಫ್ ಮೈಸೂರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಮಲ್ಟಿಲೆವೆಲ್ ಪಾರ್ಕಿಂಗ್ ಮಾಡುತ್ತೇವೆ ಎಂದು ಅನುಮತಿ ಪಡೆದು ಸಿಂಗಲ್ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ.

Mysuru Mahanagara Palike decides to cancel license of Mall of Mysuru

450 ವಾಹನಗಳಿಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸುವುದಾಗಿ ಹೇಳಿ ಕೇವಲ 150 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಶೆಲ್ಲಾರ್ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ.

ಆದರೂ ನಿಮಯವನ್ನು ಗಾಳಿಗೆ ತೂರಿ ವಾಣಿಜ್ಯಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದಲ್ಲದೆ ಸಾರ್ವಜನಿಕರಿಂದ ಶುಲ್ಕವನ್ನೂ ಸಂಗ್ರಹಿಸಲಾಗುತ್ತಿದೆ. ಟೌನ್ ಪ್ಲಾನಿಂಗ್ ಸಮಿತಿಯ ನಿಯಮದ ಪ್ರಕಾರ ಸರ್ಕಾರದ ಸುತ್ತೋಲೆಯಂತೆ ಶೇ.5ರಷ್ಟು ಉಲ್ಲಂಘನೆ ಮಾಡಿದರೆ ಸಿಆರ್ ರದ್ದು ಮಾಡಬಹುದು.

ಆದರೆ, ಮಾಲ್ ಆಫ್ ಮೈಸೂರು ಶೇ.17ಕ್ಕಿಂತಲೂ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸಿಆರ್ ರದ್ದು ಮಾಡಿ ಮೂರು ಪಟ್ಟು ದಂಡ ವಸೂಲಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಕೆಂಪಣ್ಣ, ಅಶ್ವಿನಿ ಅನಂತು, ಹೆಚ್ಚುವರಿ ಆಯುಕ್ತ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+