ಕಬಿನಿ ಹಿನ್ನೀರು ಭೂಮಿ ನುಂಗಣ್ಣರಿಗಿಲ್ಲ ಕಡಿವಾಣ

ಮೈಸೂರು, ಡಿಸೆಂಬರ್. 04: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರು ಪ್ರದೇಶಗಳು ರೆಸಾರ್ಟ್ ಗಳಾಗಿ ಬದಲಾಗುತ್ತಿವೆ. ಇವಕ್ಕೆ ಯಾವ ಕಾನೂನು-ಕಟ್ಟಳೆಗಳಿಲ್ಲ. ಅಧಿಕಾರಿಗಳ ಬೆಂಬಲದೊಂದಿಗೆ ವ್ಯವಹಾರ ಅವ್ಯಾಹತ.

ಪ್ರಾಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ಈ ತಾಲೂಕು ರೆಸಾರ್ಟ್ ಮಾಲೀಕರಿಗೆ, ಭೂಮಾಫಿಯಾದವರಿಗೆ ಹಣ ತರುವ ಕಾಮಧೇನುವಾಗಿ ಮಾರ್ಪಾಡಾಗುತ್ತಿರುವುದು ದುರ್ದೈವ.

ನಿಸರ್ಗದ ಮಡಿಲಲ್ಲಿ ದಿನ ಕಳೆಯಲು ಬರುವ ಶ್ರೀಮಂತರನ್ನು ರತ್ನಕಂಬಳಿ ಹಾಸಿ ಬರಮಾಡಿಕೊಳ್ಳಲು ಖಾಸಗಿ ರೆಸಾರ್ಟ್ ಗಳು ಇಲ್ಲಿ ಹುಟ್ಟಿಕೊಳ್ಳುತ್ತಿದ್ದು, ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶಗಳು ದಂಧೆಯ ತಾಣವಾಗುತ್ತಿವೆ. ಈ ಅಕ್ರಮಗಳ ಸರಮಾಲೆಯನ್ನು ಮುಂದೆ ನೋಡಿ....

ದಿನಕ್ಕೊಂದು ಖಾಸಗಿ ರೆಸಾರ್ಟ್

ದಿನಕ್ಕೊಂದು ಖಾಸಗಿ ರೆಸಾರ್ಟ್

ಭೂಮಾಫಿಯಾದಿಂದಾಗಿ ಕಬಿನಿ ಹಿನ್ನೀರಿನ ಪ್ರದೇಶಗಳು ಸದ್ದಿಲ್ಲದೆ ಒತ್ತುವರಿಯಾಗುತ್ತಿವೆ. ಈಗಾಗಲೇ 10ಕ್ಕೂ ಹೆಚ್ಚು ಖಾಸಗಿ ರೆಸಾರ್ಟ್ ಗಳು ನಿರ್ಮಾಣವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳನ್ನು ರೆಸಾರ್ಟ್ ದಾರರು ತಮ್ಮೊಂದಿಗೆ ಶಾಮೀಲು ಮಾಡಿಕೊಂಡೊದ್ದಾರೆ.

ಸರ್ಕಾರಿ ವಿಶ್ರಾಂತಿಧಾಮ ಕೇಳೋರಿಲ್ಲ

ಸರ್ಕಾರಿ ವಿಶ್ರಾಂತಿಧಾಮ ಕೇಳೋರಿಲ್ಲ

ಈಗಾಗಲೇ ಇಲ್ಲಿ ಸರ್ಕಾರಿ ಅಧೀನದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಒಡೆತನದ ಅತ್ಯಂತ ಹಳೆಯದಾದ(ಮದರ್ ಕ್ಯಾಂಪ್) ಖ್ಯಾತಿಯ ಜಂಗಲ್ ಲಾಡ್ಜಸ್ ರೆಸಾರ್ಟ್ ಇದೆಯಾದರೂ ಪ್ರವಾಸಿಗರು ಇತ್ತ ಸುಳೀಯುತ್ತಿಲ್ಲ. ಖಾಸಗಿ ರೆಸಾರ್ಟ್ ಗಳು ನೀಡುವ "ಖಾಸಗಿ" ಬದುಕಿಗೆ ಮನಸೋಲುತ್ತಿದ್ದಾರೆ.

ಹಣ ಕೊಟ್ರೇ ಆತಿಥ್ಯ ಬಲು ಜೋರು!

ಹಣ ಕೊಟ್ರೇ ಆತಿಥ್ಯ ಬಲು ಜೋರು!

ಇಲ್ಲಿಗೆ ಬರುವ ಅತಿಥಿಗಳಿಗೆ ಶ್ರೀಮಂತ ಅತಿಥ್ಯ ದೊರೆಯುತ್ತದೆ. ಸ್ವಿಮ್ಮಿಂಗ್, ಸಫಾರಿ, ಊಟ ಹೀಗೆ ಸುಮಾರು 50 ಸಾವಿರದಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಇಂತಹ ಖಾಸಗಿ ರೆಸಾರ್ಟ್ ಗಳು ಸುಮಾರು 1ರಿಂದ 10 ಎಕರೆ ಪ್ರದೇಶದವನ್ನು ಒತ್ತುವರಿ ಮಾಡಿಕೊಂಡಿವೆ. ಇದಕ್ಕೆ ರಾಜಸ್ವ-ನಿರೀಕ್ಷಕರೊಬ್ಬರ ಕೃಪಾಕಟಾಕ್ಷವೂ ಇದೆ ಎಂಬುವುದು ಸ್ಥಳೀಯರ ಆರೋಪ.

ನಿಯಮ ಗಾಳಿಗೆ

ನಿಯಮ ಗಾಳಿಗೆ

ಜಲಾಶಯದ ನೀರು ನಿಲ್ಲುವ ಸ್ಥಳದಿಂದ 120 ಮೀಟರ್ ದೂರದಲ್ಲಿ ರೆಸಾರ್ಟ್ ನಿರ್ಮಾಣ ಮಾಡಬೇಕು ಎಂಬ ನಿಯಮವಿದ್ದರೂ ಇಲ್ಲಿ ಅದನ್ನು ಗಾಳಿಗೆ ತೂರಲಾಗಿದೆ. ರೆಸಾರ್ಟ್ ಗಳಲ್ಲಿನ ಈಜುಕೊಳಗಳನ್ನು ಶುದ್ಧಗೊಳಿಸಲು ರಾಸಾಯನಿಕ ಬಳಸಲಾಗುತ್ತಿದೆ. ಇದೇ ನೀರನ್ನು ನೇರವಾಗಿ ಜಲಾಶಯಕ್ಕೆ ಬಿಡಲಾಗುತ್ತಿದೆ.

ದರ ಪಟ್ಟಿ ನೋಡಿ

ದರ ಪಟ್ಟಿ ನೋಡಿ

ಸರ್ಕಾರಿ ಒಡೆತನದ 21 ಮದರ್ ಕ್ಯಾಂಪ್ ಖ್ಯಾತಿಯ ಜಂಗಲ್ ಲಾಡ್ಜಸ್ ರೆಸಾರ್ಟ್, ಕಾರಾಪುರದ ರೆಸಾರ್ಟ್ ಐತಿಹಾಸಿಕ ಹಿನ್ನಲೆ ಹೊಂದಿದ್ದು, ಇದರೊಳಗೆ ಮಹರಾಜರ ಬಂಗಲೆಯಿದೆ. ಲ್ಲಿ ಪ್ರತಿವ್ಯಕ್ತಿಗೆ ಒಂದು ದಿನ ಉಳಿದುಕೊಳ್ಳಲು 8 ರಿಂದ 10 ಸಾವಿರ, ವಿದೇಶಿಯರಾದರೆ 15 ರಿಂದ 20 ಸಾವಿರ ಹಣ ನೀಡಬೇಕು. ಆದರೆಮ ಖಾಸಗಿ ರೆಸಾರ್ಟ್ ಗಳಲ್ಲಿ ಓರ್ವ ವ್ಯಕ್ತಿಗೆ ಒಂದು ದಿನಕ್ಕೆ 25 ರಿಂದ 60 ಸಾವಿರದವರೆಗೂ ಚಾರ್ಜ್ ಮಾಡಲಾಗುತ್ತದೆ.

ಭೂ ಮಾಫಿಯಾಕ್ಕೆ ಅಂತ್ಯ

ಭೂ ಮಾಫಿಯಾಕ್ಕೆ ಅಂತ್ಯ

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚರಗೊಂಡು ಅಕ್ರಮ ತಡೆಯಬೇಕಿದೆ. ಇಲ್ಲದಿದ್ದರೆ ಭೂ ಮಾಫಿಯಾ ಇಡೀ ಕಬಿನಿಯನ್ನೇ ನುಂಗಿ ನೀರು ಕುಡಿಯುವ ದಿನ ದೂರವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+