ರಾತ್ರಿಯಾದರೆ ಸಾಕು ಮೈಸೂರಿಗಿಳಿಯುತ್ತೆ ಸ್ವರ್ಗ!

ಮೈಸೂರು, ಸೆಪ್ಟೆಂಬರ್ 19 : ನವರಾತ್ರಿ ಆರಂಭಗೊಳ್ಳುವ ದಸರೆಯಲ್ಲಿ ರಿಂದ ಮೈಸೂರಿನಲ್ಲಿ 'ರಾತ್ರಿ'ಗೆ ಬಹುಪಾಲು ರಜೆ! 'ಬೆಳ(ಗಿ)ಕಿ'ಗೆ ಡಬ್ಬಲ್ ಡ್ಯೂಟಿ! ಇದೇನಪ್ಪಾ ಅಚ್ಚರಿಯಾಯಿತೆ ? ಹೌದು ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆಗಳಿದೆ.

ನಂತರ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆವರೆಗೆ ಅಷ್ಟೂದಿನ ಮೈಸೂರು ವಿದ್ಯುತ್ ದೀಪಗಳಿಂದ ಝಗ ಮಗಿಸಲಿದೆ. ಅರಮನೆ ಸೇರಿದಂತೆ ಪ್ರಮುಖ ರಸ್ತೆಗಳು, ಪಾರಂಪರಿಕ ಕಟ್ಟಡಗಳು ದೀಪಾಲಂಕಾರಗೊಂಡು ಅರ್ಧಪಾಲು ರಾತ್ರಿಯನ್ನು ಮರೆಯಾಗಿಸಲಿವೆ.

ವೈಭವದ ದಸರಾ ವಿಶೇಷ ಪುಟ

ನಾಡಹಬ್ಬ ಮೈಸೂರು ದಸರಾ ಎಂದಾಕ್ಷಣ ಝಗಮಗಿಸುವ ವಿದ್ಯುತ್ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನವನಗಳು , ಸಿಂಗರಿಸಿದ ಪಾರಂಪರಿಕ ಕಟ್ಟಡಗಳು , ವೃತ್ತಗಳು ಹಾಗೂ ರಸ್ತೆಗಳು ಲಕ್ಷಾಂತರ ಜನರ ಮನಸೂರೆಗೊಳ್ಳಲಿದೆ .

ದೀಪಗಳ ಹಬ್ಬ ದೀಪಾವಳಿಗಿಂತಲೂ ದಸರಾ ದೀಪಾಲಂಕಾರ ಅತ್ಯಾಕರ್ಷಕ. ಇದಕ್ಕೆ ಇಂಬು ನೀಡುವಂತೆ ಈ ಬಾರಿ ಮೈಸೂರಿನಲ್ಲಿ ವಿದ್ಯುತ್ ದೀಪಗಳ ಚಿತ್ತಾರದಲ್ಲಿ ಅರಳಲಿರುವ ನರ್ತಕಿಯರು ಪ್ರವಾಸಿಗರನ್ನು ಸ್ವಾಗತಿಸಲಿದ್ದಾರೆ.

ನಾಡ ಹಬ್ಬದ ಸಾಂಪ್ರದಾಯಿಕ ವೈಭವದಲ್ಲಿ ಅರಮನೆ ನಗರಿಯ ಬೀದಿ ಬೀದಿಗಳು ನವ ವಧುವಿನಂತೆ ಕಂಗೊಳಿಸುತ್ತಿರುತ್ತದೆ. ಆ ಮೂಲಕ ನವರಾತ್ರಿಯ ಸಂಭ್ರಮದಲ್ಲಿ ಮೈಸೂರು ನಗರವನ್ನು ನೋಡುವುದೇ ಒಂದು ಅಂದ.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

ಪ್ರತಿ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗೂ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರಗು ನೀಡಿ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಮೈಸೂರನ್ನು ವಿದ್ಯುತ್ ನಿಂದ ಪ್ರಕಾಶಿಸುವಂತೆ ಮಾಡಲು ಸೆಸ್ಕ್ ಸಜ್ಜಾಗಿದೆ.

ವಿಶೇಷ ಬಲ್ಬ್ ಅಳವಡಿಗೆ

ವಿಶೇಷ ಬಲ್ಬ್ ಅಳವಡಿಗೆ

ಸೆಸ್ಕ್ ಅನುಷ್ಠಾನಗೊಳಿಸಿದ ಕೆಲ ಯೋಜನೆಗಳಿಂದ ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರದಲ್ಲಿ ವಿದ್ಯುತ್ ಬಳಕೆ ಹಾಗೂ ವೆಚ್ಚದಲ್ಲಿ ದಾಖಲೆ ಪ್ರಮಾಣದ ಉಳಿತಾಯವಾಗಿತ್ತು. ಈ ಬಾರಿ ವಿಶೇಷವಾದ ಬಲ್ಬ್ ಗಳನ್ನು ಅಳವಡಿಸುವುದಲ್ಲದೆ, ವಿದ್ಯುತ್ ಉಳಿತಾಯ ಮಾಡಲು ಯಶಸ್ವಿ ಯೋಜನೆಯನ್ನು ದಸರಾ ಉತ್ಸವದಲ್ಲೂ ಮುಂದುವರಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ದಸರಾ ದೀಪಾಲಂಕಾರ ಸಮಿತಿ ನಿರ್ಧರಿಸಿದೆ. ಎಲ್ಲಿ ಡಿ ಬಲ್ಬ್ ಗಳನ್ನೇ ಇಡೀ ನಗರದಲ್ಲಿ ಅಳವಡಿಸಲಾಗಿದೆ.

ದೀಪಾಲಂಕೃತಗೊಳ್ಳುವ ವೃತ್ತಗಳು

ದೀಪಾಲಂಕೃತಗೊಳ್ಳುವ ವೃತ್ತಗಳು

ವಿಶೇಷವಾಗಿ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಜಯಚಾಮರಾಜೇಂದ್ರ ವೃತ್ತ , ಬಸವೇಶ್ವರ ವೃತ್ತ , ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಫೌಂಟೇನ್ ವೃತ್ತ, ಮುಡಾ ವೃತ್ತ, ರೈಲ್ವೆ ನಿಲ್ದಾಣ ಸಮೀಪವಿರುವ ಬಾಬು ಜಗಜೀವನ್ ರಾಮ್ ವೃತ್ತ, ಆಯುರ್ವೇದ ವೃತ್ತ, ಮೈಸೂರು ಬೆಂಗಳೂರು ರಸ್ತೆಯ ಕಮಾನು ಗೇಟು, ಅಗ್ರಹಾರ ವೃತ್ತ ಸೇರಿ ನಗರದ ಪ್ರಮುಖ ವೃತ್ತಗಳನ್ನು ದೀಪಾಲಂಕೃತ ಗೊಳಿಸಲಾಗಿದೆ

ರಸ್ತೆ - ರಸ್ತೆಗಳಲ್ಲಿ ಬೆಳಕಿನ ಚಿತ್ತಾರ

ರಸ್ತೆ - ರಸ್ತೆಗಳಲ್ಲಿ ಬೆಳಕಿನ ಚಿತ್ತಾರ

ಪ್ರತಿ ವರ್ಷದಂತೆ ಅಲಂಕೃತಗೊಳ್ಳುವ ಜಂಬೂ ಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆ ನಗರದ ರೈಲ್ವೆ ನಿಲ್ದಾಣದಿಂದ ಇರ್ವಿನ್ ರಸ್ತೆ, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ನಂಜನಗೂಡು ರಸ್ತೆ, ಹರ್ಷ ರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆಎಲ್ ಬಿ ರಸ್ತೆ, ಮೈಸೂರು - ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕೃತಗೊಳ್ಳಲಿದೆ.

ಝಗಮಗಿಸುವ ಸರಕಾರಿ ಕಟ್ಟಡಗಳು

ಝಗಮಗಿಸುವ ಸರಕಾರಿ ಕಟ್ಟಡಗಳು

ಸರಕಾರಿ ಕಟ್ಟಡಗಳಿಗೂ ಈ ಬಾರಿ ದೀಪಾಲಂಕಾರ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರಕಾರಿ ಕಚೇರಿ, ಪಾರಂಪರಿಕ ಕಟ್ಟಡಗಳಿಗೂ ಬೆಳಕಿನ ಸಂಭ್ರಮವಾಗಿದೆ. ಈಗಾಗಲೇ ನಗರದ ಹಾಗೂ ಹೊರವಲಯದಲ್ಲಿ ಸಾರ್ವಜನಿಕ ಉದ್ಯಾನವನಗಳಿಗೂ ದೀಪಾಲಂಕಾರ ಮಾಡುವ ಕೆಲಸ ನಡೆಯುತ್ತಿದೆ. ರಾತ್ರಿ 7 ಗಂಟೆಗೆ ಅರಮನೆಗೆ ವಿದ್ಯುತ್ ದೀಪ ಹಾಕುತ್ತಿದ್ದಂತೆ, ಇಡೀ ನಗರ ಕ್ಷಣಾರ್ಧದಲ್ಲಿ ಬೆಳಕಿನ ಮಯವಾಗಲಿದೆ. ಮೊದಲೆಲ್ಲ ಜಂಬೂ ಸವಾರಿ ಸಾಗುವ ಮಾರ್ಗಗಳಿಗೆ ದೀಪಾಲಂಕಾರ ಸೀಮಿತವಾಗಿತ್ತು . ಆದರೆ ಈ ಬಾರಿ ವಿಶೇಷವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+