ಮೈಸೂರು ಪಾಲಿಕೆ ಪಕ್ಷೇತರ ಸದಸ್ಯ ಸಮಿ ಕಾಂಗ್ರೆಸ್ ಮಡಿಲಿಗೆ
ಮೈಸೂರು, ನವೆಂಬರ್ 15: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿರುವ ಸಮಿ ಅವರು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಾಲಿಕೆಯ ಮಾಜಿ ಸದಸ್ಯರಾದ ಸಲೀಂ ಹಾಗೂ ಅಜ್ಜು ಅವರು ಇದೇ ವೇಳೆ ಕಾಂಗ್ರೆಸ್ ಸೇರಿದರು. ಸಚಿವರಾದ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಹರ್ಷದ್ ಅವರು ಉಪಸ್ಥಿತರಿದ್ದರು.
ವಿಧಾನಸಭೆ ಚುನಾವಣೆ ಮುಗಿದ ಮೇಲೆ ಹಾಗೂ ಉಪಚುನಾವಣೆ ಸಂದರ್ಭದಲ್ಲಿ ಆಪರೇಷನ್ ಕಮಲ, ಕಾಂಗ್ರೆಸ್ ಪಕ್ಷದವರು ಬಿಜೆಪಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಸಾಕಷ್ಟು ನಡೆಸಿದ್ದರು. ಕೆಲವು ವಿಫಲವಾದರೆ ಇನ್ನೂ ಕೆಲವು ಪ್ರಯತ್ನಗಳು ಕಾಂಗ್ರೆಸ್‌ಗೆ ಫಲವನ್ನೇ ನೀಡಿತ್ತು.

ಇದೀಗ ಪಾಲಿಕೆ ಸದಸ್ಯರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದ್ದು, ಮೈಸೂರು ಪಾಲಿಕೆ ಸದಸ್ಯ ಸಮಿ ಜತೆಗೆ ಇನ್ನೆರಡು ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.











Click it and Unblock the Notifications