ಪತಿಯಿಂದ ಕಿರುಕುಳ: ಮೈಸೂರಿನಲ್ಲಿ ಮಗುವಿನೊಂದಿಗೆ ತಾಯಿ ನಾಪತ್ತೆ
ಮೈಸೂರು, ಸೆಪ್ಟೆಂಬರ್ 4: ಮಹಿಳೆಯೊಬ್ಬರ ತಮ್ಮ್ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಮೈಸೂರಿನ ಹೂಟ್ಗಳ್ಳಿಯಲ್ಲಿ ಸೆ.3 ರಂದು ನಡೆದಿದೆ.
ಹಿಟ್ಟಿನ ಮಿಲ್ಲಿನ ಮಾಲೀಕ ಮಂಜುನಾಥ್ ಎಂಬುವವರ ಪತ್ನಿ ನಿಖಿತಾ (23) ಪತಿಯ ಮನೆಯಿಂದ ಹೊರಡುವ ಮುನ್ನ ತಮ್ಮ ತಾಯಿಗೆ ವಿಡಿಯೋ ಕಾಲ್ ಮಾಡಿದ್ದು, ಅದರಲ್ಲಿ ತಮ್ಮ ಪತಿ ಮತ್ತು ಅವರ ಕುಟುಂಬ ತನಗೆ ಕಿರುಕುಳ ನೀಡುತ್ತಿದ್ದರು ಎಂದು ದುಃಖ ತೋಡಿಕೊಂಡಿದ್ದರು.

ನಿಖಿತಾ ಅವರ ತಾಯಿ ಹೇಳುವ ಪ್ರಕಾರ, ನಿಖಿತಾ ಅವರಿಗೆ ಪತಿಯ ಮನೆಯಲ್ಲಿ ನಿರಂತರವಾಗಿ ಕಿರುಕುಳ ನೀಡಿ ಆಕೆಗೆ ಮನೆಯಿಂದ ಹೊರಹೋಗದೆ ಬೇರೆ ವಿಧಿಯಿಲ್ಲ ಎಂಬಂಥ ಸನ್ನಿವೇಶ ನಿರ್ಮಿಸಲಾಗಿತ್ತು.
ಆಕೆಯನ್ನು ಪತಿಯ ಕುಟುಂಬಸ್ಥರ್ಯಾರೂ ಹುಡುಕುವ ಪ್ರಯತ್ನ ಮಾಡಲಾರರು ಎಂದು ಆಕೆಯ ತಾಯಿ, ಮೈಸೂರಿನ ವಿಜಯನಗರ ಪೊಲೀಸರ ಮೊರೆ ಹೋಗಿದ್ದಾರೆ.
ನಿಖಿತಾ ಮತ್ತು ಅವರ ಎರಡು ವರ್ಷದ ಮಗು ಧ್ರುವ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.












Click it and Unblock the Notifications