ಸುಧಾಮೂರ್ತಿ ಚಿತ್ರವನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

ಆಗಸ್ಟ್ 19, ಮೈಸೂರು: ಸಿನಿಮಾ ಸ್ಟಾರ್ ಗಳ, ಪ್ರಸಿದ್ಧ ಆಟಗಾರರ ಅಥವಾ ತಮ್ಮಿಷ್ಟದವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವವರನ್ನು ಕಂಡಿದ್ದೇವೆ. ಆದರೆ ಮೈಸೂರಿನ ಈ ಯುವಕ ಇನ್ಫೊಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರ ಚಿತ್ರವನ್ನೇ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಆ.19 ಸುಧಾಮೂರ್ತಿಯವರ ಹುಟ್ಟುಹಬ್ಬ. ಹೀಗಾಗಿ ಅವರ ಅಭಿಮಾನಿಯಾದ ಮೈಸೂರಿನ ಲೋಕೇಶ್ ಸುಧಾಮೂರ್ತಿಯವರನ್ನು ವಿಶಿಷ್ಟವಾಗಿ ಅಭಿನಂದಿಸಿದ್ದಾರೆ.

ಸುಧಾಮೂರ್ತಿಯರ, ಅವರ ಸಾಮಾಜಿಕ ಕಾರ್ಯಗಳ ಮೇಲೆ ಅಭಿಮಾನ ಇಟ್ಟುಕೊಂಡಿರುವ ಮೈಸೂರಿನ ಜೆ.ಸಿ ನಗರದ ನಿವಾಸಿ ಲೋಕೇಶ್, ತನ್ನ ಬಲಗೈ ಮೇಲೆ ಮತ್ತು ಎದೆ ಮೇಲೆ ಸುಧಾಮೂರ್ತಿಯವರ ಟ್ಯಾಟೋ ಹಾಕಿಸಿದ್ದಾರೆ.

Mysuru fan sporting tattoo of Infosys founder Sudhamurthy

ಸುಧಾಮೂರ್ತಿಯವರ ಹುಟ್ಟುಹಬ್ಬದ ಅಂಗವಾಗಿ ಲೋಕೇಶ್ ಚಾಮುಂಡಿಬೆಟ್ಟಕ್ಕೆ ಬರಿಗಾಲಲ್ಲಿ ಹೋಗಿ ಅವರಿಗೆ ಒಳಿತಾಗುವಂತೆ ಪೂಜೆ ಮಾಡಿಸಿದ್ದಾರೆ.

ಈ ಕುರಿತು ಮಾತನಾಡಿದ ಲೋಕೇಶ್, "ನನ್ನ ಅಮ್ಮನಂತೆಯೇ ಸುಧಾಮೂರ್ತಿಯವರನ್ನು ಪ್ರೀತಿಸುತ್ತೇನೆ. ಸಾಮಾಜಿಕ ಕಾಳಜಿ, ಕಷ್ಟದಲ್ಲಿರುವರಿಗೆ ನೆರವಾಗುವ ಮನಸ್ಸು, ಅವರ ಸರಳತೆ ಎಲ್ಲವೂ ನನಗೆ ಸ್ಫೂರ್ತಿ. ನಾನು ಬೆಳಗ್ಗೆ ಎದ್ದ ಕೂಡಲೇ ಅವರ ಫೋಟೋ ನೋಡಿಯೇ ಕೆಲಸ ಆರಂಭಿಸುತ್ತೇನೆ" ಎನ್ನುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+