Lok Sabha Election 2024: ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮೈಸೂರು ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜೂ.4ರಂದು ಬೆಳಗ್ಗೆ 7ರಿಂದ ಲೋಕಸಭಾ ಚುನಾವಾಣೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಮತ ಎಣಿಕೆ ಟೇಬಲ್‌ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕ, ಒಬ್ಬ ಮತ ಎಣಿಕೆ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ಕಾರ್ಯ ನಿರ್ವಹಿಸಲಿದ್ದು, ಒಟ್ಟು 160 ಎಣಿಕೆ ಮೇಲ್ವಿಚಾರಕರು, 187 ಮಂದಿ ಎಣಿಕೆ ಸಹಾಯಕರು, 171 ಮಂದಿ ಮತ ಎಣಿಕೆ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ ಎಂದರು.

Mysuru District Administration Prepared for Lok Sabha Election 2024 Vote Counting

8 ಕ್ಷೇತ್ರಗಳ ಪೈಕಿ ಮಡಿಕೇರಿ ಕ್ಷೇತ್ರದ 273 ಮತಗಟ್ಟೆಗಳಿಗೆ 20, ವಿರಾಜಪೇಟೆಯ 273 ಮತಗಟ್ಟೆಗಳಿಗೆ 20, ಪಿರಿಯಾಪಟ್ಟಣ ಕ್ಷೇತ್ರದ 235 ಮತಗಟ್ಟೆಗಳಿಗೆ 17, ಹುಣಸೂರು ಕ್ಷೇತ್ರದ 274 ಮತಗಟ್ಟೆಗಳಿಗೆ 20, ಚಾಮುಂಡೇಶ್ವರಿ ಕ್ಷೇತ್ರದ 343 ಮತಗಟ್ಟೆಗಳಿಗೆ 25, ಕೃಷ್ಣರಾಜ ಕ್ಷೇತ್ರದ 265 ಮತಗಟ್ಟೆಗಳಿಗೆ 19, ಚಾಮರಾಜ ಕ್ಷೇತ್ರದ 248 ಮತಗಟ್ಟೆಗಳಿಗೆ 18, ನರಸಿಂಹರಾಜ ಕ್ಷೇತ್ರದ 291 ಮತಗಟ್ಟೆಗಳಿಗೆ 21 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 20,92,222 ಮತದಾರರಿದ್ದು, 14,77,571 ಮಂದಿ ಹಕ್ಕು ಚಲಾಯಿಸಿದ್ದು, ಶೇ.70.62ರಷ್ಟು ಮತದಾನವಾಗಿದೆ. ಸೇವಾ ಮತದಾರರ ಅಂಚೆ ಮತಪತ್ರದಲ್ಲಿ 2,088 ಹಂಚಿಕೆ ಮಾಡಿದ್ದು, ಇದುವರೆಗೂ 1012 ಮಂದಿಯಿಂದ ಸ್ವೀಕೃತವಾಗಿದೆ. ಜೂ.4ರಂದು ಬೆಳಗ್ಗೆ 8 ಗಂಟೆ ತನಕವೂ ಸ್ವೀಕೃತವಾಗುವ ಅಂಚೆ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುವುದು ಎಂದರು.

ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳನ್ನು ಬೆಳಗ್ಗೆ 7.30ಕ್ಕೆ ತೆರೆಯಲಾಗುವುದು. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ ಎಣಿಕೆ ಪ್ರಾರಂಭವಾದ ನಂತರ ವಿದ್ಯುನ್ಮಾನ ಮತ ಯಂತ್ರಗಳನ್ನು ಎಣಿಕೆ ಕೊಠಡಿಗಳಿಗೆ ತಂದು ಎಣಿಕೆ ಕಾರ್ಯವನ್ನು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+